ಹಲವರಿಗೆ ಡ್ರಗ್ಸ್ ಪತ್ತೆ, ಯುವಕರನ್ನು ಕರೆ ತಂದು ಪರೀಕ್ಷೆ ಮಾಡಿದ ಪೊಲೀಸರು
1 min readಅಪರಾಧ ಪ್ರಕರಣಗಳಲ್ಲಿ ಯುವಕರು ಹೆಚ್ಚು ಭಾಗಿ
ಹಲವರಿಗೆ ಡ್ರಗ್ಸ್ ಪತ್ತೆ, ಯುವಕರನ್ನು ಕರೆ ತಂದು ಪರೀಕ್ಷೆ ಮಾಡಿದ ಪೊಲೀಸರು
ಕೋಲಾರ ಹಲವರಿಗೆ ಡ್ರಗ್ಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣ
ಆ ಜಿಲ್ಲೆಯ ಯುವಕರು ಮಾದಕ ವಸ್ತುಗಳ ವ್ಯಸ್ಯನಿಯಾಗಿ, ಕೊಲೆ, ಸುಲಿಗೆಯಂತಹ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದು, ಇದು ಪೊಲೀಸರಿಗೆ ದಿನೇ ದಿನೇ ತಲೆನೋವುವಾಗಿ ಪರಿಣಮಿಸಿದೆ, ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ದ ಆಭಿಯಾನ ಸಾರುವ ಮೂಲಕ ಯುವಕರನ್ನು ಪೆರೇಡ್ ಮಾಡಿಸಿ ಚಳಿ ಬೀಡಿಸಿದ್ದಾರೆ. ಹಾಗಾದರೆ ಏನಿದು ಸ್ಟೋರಿ ಏನು ಅಂತೀರಾ, ಈ ಸ್ಟೋರಿ ನೋಡಿ.
ಹೀಗೆ ಸಾಲಿನಲ್ಲಿ ಕೈ ಕಟ್ಟಿ ನಿಂತಿರುವ ಯುವಕರು, ಡ್ರಗ್ಸ್ ಪರೀಕ್ಷೆ ಮಾಡುತ್ತಿರುವ ಪೊಲೀಸರು, ಮತ್ತೊಂದೆಡೆ ಖಡಕ್ ಆಗಿ ವಾರ್ನಿಂಗ್ ಮಾಡುತ್ತಿರುವ ಜಿಲ್ಲಾ ವರಿಷ್ಠಾಧಿಕಾರಿ, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಕೋಲಾರದ ಶತಶೃಂಗ ಭವನದಲ್ಲಿ ಸುಮಾರು 120ಕ್ಕೂ ಹೆಚ್ಚು ಯುವಕರನ್ನು ಕರೆತಂದು ಪೆರೇಡ್ ಮಾಡಿಸಿ, ಚಳಿ ಬಿಡಿಸಿದ್ದಾರೆ. ಕೋಲಾರ ಜಿ¯್ಲೆಯ ಮುಳಬಾಗಲು, ಮಾಲೂರು, ಕೋಲಾರ ಕಸಬಾ, ವೇಮಗಲ್ ಭಾಗಗಳಲ್ಲಿ ಮಾದಕ ವಸ್ತುಗಳು ಮಾರಾಟವಾಗುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸರು ಸ್ಪೆಷಲ್ ಡ್ರೆವ್ ಮಾಡಿದೆ.
ಕೋಲಾರ ಜಿಲ್ಲೆಯ ನರಸಾಪುರ, ವೇಮಗಲ್ ಮತ್ತು ಮಾಲೂರು ಭಾಗಕ್ಕೆ ಕೈಗಾರಿಕೆ ಪ್ರದೇಶ ಬಂದಿರುವುದರಿ0ದ ಸಾವಿರಾರು ಮಂದಿ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದ್ದು, ಕೆಲ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಗಾಂಜಾ ಡ್ರಗ್ಸ್, ಕೊಲೆ, ವಂಚನೆ, ಸುಲಿಗೆ ಪ್ರಕರಣಗಳಲ್ಲಿ ಯುವಕರು ಕಂಡು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಜಿ¯್ಲÉ ಪೊಲೀಸ್ ಸ್ಪೆಷಲ್ ಡ್ರೆವ್ ಮಾಡಿ ಅನುಮಾನಸ್ಪದ ಯುವಕರನ್ನು ಕರೆತಂದು ಪರೀಕ್ಷೆಗೆ ಒಳಪಡಿಸಲಾಗಿದೆ, ಸುಮಾರು ೧೨೦ ಅನುಮಾನಸ್ಪದ ಯುವಕರನ್ನು ಕರೆತಂದು ಕೋಲಾರದ ಶತಶೃಂಗ ಭವನದಲ್ಲಿ ಅವರ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಸುಮಾರು ೧೦ ಮಂದಿಯಲ್ಲಿ ಪಾಸಿಟಿವ್ ಬಂದಿದ್ದು, ಪೊಲೀಸರು ಎಲ್ಲರಿಗೂ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.
ಅಪರಾದ ಪ್ರಕರಣಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಪೊಲೀಸ್‌ರು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಪಣ ತೊಟ್ಟಿದ್ದಾರೆ. ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಅಪರಾದ ತಡೆಗೆ ಡ್ರಗ್ಸ್ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದು, ಇದನ್ನು ಜಿಲ್ಲೆಯಲ್ಲಿ ನಿರಂತರವಾಗಿ ಮುಂದುವರೆಸಲು ಮುಂದಾಗಿದ್ದಾರೆ. ಇತ್ತೀಚಿಗೆ ಯುವಕರು ಮಾದಕ ಚಟಗಳಿಗೆ ಬಲಿಯಾಗಿ, ಜೀವ ಕಳೆದುಕೊಳ್ಳುತ್ತಿರುವುದರಿಂದ ಡ್ರಗ್ಸ್ ಮಾಫಿಯಾ ಮಟ್ಟ ಹಾಕಬೇಕೆಂಬ ಕಾರಣಕ್ಕೆ ಕೋಲಾರ ಪೊಲೀಸರ ಪಣ ತೊಟ್ಟಿದೆ. ಈ ಹಿನ್ನಲೆಯಲ್ಲಿ ಕೋಲಾರ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ಹಾಗೂ ಗಾಂಜಾ ವಿರುದ್ದ ಅಭಿಯಾನ ಆರಂಭ ಮಾಡಿದ್ದಾರೆ.
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಇತ್ತೀಚಿಗೆ ಅಪರಾಧ ಪ್ರಕರಣಗಳಲ್ಲಿ ಯುವಕರು ಹೆಚ್ಚು ಕಂಡು ಬರುತ್ತಿರುವುದರಿಂದ, ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಡ್ರಗ್ಸ್ ಅಪರೇಷನ್‌ಗೆ ಮುಂದಾಗಿರುವುದು ಶಾಘ್ಲನೀಯ ಕೆಲಸವಾಗಿದೆ.