18 ವರ್ಷದೊಳಗಿನವರು ವಾಹನ ಚಲಾಯಿಸಬಾರದು
1 min readಬಿಜಿಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
18ವರ್ಷದೊಳಗಿನವರು ವಾಹನ ಚಲಾಯಿಸಬಾರದು
ಶಿಡ್ಲಘಟ್ಟ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ
೧೮ ವರ್ಷ ತುಂಬದವರು ಮತ್ತು ವಾಹನ ಚಾಲನಾ ಪರವಾನಗಿ ಪಡೆಯದವರು ಬೈಕ್ ಅಥವಾ ಇತರೆ ವಾಹನ ಚಲಾಯಿಸುವುದು ತಪ್ಪು. ಇದರಿಂದ ನೀವಷ್ಟೆ ಅಲ್ಲ ಬೈಕ್ ವಾಹನ ಮಾಲೀಕರಿಗೂ ಸಂಕಷ್ಟ ಎದುರಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ಶಿಡ್ಲಘಟ್ಟ ತಾಲೂಕಿನ ಹನುಮಂತಪುರ ಗೇಟ್ ಬಿಜಿಎಸ್ ಕಾಲೇಜಿನಲ್ಲಿ ರಾಷ್ಟಿಯ ಕಾನೂನು ಸೇವೆಗಳ ದಿನದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಶ ಮೊಹಮ್ಮದ್ ರೋಷನ್ ಷಾ, 18 ವರ್ಷ ತುಂಬದ ಹಾಗೂ ವಆಹನ ಚಾಲನಾ ಪರವಾನಗಿ ಇಲ್ಲದೆ ಬೈಕ್ ಸೇರಿದಂತೆ ಯಾವುದೆ ವಾಹನ ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ. ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಲ್ಲದೆ ವಾಹನದ ಮಾಲೀಕರ ವಿರುದ್ದವೂ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ತಾಲೂಕು ಕಾನೂನು ಸೇವಾ ಸಮಿತಿ ಎಲ್ಲ ತಾಲೂಕು ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಇರುತ್ತದೆ. ಕಾನೂನಿನ ಸವಲತ್ತುಗಳು ಅಗತ್ಯ ಇರುವ ಆರ್ಥಿಕವಾಗಿ ಹಿಂದುಳಿದವರಿಗೆ, ಅನ್ಯಾಯಕ್ಕೆ ತುತ್ತಾದವರಿಗೆ ಇಲ್ಲಿ ಉಚಿತವಾಗಿ ಕಾನೂನಿನ ನೆರವು, ಸಲಹೆ ಸೂಚನೆಗಳು ಸಿಗಲಿವೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಶೆ ಜೆ. ಪೊಜಾ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಮೇಲೆ ಅಥವಾ ತಮ್ಮ ನೆರೆ ಹೊರೆಯಲ್ಲಿ ಆಗುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ಪ್ರಶ್ನಿಸುವಂತಾಗಬೇಕು, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ತಮ್ಮ ಪೋಷಕರು ವಿದ್ಯಾವಂತರಿದ್ದಾರೆ, ಕೆಲವರು ಅವಿದ್ಯಾವಂತರೂ ಇರಬಹುದು. ಉಚಿತ ಕಾನೂನು ಸೇವಾ ಸಮಿತಿ ಕಾರ್ಯಗಳ ಬಗ್ಗೆ ನೀವು ತಿಳಿದು ಪೋಷಕರು ಮತ್ತು ಅಗತ್ಯ ಇರುವವರಿಗೂ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕೆಂದರು. ಕಾಲೇಜಿನ ಪ್ರಿನ್ಸಿಪಾಲ್ ಕೆ. ಮಹದೇವ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಹಾಜರಿದ್ದರು.