ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವ
1 min readಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವ
ಕಾರ್ಮಿಕರು ಕಾನೂನು ಅರಿವು ಪಡೆಯಲು ಸಲಹೆ
ಕಾವೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವವನ್ನು ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸ್ವಾತಂತ್ರ ಹೋರಾಟಗಾರರಾದ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವು ವೇಷಭೂಷಣ ಧರಿಸಿ ಗಮನ ಸೆಳೆದರು.
ಕಾವೇರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದಿ0ದ ಕನ್ನಡ ರಾಜೋತ್ಸವವನ್ನು ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಕೀಲ ಸಂದೀಪ್ ಚಕ್ರವರ್ತಿ, ನಿಮ್ಮ ಮನೆ ಭಾಷೆ ಯಾವುದೇ ಆಗಿರಲಿ ವ್ಯವಹಾರ ಭಾಷೆ ಕನ್ನಡವಾಗಿರಲಿ ಎಂದು ಕನ್ನಡಾಭಿಮಾನ ತೋರಿದರು. ಕಾರ್ಮಿಕರು ಕಾನೂನು ಅರಿಯುವುದು ಅಗತ್ಯ. ಕಟ್ಟಡ ಕಾರ್ಮಿಕರ ಹಕ್ಕುಗಳ ಹರಣ ಆದಾಗ ಖಂಡಿತ ಜಿಲ್ಲಾ ಕಾನೂನು ನೆರವು ವಿಭಾಗದ ಅವಶ್ಯಕತೆ ಪಡೆಯಿರಿ ಎಂದು ಸೂಚಿಸಿದರು.
ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮಾತನಾಡಿ, ನಾಡಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಕನ್ನಡ ಭಾಷೆ ಉಳಿಸಲು ಒಂದಾಗಿರುವುದು ಸಂತಸದ ವಿಚಾರ. ವಿವಿಧತೆಯಲ್ಲಿ ಏಕತೆ ನಮ್ಮ ಉಸಿರಾಗಿದ್ದು, ಅಂಬೇಡ್ಕರ್ ಅವರ ತ್ಯಾಗ ದೂರದೃಷ್ಟಿಯ ಸಂವಿದಾನ ನಾವು ಗೌರವದ ಜೀವನ ನಡೆಸಲು ಸಾಧ್ಯವಾಗಿದೆ. ಕಾರ್ಮಿಕರ ನೋವು ದುಃಖ ದುಮ್ಮಾನಕ್ಕೆ ಸರ್ಕಾರ ಬದ್ಧವಾಗಿದ್ದು ಕಾರ್ಮಿಕರ ಕಾರ್ಡುಗಳ ದುರ್ಬಳಕೆ ಆದಲ್ಲಿ ಗಮನಕ್ಕೆ ಭರುವಂತೆ ಕೋರಿದರು.
ಟೂಲ್ ಕಿಟ್ ವಿತರಣೆ, ಮಕ್ಕಳಿಗೆ ಲ್ಯಾಪ್ ಟಾಪ್, ಗರ್ಭಿಣಿಯರಿಗೆ ಅನುಕೂಲ ವಾಗಲು ಹಲವು ಯೋಜನೆಗಳಿದ್ದು, ಇದನ್ನೆಲ್ಲಾ ಇಂಟಕ್ ಜೊತೆ ಸೇರಿ ಅನುಕೂಲ ಪಡೆಯಿರಿ ಎಂದರು. ಈ ಸಂಧರ್ಭದಲ್ಲಿ ವಕೀಲ ಸಂದೀಪ್ ಚಕ್ರವರ್ತಿ, ರಾಮಪ್ಪ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ ಬಾಬು, ನಾರಾಯಣಸ್ವಾಮಿ, ಮುನಿಕೃಷ್ಣಪ್ಪ ಇದ್ದರು.