ಛಲವಾದಿ ಜನಸಮೂಹದ ಪದಾಧಿಕಾರಿಗಳ ಆಯ್ಕೆ
1 min readಛಲವಾದಿ ಜನಸಮೂಹದ ಪದಾಧಿಕಾರಿಗಳ ಆಯ್ಕೆ
ಸಂಘಟನೆಯಿ0ದ ಸಮುದಾಯ ಅಭಿವೃದ್ಧಿಗೆ ಶ್ರಮಿಸಿ
ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಸಂಘಟನೆಗಳ ಪಾತ್ರ ದೊಡ್ಡದು’ ಎಂದು ರಾಜ್ಯ ಛಲವಾದಿ ಜನಸಮೂಹ ಸಂಘದ ರಾಜ್ಯಾಧ್ಯಕ್ಷ ಶ್ಯಾಮ್ ಸುಂದರ್ ಹೇಳಿದರು. ಗೌರಿಬಿದನೂರು ನಗರದ ಪ್ರವಾಸಿ ಮಂದಿರದಲ್ಲಿ ಇಂದು ರಾಜ್ಯ ಚಲವಾದಿ ಜನಸಮೂಹ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಗೌರಿಬಿದನೂರು ನಗರದ ಪ್ರವಾಸಿ ಮಂದಿರದಲ್ಲಿ ಇಂದು ರಾಜ್ಯ ಚಲವಾದಿ ಜನಸಮೂಹ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ರಾಜ್ಯ ಛಲವಾದಿ ಜನಸಮೂಹ ಸಂಘದ ರಾಜ್ಯಾಧ್ಯಕ್ಷ ಶ್ಯಾಮ್ ಸುಂದರ್ ಮಾತನಾಡಿದರು.
ಸಂಘಟನೆ ಬಲಿಷ್ಠವಾದಷ್ಟು ಸಮಾಜಗಳು ಅಭಿವೃದ್ಧಿಯತ್ತ ಹೋಗಲು ಸಾಧ್ಯ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ತ್ರಿವಳಿ ಸೂತ್ರಗಳನ್ನು ಯಾರು ಮರೆಯಬಾರದು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಸಮಾಜದ ಶ್ರೇಯಸ್ಸು, ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.
ಗೌರಿಬಿದನೂರು ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿ, ಛಲವಾದಿ ಸಮುದಾಯಕ್ಕೆ ಐತಿಹಾಸಿಕ ಇತಿಹಾಸವಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಸಹಕಾರದಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ, ಮುಂದಿನ ತಿಂಗಳಲ್ಲಿ ತಾಲ್ಲೂಕಿನಲ್ಲಿ ಛಲವಾದಿ ಜನಸಮೂಹ ಸಂಘಟನೆಯಿAದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುತ್ತದೆ, ತಾಲ್ಲೂಕು ಅಧ್ಯಕ್ಷರಾಗಿ ಮಾಡಿ ಜವಾಬ್ದಾರಿ ನೀಡಿದ ಹಿರಿಯರ ಮಾರ್ಗದರ್ಶನದಂತೆ ಕೆಲಸ ಮಾಡುವುದಾಗಿ ಹೇಳಿದರು.
ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಜುಳಮ್ಮ, ಗೌರವಾಧ್ಯಕ್ಷರಾಗಿ ಕೆ. ನಾರಾಯಣಪ್ಪ, ಕಾರ್ಯಾಧ್ಯಕ್ಷರಾಗಿ ನರಸಿಂಹಯ್ಯ, ಉಪಾಧ್ಯಕ್ಷರಾಗಿ ಲಕ್ಷಿಪತಿ, ಶಿವಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಜಿ ಕೆ ನಾಗರಾಜ್, ಜಂಟಿ ಕಾರ್ಯದರ್ಶಿಯಾಗಿ ಜಿ ಎಲ್ ಹರೀಶ್, ಖಜಾಂಚಿಯಾಗಿ ಸೋಮಶೇಖರ್ ರೆಡ್ಡಿ, ಸಂಚಾಲಕರಾಗಿ ಶ್ರೀನಿವಾಸ ಮೂರ್ತಿ, ಸಹ ಸಂಚಾಲಕರಾಗಿ ತಿಮ್ಮರಾಜು ಮತ್ತು ಇತರೆ ನಿರ್ದೇಶಕರ ಆಯ್ಕೆ ಮಾಡಲಾಯಿತು.