ಶಾರದಾ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
1 min readಶಾರದಾ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಶಿಡ್ಲಘಟ್ಟ ನಗರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ
ರಕ್ತಪರೀಕ್ಷೆ, ಹಸಿರು ಮನೆ, ನೀರಿನ ಶುದ್ಧೀಕರಣ, ಮಾತನಾಡುವ ಗೊಂಬೆ, ಗಾಳಿಯಿಂದ ವಿದ್ಯುತ್ ತಯಾರಿಕೆ, ಜ್ವಾಲಾಮುಖಿ, ಆಹಾರ ಸರಪಣಿ, ದೇಹದ ವಿವಿಧ ಅಂಗಗಳ ರಚನೆಗಳು, ತ್ಯಾಜ್ಯ ನಿರ್ವಹಣೆ, ಭೂಮಿಯ ಪದರಗಳು, ಮಳೆ ಕೊಯ್ಲು, ಮಿದುಳು, ಪ್ರಾಣಿ, ಪಕ್ಷಿ, ಸಸ್ಯಗಳ ವೈವಿಧ್ಯ ಮುಂತಾದ ವೈಜ್ಞಾನಿಕ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದರು.
ಶಿಡ್ಲಘಟ್ಟ ನಗರದ ಶಾರದಾ ವಿದ್ಯಾಸಂಸ್ಥೆಯ ಎಲ್‌ಕೆ.ಜಿ ಯ ಪುಟಾಣಿ ಮಕ್ಕಳಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ತಮ್ಮ ಪಠ್ಯಕ್ಕೆ ಸಂಬ0ಧಿಸಿದ ವಿಷಯಗಳನ್ನು ಆಯ್ದುಕೊಂಡು ವಿಜ್ಞಾನ ವಸ್ತು ಪ್ರದರ್ಶನದಲ್ಲಿ 120 ಕ್ಕೂ ಹೆಚ್ಚಿನ ಮಾದರಿಗಳನ್ನು ಮಾಡಿದ್ದು, ಅವುಗಳ ಕುರಿತಾಗಿ ವಿವರಣೆ ನೀಡಿದರು.
ಶ್ರೀಕಾಂತ್ ಮಾತನಾಡಿ, ಶಾಲೆಗಳಲ್ಲಿ ಏರ್ಪಡಿಸುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿದ್ದು ಮಕ್ಕಳು ಇಂತಹ ವಸ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಮತ್ತು ಹೊಸ ವಿಚಾರಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದರು. ಎ.ಆರ್. ಮುನಿರತ್ನಂ, ಎ.ಎಂ.ಶ್ರೀಕಾ0ತ್, ಮೂರ್ತಿ ಕೆ.ಸಾಮ್ರಾಟ್, ಸಿದ್ಧರಾಜು, ರಾಜೇಶ್ ಇದ್ದರು.