ಚಿಕ್ಕಬಳ್ಳಾಪುರದಲ್ಲಿ ಸಾಹಿತ್ಯ ಉತ್ತೇಜನಕ್ಕಾಗಿ ಕವಿಗೋಷ್ಠಿ
1 min readಚಿಕ್ಕಬಳ್ಳಾಪುರದಲ್ಲಿ ಸಾಹಿತ್ಯ ಉತ್ತೇಜನಕ್ಕಾಗಿ ಕವಿಗೋಷ್ಠಿ
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನಿಂದ ಕಾರ್ಯಕ್ರಮ
ಹೂವಿನಹಡಗಲಿಯ ರಾಜ್ಯ ಬರಹಗಾರರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಘಟದಿಂದ ಚಿಕ್ಕಬಳ್ಳಾಪುರದ ವಿಶ್ವ ವಿವೇಕ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು.
ಚಿಕ್ಕಬಳ್ಳಾಪುರದಲ್ಲಿ ಇಂದು ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷೆ ಭಾಗ್ಯ ನಾಗರಾಜ್ ಬಂಜಾರ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಸಂಘದ ಅಧ್ಯಕ್ಷ ಚಲಪತಿ ಗೌಡ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸಬೇಕು, ಎಲ್ಲರೂ ಕನ್ನಡ ಬಳಸಿದರೆ ಕನ್ನಡ ಉಳಿಯಲಿದೆ ಎಂದರು. ಕವಿಯತ್ರಿ ಸರಸಮ್ಮ ಮಾತನಾಡಿ, ಮಾಡೋ ನುಡಿಯ ಬಗ್ಗೆ ವಿವರಿಸಿ, ಕಷ್ಟ ಮತ್ತು ಸುಖಗಳನ್ನು ರಚನೆ ಮಾಡುವ ಮೂಲಕ ಸಮಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಮಹಾಂತೇಶ್ ಮಾತನಾಡಿ, ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ಬಿದ್ದ ಮಳೆಯ ಬಗ್ಗೆ ಕವನ ವಾಚನ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಮೀಳಾ ಮಹಾದೇವ್ ಮಾತನಾಡಿ, ಜೀವನದ ಕಷ್ಟ ಮತ್ತು ಸುಖಗಳನ್ನು ಬರೆಯುತ್ತಾ ಹೋದಂತೆ ಬರೆಯುವ ಹವ್ಯಾಸ ತಾನಾಗಿಯೇ ಬರುತ್ತದೆ ಎಂದರು. ಕನ್ನಡ ಭಾಷೆಯ ಮೇಲೆ ಅಭಿಮಾನ ಇರಲಿ ಎಂದು ಅವರು ಕೋರಿದರು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರ ಮತ್ತು ಇತರೆ ತಾಲೂಕುಗಳಿಂದ ಆಗಮಿಸಿ ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕವಿ
ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ವಿತರಿಸಲಾಯಿತು.