ಖಾಸಗಿ ವ್ಯಕ್ತಿಗಳಿಗೆ ಸ್ಮಶಾನದಲ್ಲಿ ರಸ್ತೆಗೆ ಗ್ರಾಮಸ್ಥರ ಅಢ್ಡಿ
1 min readಖಾಸಗಿ ವ್ಯಕ್ತಿಗಳಿಗೆ ಸ್ಮಶಾನದಲ್ಲಿ ರಸ್ತೆಗೆ ಗ್ರಾಮಸ್ಥರ ಅಢ್ಡಿ
ಶ್ರೀನಿವಾಸಪುರ ತಾಲೂಕಿನ ಕಲ್ಲುಕುಂಟೆ ಗ್ರಾಮದಲ್ಲಿ ಘಟನೆ
ತಹಸೀಲ್ದಾರ್ ಏಕ ವಚನದಲ್ಲಿ ನಿಂದಿಸಿದ ಆರೋಪ
ಸಾರ್ವಜನಿಕ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿಗಳಿಗೆ ರಸ್ತೆ ಬಿಡುವುದೆಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೋಲಾರ ಜಿ¯್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ಕಲ್ಲುಕುಂಟೆ ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿಗಳು ದಾರಿ ಮಾಡಲು ಮುಂದಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ಜಮೀನುಗಳಿಗೆ ಈಗಾಗಲೇ ದಾರಿ ಇದ್ದರೂ ದುರುದ್ದಾಶದಿಂದ ಸ್ಮಶಾನದಲ್ಲಿ ದಾರಿ ಕೇಳುತ್ತಿದ್ದು, ತಾಲೂಕು ದಂಡಾಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಮಶಾನದಲ್ಲಿ ರಸ್ತೆ ವಿಚಾರವಾಗಿ ತಹಶೀಲ್ದಾರ್ ಜೊತೆ ಪೋನ್ ಮೂಲಕ ಗ್ರಾಮಸ್ಥರು ಮಾತನಾಡಿದ ವೇಳೆ, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಲ್ಲುಕುಂಟೆ ಗ್ರಾಮಕ್ಕೆ ಸರ್ವೆ ನಂಬರ್ 3ರಲ್ಲಿ ಸ್ಮಶಾನಕ್ಕೆ 3 ಎಕರೆ ಜಾಗ ಮಂಜೂರು ಮಾಡಲಾಗಿದ್ದು, ಈಗ ಸ್ಮಶಾನ ಇರುವ ಜಾಗವೂ ಸರ್ಕಾರಿ ಜಾಗವೇ ಆಗಿದೆ. ಸರ್ವೇ ನಂ 19 ರಲ್ಲಿ ಸರ್ಕಾರಿ ಖರಾಬು ದನದ ಮಂದೆ 10 ಎಕರೆ 36 ಗುಂಟೆ ಜಮೀನಿದೆ. ಯಾವುದೇ ಕಾರಣಕ್ಕೂ ಸ್ಮಶಾನ ಜಾಗವನ್ನು ಬಿಡುವುದಿಲ್ಲ ಎಂದು ಗ್ರಾಸ್ಥರು ಪಟ್ಟು ಹಿಡಿದಿದ್ದಾರೆ.
ಯಾವ ದುರುದ್ದಾಶದಿಂದ ಈ ಜಾಗವನ್ನು ಮಂಜೂರು ಮಾಡಲಾಗಿದೆ, ಅಧಿಕಾರಿಗಳು ಅವರ ಪರವಾಗಿ ಕೆಲಸ ಮಾಡುತ್ತಿರುವುದು ಯಾಕೆ ಎಂದು ಪರ್ರಶ್ನೆ ಮಾಡಿರುವ ಗ್ರಾಮಸ್ಥರು, ತಹಶೀಲ್ದಾರ್ ಸುಧೀಂದ್ರ ಅವರು ಗ್ರಾಮಸ್ಥನನ್ನು ಏಕ ವಚನದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.