ಆಸ್ತಿ, ಆದಾಯದ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿರುವ ಅಧಿಕರಿಗಳು
1 min readಆದ್ಯತಾ ಪಡಿತರ ಚೀಟಿ ಪಡೆದ ಬಗ್ಗೆ ಸ್ಪಷ್ಟನೆ ಕೇಳಿದ ತಹಸೀಲ್ದಾರ್
ಎ.ಬಿ. ಮಂಜುನಾಥ್ ಸೇರಿ ನಾಲ್ವರಿಗೆ ನೋಟಿಸ್ ಜಾರಿ
ಆಸ್ತಿ, ಆದಾಯದ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿರುವ ಅಧಿಕರಿಗಳು
ಅವರು ನಗರಸಭಾ ಸದಸ್ಯರು, ಅಷ್ಟೇ ಅಲ್ಲ, ಚಿನ್ನದ ವ್ಯಾಪಾರ ಮಾಡೋ ಅಂಗಡಿಗಳ ಮಾಲೀಕರು. ಜೊತೆಗೆ ಹತ್ತಾರು ಎಕರೆ ಭೂಮಿ, ವಾಣಿಜ್ಯ ಕಟ್ಟಡಗಳು, ಪೆಟ್ರೋಲ್ ಬಂಕ್ ಹೊಂದಿರೋ ಉದ್ದಿಮಿಗಳು. ಆದರೂ ಅವರು ಪಡೆದಿರೋದು ಬಿಪಿಎಲ್ ಪಡಿತರ ಚೀಟಿ. ಈ ಸಂಬ0ಧ ಒಂದೇ ಕುಟುಂಬದಲ್ಲಿ 7 ಪಡಿತರ ಚೀಟಿ ಹೊಂದಿರುವ ಬಗ್ಗೆ ಸಿಟಿವಿ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಇದೀಗ ನಗರಸಭಾ ಸದಸ್ಯರ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ನಗರದ 18ನೇ ವಾರ್ಡಿನ ನಗರಸಭಾ ಸದಸ್ಯರಾಗಿರುವ ಎ.ಬಿ. ಮಂಜುನಾಥ್ ಅವರ ಕುಟುಂಬದ ನಾಲ್ವರಗಿ ಎಚಿಕ್ಕಬಳ್ಳಾಪುರ ತಹಸೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ. ಸಿಟಿವಿ ನ್ಯೂಸ್‌ನಲ್ಲಿ ಪ್ರಸಾರವಾಗಿದ್ದ ವರದಿಯ ಆದಾರದ ಮೇಲೆ ತನಿಖೆ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳು, ಸಿಟಿವಿ ನ್ಯೂಸ್ ವರದಿ ಮಾಡಿದ್ದ ವಿಚಾರ ಸತ್ಯ ಎಂಬುದನ್ನು ತನಿಖೆಯಿಂದ ಹೊರತೆಗೆದಿದ್ದಾರೆ. ಅಲ್ಲದೆ ಎಲ್ಲ ಪಡಿತರ ಚೀಟಿಗಳಿಂದಲೂ ಪ್ರತಿ ತಿಂಗಳು ಪಡಿತರ ಪಡೆಯುತ್ತಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.
ಇನ್ನು ವೀರೇಂದ್ರ ಕುಮಾರ್ ಎಂಬ 16 ವರ್ಷದ ಅಪ್ರಾಪ್ತ ಬಾಲಕನೇ ಕುಟುಂಬದ ಮುಖ್ಯಸ್ಥನಾಗಿ, ಏಕ ಸದಸ್ಯ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆಯೂ ಮಾಹಿತಿ ಪಡೆಯಲಾಗಿದ್ದು, ಸೂರಜ್, ಜಯಶ್ರೀ ಮತ್ತು ವೀರೇಂದ್ರ ಕುಮಾರ್ ಎಂಬುವರು ಎರಡೆರಡು ಪಡಿತರ ಚೀಟಿಗಳಲ್ಲಿ ಇರೋದನ್ನೂ ಆಹಾರ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ. ಈ ಸಂಬ0ಧ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ಅವರೇ ಸಿಚಿವಿ ನ್ಯೂಸ್‌ಗೆ ಮಾಹಿತಿ ನೀಡಿದ್ದು, ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆ ನಗರಸಭೆ ಸದಸ್ಯ ಎ.ಬಿ. ಮಂಜುನಾಥ್ ಅವರ ಕುಟುಂಬದ ನಾಲ್ವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಸುಬ್ರಹ್ಮಣ್ಯಾಚಾರಿ, ಎ.ಬಿ. ಮಂಜುನಾಥ್, ಕೃಷ್ಣಾಚಾರಿ ಮತ್ತು ರಮೇಶ್ ಎಂಬುವರಿಗೆ ಪ್ರಸ್ತುತ ನೋಟಿಸ್ ಜಾರಿಗೊಳಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಪಡೆದು, ಬಡವರಿಗೆ ಸಿಗಬೇಕಾದ ಆಹಾರ ಪದಾರ್ಥ ಪಡೆದಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಕೇಳಲಾಗಿದ್ದು, ಸಮರ್ಪಕ ಸ್ಪಷ್ಟನೆ ನೀಡದಿದ್ದರೆ ಬಡವರ ಆಹಾರ ಕಸಿದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ನೀಡಲಾಗಿದೆ.
ಅಲ್ಲದೆ ಪ್ರಸ್ತುತ ನೋಟಿಸ್ ಜಾರಿಗೊಳಿಸಲಾಗಿರುವ ಎಲ್ಲರ ಆಸ್ತಿ ಮತ್ತು ಆದಾಯದ ಬಗ್ಗೆಯೂ ಮಾಹಿತಿ ಕಲೆಹಾಕಲು ಮುಂದಾಗಿರುವ ಆಹಾರ ಇಲಾಖೆ ಅಧಿಕಾರಿಗಳು, ಸಂಬ0ಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು, ಅವರ ಮತ್ತು ಅವರ ಕುಟುಂಬದ ಹೆಸರಿನಲ್ಲಿರುವ ಜಮೀನು, ವಾಣಿಜ್ಯ ಮಳಿಗೆಗಳು, ಮನೆಗಳು, ಚಿನ್ನದ ಅಂಗಡಿಗಳು ಮತ್ತು ಪೆಟ್ರೋಲ್ ಬಂಕ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿದ್ದಾರೆ. ಇದರಿಂದ ಇವರ ಕುಟುಂಬದ ಆಸ್ತಿ ಮೌಲ್ಯ ಮತ್ತು ಆದಾಯ ಹೊರ ಬರಲಿದೆ ಎಂಬ ವಿಶ್ವಾಸವನ್ನು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆದು, ಬಡವರ ಆಹಾರ ಕಸಿಯುತ್ತಿದ್ದ ನಗರಸಭಾ ಸದಸ್ಯರ ಕುಟುಂಬಕ್ಕೆ ಇದು ಆಘಾತವಾಗಿದೆ. ಅಲ್ಲದೆ ಪ್ರಸ್ತುತ ಎಲ್ಲ 7 ಪಡಿತರ ಚೀಟಿಗಳನ್ನೂ ರದ್ದು ಪಡಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.