ಕೊಳಚೆ ಪ್ರದೇಶಗಳ ಸ್ವಚ್ಛತೆಗೆ ಮುಂದಾದ ಉಪಾಧ್ಯಕ್ಷರು
1 min readಕೊಳಚೆ ಪ್ರದೇಶಗಳ ಸ್ವಚ್ಛತೆಗೆ ಮುಂದಾದ ಉಪಾಧ್ಯಕ್ಷರು
ಚಿಕ್ಕಬಳ್ಳಾಪುರ ನಗರದಲ್ಲಿವೆ 9 ಕೊಳಚೆ ಪ್ರದೇಶಗಳು
ತಿಂಗಳಿಗೆ ಒಮ್ಮೆಯಾದರೂ ಸ್ಲಂ ಸ್ವಚ್ಛಗೊಳಿಸಲು ಸೂಚನೆ
ಸ್ಲಂಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ
ಕೊಳಚೆ ಪ್ರದೇಶ ಎಂದರೆ ಸ್ವಚ್ಛತೆ ಇಲ್ಲದ ಜಾಗ ಎಂಬ ಕುಖ್ಯಾತಿ ಪಡೆದಿದೆ. ಹಾಗಾಗಿ ಇಂತಹ ಕುಖ್ಯಾತಿ ಅಳಿಸಿ, ಸ್ಲಂಗಳಲ್ಲಿಯೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಉಪಾಧ್ಯಕ್ಷರು ಮುಂದಾಗಿದ್ದಾರೆ. ನಗರದಲ್ಲಿರುವ ಕೊಳಚೆ ಪ್ರದೇಶಗಳ ಸ್ವಚ್ಛತೆಯ ಜೊತೆಗೆ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.
ಹೌದು, ಕೊಳಚೆ ಪ್ರದೇಶ ಎಂದರೆ ಸ್ವಚ್ಛ ರಹಿತ ಪ್ರದೇಶ ಎಂಬ ಕಲ್ಪನೆ ಜನರ ಮನದಲ್ಲಿ ಮೂಡುವುದು ಸಹಜ. ಅಲ್ಲಿ ವಾಸಿಸುವ ನಿವಾಸಿಗಳು ಬಡವರೇ ಆಗಿದ್ದರೂ ಅವರು ಶ್ರಮಜೀವಿಗಳು. ಅವರಿಗೂ ಶುದ್ಧ ಪರಿಸರ ಕಲ್ಪಿಸುವುದು ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಜವಾಬ್ದಾರಿ. ಆದರೆ ಈ ಹಿಂದೆ ಯಾರೂ ಈ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಇದೀಗ ನಗರಸಭೆ ಉಪಧ್ಯಕ್ಷರಾಗಿರುವ ನಾಗರಾಜ್ ಅವರು ಇಂತಹ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 9 ಕೊಳಚೆ ಪ್ರದೇಶಗಳಿವೆ. ಈ ಪ್ರದೇಶದಲ್ಲಿ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಗೆ ಹೆಚ್ಚು ಗಮನ ನೀಡಿದ ನಿದರ್ಶಗಳೇ ಇಲ್ಲ. ಜೊತೆಗೆ ಈ ಪ್ರದೇಶಗ ಸ್ವಚ್ಛತೆಗೂ ಗಮನ ಹರಿಸುವುದು ಅಷ್ಟಕಷ್ಟೇ ಎಂಬ ಸ್ಥಿತಿ ಇದೆ. ಇವೆಲ್ಲವನ್ನೂ ಅಳಿಸಿ, ಕೊಳಚೆ ಪ್ರದೇಶದಲ್ಲಿಯೂ ಉತ್ತಮ ಪರಿಸರ ರೂಪಿಸುವ ಜೊತೆಗೆ ಈ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು ಉಪಾಧ್ಯಕ್ಷರು ಮುಂದಾಗಿದ್ದಾರೆ.
ಇ0ದು ನಗರದ ಎರಡು ಕೊಳಚೆ ಪ್ರದೇಶಗಳಿಗೆ ನಗರಸಭೆ ಆರೋಗ್ಯ ನಿರೀಕ್ಷಕರು, ಮೇಸ್ತಿ ಅವರನ್ನೊಳಗೊಂಡ ತಂಡದೊ0ದಿಗೆ ಉಪಾಧ್ಯಕ್ಷರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ವೇಳೆ ಮಾತನಾಡಿ, ಕಳೆದ ಮೂರು ದಶಕಕ್ಕೂ ಹಿಂದಿನಿ0ದಲೂ ನಗರದಲ್ಲಿ ಕೊಳಚೆ ಪ್ರದೇಶಗಳಿವೆ, ಈ ಕೊಳಚೆ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳ ಬಗ್ಗೆ ಕಾಳಜಿ ವಹಿಸಬೇಕಿದೆ ಎಂಬ ಉ್ಧದ್ದೆಶದಿಂದ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತಿರುವುದಾಗಿ ಹೇಳಿದರು.
ತಾವು ಅಧಿಕಾರಕ್ಕೆ ಬಂದು ೫೦ದಿನ ಕಳೆದಿದೆ, ವಾರಕ್ಕೆ ಒಮ್ಮೆಯಾದರೂ ಪ್ರತಿ ಕೊಳಚೆ ಪ್ರದೇಶ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೊಳಚೆ ಪ್ರದೇಶದ ಜನರೂ ಸ್ವಚ್ಛ ಪರಿಸರದಲ್ಲಿ ಜೀವಿಸಬೇಕು ಎಂಬ ಕಾಳಜಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಶಾಸಕರಾಗಿದ್ದ ಸುಧಾಕರ್ ಅವರು ನಗರದ ಕೊಳಚೆ ಪ್ರದೇಶದಲ್ಲಿ ನಿವೇಶನ ಹೊಂದಿರುವ ಬಡವರಿಗಾಗಿ 250ಕ್ಕೂ ಹೆಚ್ಚು ಮನೆಗಳನ್ನು ಸ್ಲಂಬೋರ್ಡಿನಿ0ದ ಮಂಜೂರು ಮಾಡಿಸಿದ್ದರು. ಅವರು ಸಚಿವರಾದ ನಂತರ 700ಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿ, ಕೊಳಚೆ ಪ್ರದೇಶದಲ್ಲಿ ವಾಸಿಸುವ ಎಲ್ಲ ನಾಗರಿಕರಿಗೂ ಸೂರು ಕಲ್ಪಿಸುವ ಕೆಲಸ ಮಾಡಿರುವುದು ಅಭಿನಂದನೀಯ ಎಂದರು.
ಕೊಳಚೆ ಪ್ರದೇಶದಲ್ಲಿ ಚರಂಡಿ, ರಸ್ತೆ, ಸಿಸಿ ರಸ್ತೆಗಳ ನಿರ್ಮಾಣವನ್ನು ಸುಧಾಕರ್ ಅವರು ಮಾಡಿಸಿದ್ದಾರೆ, ಬಡವರಿಗಾಗಿ ನಗರ ವ್ಯಾಪ್ತಿಯಲ್ಲಿ 19 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ, ನಗರದ ಅಭಿವೃದ್ಧಿಯ ಬಗ್ಗೆ ಸುಧಾಕರ್ ಅವರು ಹೆಚ್ಚು ಕಾಳಜಿ ವಹಿಸಿದ್ದಾರೆ, ಅವರದೇ ಗರಡಿಯಲ್ಲಿ ನಾವು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಸಂಕಲ್ಪ ಮಾಡಿದ್ದು, ಎಲ್ಲ ನಾಗರಿಕರು ಮತ್ತು ಸದಸ್ಯರ ಸಹಕಾರ ನೀಡಬೇಕೆಂದು ಕೋರಿದರು.