ನ್ಯಾಯಾಲಯ ತಡೆಯಾಜ್ಞೆ ತಾಲ್ಲೂಕು ಆಡಳಿತ ಉಲ್ಲಂಘನೆ ಆರೋಪ
1 min readನ್ಯಾಯಾಲಯ ತಡೆಯಾಜ್ಞೆ ತಾಲ್ಲೂಕು ಆಡಳಿತ ಉಲ್ಲಂಘನೆ ಆರೋಪ
ಸುದ್ದಿಗೋಷ್ಠಿಯಲ್ಲಿ ಭೋವಿ ಸಂಘದ ಸುರೇಶ್ ಆರೋಪ
ನಿವೇಶನಗಳ ಹಂಚಿಕೆ ವಿಚಾರದಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು ನ್ಯಾಯಲಯದ ತಡೆಯಾಜ್ಞೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಭೋವಿ ಸಂಘದ ಸುರೇಶ್ ಆರೋಪಿಸಿದರು.
ನಿವೇಶನಗಳ ಹಂಚಿಕೆ ವಿಚಾರದಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು ನ್ಯಾಯಲಯದ ತಡೆಯಾಜ್ಞೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಭೋವಿ ಸಂಘದ ಸುರೇಶ್ ಆರೋಪಿಸಿದರು. ಗುಡಿಬಂಡೆ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್, ನ್ಯಾಯಾಲಯದ ತಡೆಯಾಜ್ಞೆ ಪಾಲಿಸದೆ ಅನ್ಯಾಯ ಮಾಡುತ್ತಿದ್ದಾರೆ. ಕಡೇಹಳ್ಳಿ ಗ್ರಾಮದ ಸರ್ವೆ ೧೩೧ರ ಜಮೀನು ನಿವೇಶನಗಳ ಹಂಚಿಕೆಗೆ ಆಶ್ರಯ ಯೋಜನೆಯಡಿ ಜಮೀನು ಮಂಜೂರು ಮಾಡಲಾಗಿದೆ ಎಂದರು.
ಮ0ಜೂರಾಗಿರುವ ಜಮೀನು ರಾಜ್ಯ ಉಚ್ಛ ನ್ಯಾಯಾಲಯ ಸಂಬ0ಧಪಟ್ಟ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮುಂದಿನ ಆದೇಶದಂತೆ ನಿವೇಶನ ನಿರ್ಮಿಸಲು ತಡೆ ಕೋರಿ ಆದಿಲಕ್ಷಮ್ಮ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಅದನ್ನು ಪಾಲಿಸದೆ ತೊಂದರೆ ನೀಡುತ್ತಿರುವುದಾಗಿ ಆರೋಪಿಸಿದರು.
ಸುಮಾರು 20ವರ್ಷಗಳಿಂದ ಕಡೇಹಳ್ಳಿ ಗ್ರಾಮದ ಸರ್ವೆ ನಂ೧೩೧ರ ಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಜೀವನ ಮಾಡುತ್ತಿದ್ದು, ಇದನ್ನು ಸಹಿಸದೆ ಜೀವ ಬೇದರಿಕೆ ಹಾಕಿ, ಒತ್ತಡ ಹೇರುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು. ವಾಸ್ತವಿಕ ವರದಿ ಮರೆಮಾಚಿ, ಸುಳ್ಳಿನ ಕಡತ ಸಿದ್ದಪಡಿಸಿ, ಒಂದೇ ದಿನದಲ್ಲಿ ತಾಲ್ಲೂಕು ತಹಶೀರ್ಲ್ದಾ ಮತ್ತು ತಾಪಂ ಇಒ ತರಾತುರಿಯಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.