ಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ
1 min readಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ
ಮೂರು ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್
ಶುದ್ಧ ನೀರಿನ ಘಟಕ ಸ್ಥಾಪಿಸುವ ಭರವಸೆ ನೀಡಿದ ಶಾಸಕ
ಚಿಕ್ಕಬಳ್ಳಾಪುರ ತಾಲ್ಲೂಕಿನ ಸಿದ್ದಗಾನಹಳ್ಳಿ, ನಾಗಸಾನಹಳ್ಳಿ ಮತ್ತು ಒಂಟೂರು ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ನಡೆಸಿದರು. ಈ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ನªಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಈವರೆಗೆ 40 ಗ್ರಾಮಗಳಲ್ಲಿ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ಪೂರ್ಣಗೊಳಿಸಿದ್ದು, ಈ ಮೂರು ಗ್ರಾಮಗಳು ಸೇರಿ ೪೩ ಹಳ್ಳಿಗಳು ಪೂರ್ಣವಾಗಿವೆ ಎಂದರು. ಸಿದ್ದಗಾನಹಳ್ಳಿಗೆ ಬಸ್ ಬರುತ್ತಿಲ್ಲ ಎಂದು ತಿಳಿಸಿದ್ದು, ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. 60 ವರ್ಷಗಳ ಹಿಂದೆ ನಿರ್ಮಣವಾದ ಶಾಲಾ ಕೊಠಡಿ ಶಿಥಿಲವಾಗಿದೆ. ಇಲ್ಲಿ ಹೊಸ ಕೊಠಡಿ ನಿರ್ಮಿಸಲಾಗುವುದು ಎಂದರು.
ಈ ಮೂರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಇದರಿಂದ ಸಮಸ್ಯೆ ಆಗುತ್ತಿತ್ತು. ರಾಮಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಜನರು ಹೋಗುತ್ತಿದ್ದರು. ಈ ಸಮಸ್ಯೆ ನಿವಾರಣೆಗಾಗಿ ನಾಗಸಾನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗುವುದು. ಒಂಟೂರಿನಲ್ಲಿ 15 ಲಕ್ಷ ವೆಚ್ಚದ ಕಾಮಗಾರಿ ನಡೆಸಲಾಗುವುದು ಎಂದರು. ಬಡವರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಬಡವರ ಕೆಲಸ ಮಾಡುವೆ. ಅಧಿಕಾರವಿರುವ ಕಾರಣ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವುದು ಮುಖ್ಯ ಉದ್ದೇಶ ಎಂದು ಹೇಳಿದರು.
ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಇಸ್ಲಾಂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವುದನ್ನು ಬಿಡಬೇಕು. ಮುಸ್ಲಿಮರು ಈ ದೇಶದ ಪ್ರಜೆಗಳು ಎಂದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಣ್ಣೀರು ಹಾಕಿದ ತಕ್ಷಣ ಮತ ಬರಲ್ಲ. ಯಾರು ಜನರ ಜೊತೆ ಬೆರೆತು ಕೆಲಸ ಮಾಡುವರೊ ಅವರನ್ನು ಜನರು ಕೈ ಹಿಡಿಯುವರು. ನಾನು ತಳಮಟ್ಟದ ರಾಜಕೀಯ ಅರ್ಥ ಮಾಡಿಕೊಂಡಿರುವ ಕಾರಣ ಗೆಲುವು ಸಾಧಿಸಿದ್ದೇನೆ ಎಂದು ಹೇಳಿದರು.
ಒನಕೆ ಓಬವ್ವ ಜಯಂತಿಗೆ ಸಚಿವರು, ಶಾಸಕರು ಗೈರಾಗಿದ್ದಕ್ಕೆ ಕೆಲವು ಮುಖಂಡರು ಅಸಮಾದಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ನಾವು ಚನ್ನಪಟ್ಟಣ ಚುನಾವಣೆ ಒತ್ತಡದಲ್ಲಿದ್ದೇವು. ಬರಲು ಕಷ್ಟ ಎಂದು ಹೇಳಿದ್ದೇವು. ಹೀಗಿದ್ದರು ಕಾರ್ಯಕ್ರಮಕ್ಕೆ ಬರದಿರುವ ಬಗ್ಗೆ ಕೆಲ ರೋಲ್ ಕಾಲ್ ಗಿರಾಕಿಗಳು ಮಾತನಾಡುತ್ತಾರೆ ಎಂದು ಶಾಸಕರು ಆರೋಪಿಸಿದರು. ಹಣ ಕೇಳಿದಾಗ ಕೊಡಲಿಲ್ಲ ಎಂದು ಕೆಲವರು ಸುಮ್ಮನೆ ಮಾತನಾಡುತ್ತಾರೆ ಎಂದರು.