ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
1 min readಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
800 ಗ್ರಾಂ ಚಿನ್ನ, 7 ಲಕ್ಷಕ್ಕೂ ಹೆಚ್ಚು ನಗದು ದೋಚಿದ ಕಳ್ಳರು
ಗ್ರಾಮದ ಮಧ್ಯೆ ಇರುವ ಮನೆಯೊಂದರಲ್ಲಿಯಾರೂ ಇಲ್ಲದ ಸಮಯ ನೋಡಿ, ಒಳ ನುಗ್ಗಿದ ಕಳ್ಳರು, ಮನೆಯ ಬೀಗ ಮುರಿದು, ಒಳ ನುಗ್ಗಿ 800 ಗ್ರಾಂ ಚಿನ್ನಾಭರಣ ಹಾಗೂ 7 ಲಕ್ಷ ನಗದು ಕದ್ದು ಪರಾರಿಯಾಗಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.
ಚಿಂತಾಮಣಿ ತಾಲೂಕಿನ ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದಲ್ಲಿ ಶನಿವಾರ ತಡರಾತ್ರಿ ಕಳವು ಪ್ರಕರಣ ನಡೆದಿದೆ. ಚಿನ್ನಸಂದ್ರ ಗ್ರಾಮದ ಭಾಷಾ ಎಂಬವರ ಮನೆಯಲ್ಲಿ ಕಳುವಾಗಿರುವುದಾಗಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಶಿವರಾಜ್ ಸಿ ಟಿವಿ ನ್ಯೂಸ್‌ಗೆ ತಿಳಿಸಿದ್ದಾರೆ. ಮನೆಯ ಬೀಗ ಮುರಿದು, ಒಳ ನುಗ್ಗಿರುವ ಕಳ್ಳರು ಬೀರುವಾ ಒಡೆದು 800 ಗ್ರಾಂ ಚಿನ್ನಾಭರಣ, 7 ಲಕ್ಷ ರುಪಾಯಿಗೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ಮನೆ ಮಾಲೀಕ ಶಬೀರ್ ತಿಳಿಸಿದ್ದಾರೆ.
ಚಿನ್ನಸಂದ್ರ ಗ್ರಾಮದ ಮಧ್ಯೆಭಾಗದಲ್ಲಿರುವ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿರುವ ವಿಚಾರ ತಾಲೂಕಿನಾದ್ಯಂತ ಹಬ್ಬಿದ್ದು, ಜನ ಭಯಭೀತರಾಗಿದ್ದಾರೆ. ಈ ಸಂಬ0ಧ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇನ್ನೂ ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಪೊಲೀಸರ ತನಿಖೆಯ ನಂತರ ತಿಳಿಯಬೇಕಿದೆ.