ಬಾಗೇಪಲ್ಲಿ ತಾಲೂಕಿನಲ್ಲಿ ಪಶು ಚಿಕಿತ್ಸಾಲಯಗಳಿಗೆ ಬೇಕಿದೆ ಚಿಕಿತ್ಸೆ
1 min readಬಾಗೇಪಲ್ಲಿ ತಾಲೂಕಿನಲ್ಲಿ ಪಶು ಚಿಕಿತ್ಸಾಲಯಗಳಿಗೆ ಬೇಕಿದೆ ಚಿಕಿತ್ಸೆ
ಆಸ್ಪತ್ರೆ ಕಟ್ಟಡಗಳಿದ್ದರೂ ವೈದ್ಯರಿಲ್ಲದೆ ಜಾನುವಾರುಗಳಿಗೆ ಸಂಕಷ್ಟ
ಬಾಗೇಪಲ್ಲಿ ತಾಲೂಕಿನ ಬಹುತೇಕ ಪಶು ಚಿಕಿತ್ಸಾಲೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರಿಂದಾಗಿ ಪಶು ಆಸ್ಪತ್ರೆಗಳು ನಿರ್ವಹಣೆ ಇಲ್ಲದೆ ಮೂಲೆಗುಂಪಾಗಿವೆ. ಪಶು ಚಿಕಿತ್ಸಾಲಯಗಳಲ್ಲಿ ಕಟ್ಟಡಗಳು ಸೇರಿದಂತೆ ಅಲ್ಲಿನ ಮೂಲ ಸೌಲಭ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವೈದ್ಯರನ್ನ ಪ್ರಶ್ನಿಸಿದರೆ ಸಿಬ್ಬಂದಿ ಇಲ್ಲ ನಾವೇನು ಮಾಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗೂಳೂರು ಹೋಬಳಿಯ ಮಾರಗಾನಕುಂಟೆ ಗ್ರಾಮದಲ್ಲಿ ದಾನಿಗಳಿಂದ ವಿಶಾಲವಾದ ಜಾಗದಲ್ಲಿ ಪಶು ಆಸ್ಪತ್ರೆ ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. ಆ ಆಸ್ಪತ್ರೆ ಹಲವು ವರ್ಷಗಳಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ಪ್ರಸ್ತುತ ಭೂತ ಬಂಗಲೆಯ0ತಾಗಿ ಆಸ್ಪತ್ರೆ ಬಾಗಿಲು ತೆಗೆಯುವುದೇ ಅಮಾವಸ್ಯೆ, ಹುಣ್ಣಿಮೆಗೆ. ಇದರಿಂದಾಗಿ ಬಹಳಷ್ಟು ರೈತರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ ಖಾಸಗಿಯವರ ಮೇಲೆ ಅವಂಬಿಸಬೇಕಿದೆ.
ಮಾರಗಾನಕು0ಟೆ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ ಅಕ್ಕಂ ಸಕಂ ನಂಜು0ಡಪ್ಪನವರಿ0ದ ಹಲವು ದಶಕಗಳ ಹಿಂದೆಯೇ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಹಾಗೆಯೇ ವಿಶಾಲವಾದ ಜಾಗವೂ ದಾನವಾಗಿ ಈ ಆಸ್ಪತ್ರೆಗೆ ನೀಡಲಾಗಿದೆ. ಆದರೆ ಈ ಆಸ್ಪತ್ರೆಯೂ ಈಗ ನಿರ್ವಹಣೆ ಇಲ್ಲದೆ ಕಾಂಪೌ0ಡ್ ಒಳಗೆ ಸಂಪೂರ್ಣ ಮುಳ್ಳಿನ ಪೊದೆಗಳು ಸೇರಿದಂತೆ ಕಳೆ ಗಿಡಗಳಿಂದ ಸೊರಗಿ, ಹಾವು ಚೇಳುಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ. ಶೌಚಾಲಯದ ಪರಿಸ್ಥಿತಿಯಂತೂ ಶೋಚನೀಯವಾಗಿದ್ದು, ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.
ಗ್ರಾಮ ಪಂಚಾಯಿತಿಗೆ ಅಣತಿ ದೂರದಲ್ಲಿರುವ ಈ ಪಶು ಚಿಕಿತ್ಸಾಲಯದ ಆವರಣದಲ್ಲಿ ಒಮ್ಮೆಯಾದರೂ ಗ್ರಾಮ ಪಂಚಾಯತಿಯವರು ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಇದಕ್ಕೆ ಸಂಬ0ಧಪಟ್ಟ ಪಶು ವೈಧ್ಯರು ಹಲವಾರು ಗ್ರಾಮಗಳಿಗೆ ಭೇಟಿ ಮಾಡುವ ಹಿನ್ನಲೆಯಲ್ಲಿ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ಮಾತನಾಡಿ, ಜಿಲ್ಲೆ ಸಿಲ್ಕ್ ಮತ್ತು ಮಿಲ್ಕ್ಗೆ ಹೆಸರುವಾಸಿ. ಇಂತಹ ನೀಡಬೇಕಾದರೆ ಹೈನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಗೊಳಿಸಬೇಕು. ಜಾನುವಾರುಗಳ ಆರೋಗ್ಯ ಅತಿ ಮುಖ್ಯವಾಗಿದೆ. ಹಾಗಾಗಿ ಪಶು ವೈದ್ಯಕೀಯ ಸೌಲಭ್ಯಗಳು ಹೆಚ್ಚು ದೊರೆಯಬೇಕು ಎಂದರು.
ಬಾಗೇಪಲ್ಲಿ ತಾಲೂಕಿನಲ್ಲಿ ಪಶು ವೈದ್ಯರು ಇಲ್ಲದ ಕಾರಣ ಪಶು ಚಿಕಿತ್ಸಾಲಯಗಳು ಅದ್ವಾನಗಳ ಬಗ್ಗೆ ಶಾಸಕರು ಮತ್ತು ಸರ್ಕಾರ ಎಚ್ಚೆತ್ತು ತಾಲೂಕಿನ ಪಶುಗಳಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯುವ ಕ್ರಮ ಜರುಗಿಸಬೇಕು. ಜಾನುವಾರುಗಳಿಗೆ ಅಂಬ್ಯಲೆನ್ಸ್ ಆರಂಭಿಸಲಾಗಿತ್ತು. ಅದು ಎಲ್ಲಿ ಹೋಯಿತು ಎಂಬುದು ಕೂಡ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ .ಇಂತಹ ಹಲವಾರು ಕುಂದು ಕೊರತೆಗಳಿಂದ ರೈತರಿಗೆ ಸೌಲಭ್ಯ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.