ಸಾಮಾನ್ಯ ಮಹಿಳೆಯಾಗಿ ಓಬವ್ವನ ಸಾಹಸ ವರ್ಣನೀಯ
1 min readಸಾಮಾನ್ಯ ಮಹಿಳೆಯಾಗಿ ಓಬವ್ವನ ಸಾಹಸ ವರ್ಣನೀಯ
ಓಬವ್ವ ಸಂದಿಗ್ದ ಪರಿಸ್ಥಿತಿಯಲ್ಲಿ ತೋರಿದ ದಿಟ್ಟತನವೇ ಇತಿಹಾಸ
ಬಾಗೇಪಲ್ಲಿ ತಹಶಿಲ್ದಾರ್ ಮನೀಶಾ ಮಹೇಶ್ ಪತ್ರಿ ಬಣ್ಣನೆ
ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಸೈನ್ಯ ಮುತ್ತಿದಾಗ, ಓಬವ್ವ ಸಾಮಾನ್ಯ ಮಹಿಳೆಯಾಗಿ ಸಂದಿಗ್ದ ಪರಿಸ್ಥಿತಿಯಲ್ಲಿ ತೋರಿದ ದಿಟ್ಟತನ, ತೆಗೆದುಕೊಂಡ ನಿರ್ಧಾರ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಓಬವ್ವ ಅವರ ಗುಣಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಹಶೀಲ್ದಾರ್ ಮನಿಷಾ ಮಹೇಶ್ ಎಸ್. ಪತ್ರಿ ಹೇಳಿದರು.
ಬಾಗೇಪಲ್ಲಿ ಪಟ್ಟಣದ ತಹಶಿಲ್ದಾರ್ ಸಭಾಂಗಣದಲ್ಲಿ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿಯಿಂದ ವೀರ ವನಿತೆ ಒನಕೆ ಓಬವ್ವಳ ಜಯಂತಿ ಹಿನ್ನಲೆಯಲ್ಲಿ ಓಬವ್ವ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬಾಗೇಪಲ್ಲಿ ತಹಸೀಲ್ದಾರ್ ಮನೀಷಾ ಮಹೇಶ್ ಪತ್ರಿ, ಅಂದು ಚಿತ್ರದುರ್ಗ ಕೋಟೆಯನ್ನು ಹೈದರಾಲಿ ಸೈನಿಕರು ಮುತ್ತಿದಾಗ, ವಿಷಯ ತಿಳಿದು ಮನೆಯಲ್ಲಿದ್ದ ಒನಕೆಯನ್ನೆ ಆಯುಧವಾಗಿ ಬಳಸಿ ನೂರಾರು ಸೈನಿಕರ ರುಂಡಗಳನ್ನು ಛಿದ್ರಗೊಳಿಸಿ, ಕೋಟೆಯನ್ನು ರಕ್ಷಿಸಿದ ವೀರ ವನಿತೆ ಒನಕೆ ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದರು.
ರಾಜ್ಯ ರಕ್ಷಣೆಗೆ ಜೀವದ ಹಂಗು ತೊರೆದು ಒನಕೆ ಹಿಡಿದು ಶತ್ರು ಸೈನಿಕರನ್ನು ಬಗ್ಗು ಬಡಿದ ವೀರ ವನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಅದರಲ್ಲೂ ಮಹಿಳೆಯರಿಗೆ ದೈರ್ಯ ಮತ್ತು ತ್ಯಾಗದ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ಐಕ್ಯತೆಗೆ ಪಣತೊಡಬೇಕು ಎಂದು ತಹಶೀಲ್ದಾರರು ತಿಳಿಸಿದರು. ಛಲವಾದಿ ಸಮುದಾಯದ ಮುಖಂಡ ಟಿ. ರಾಮಪ್ಪ ಮಾತನಾಡಿ, ಸಮಾಜದಲ್ಲಿ ಛಲವಾದಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ರಾಜ್ಯದ ಛಲವಾದಿ ಸಮುದಾಯ ಒಗ್ಗೂಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಬಿಇಒ ಎನ್. ವೆಂಕಟೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಬಿಳ್ಳೂರು ನಾಗರಾಜು, ಸಾಕ್ಷರತೆ ಇಲಾಖೆ ಶಿವಪ್ಪ ಇದ್ದರು.