ಭೂರಗಮಾಕಲಹಳ್ಳಿ ಶಾಲೆಯಲ್ಲಿ ಕಾನೂನು ಅರಿ
1 min readಶಾಲಾ ಮಕ್ಕಳಿಗೂ ಕಾನೂನು ಅರಿವು ಮುಖ್ಯ
ಭೂರಗಮಾಕಲಹಳ್ಳಿ ಶಾಲೆಯಲ್ಲಿ ಕಾನೂನು ಅರಿವು
ಪ್ರಾಥಮಿಕ ಕಾನೂನು ಅರಿವಿದ್ದರೆ ಅಪರಾಧಗಳ ಸಂಖ್ಯೆ ಕಡಿಮೆ
ಚಿಂತಾಮಣಿ ತಾಲೂಕಿನ ಭೂರಗಮಾಕಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ತಾಲೂಕು ಕಾನೂನು ಸೇವಾ ಸಮಿತಿಯಿಂದ ರಾಷ್ಟಿಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿಂತಾಮಣಿ ತಾಲೂಕಿನ ಭೂರಗಮಾಕಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪಿ.ಎಂ. ಪ್ರಕಾಶ್ ಅವರು ಮಾತನಾಡಿ, ರಾಷ್ಟ. ರಾಜ್ಯ. ಜಿಲ್ಲಾ. ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡವರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಎನ್. ನಾಗರಾಜ್ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳು ಶಾಲೆಗಳಲ್ಲಿ ಹೆಚ್ಚು ನಡೆಸಿದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಕಾನೂನಿನ ಬಗ್ಗೆ ಮಕ್ಕಳಲ್ಲಿ ಹೆಚ್ಚು ತಿಳುವಳಿಕೆ ಮೂಡಿಸಿದರೆ ದೌರ್ಜನ್ಯ. ಕೆಟ್ಟ ಚಟಗಳು ದೂರವಾಗಿ ಮಕ್ಕಳಿಗೆ ಕಾನೂನು ಅರಿವು ಮೂಡುತ್ತದೆ. ಶಾಲೆಗಳಲ್ಲಿ ಪಾಠದ ಜೊತೆಗೆ ಜೀವನದ ಪಾಠ ಹೇಳಬೇಕು ಎಂದು ಸಲಹೆ ನೀಡಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ಮದುವೆ ಮಾಡಬಾರದೆಂದು ಮಕ್ಕಳಲ್ಲಿ ಅರಿವು ಮೂಡಿಸಬೇಕು, ಇಂತಹ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆದರೆ ಶೇ.90 ರಷ್ಟು ಅಪರಾಧಿಗಳು ಕಡಿಮೆಯಾಗುತ್ತದೆ ಎಂದರು. ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮಮತ ಮಾತನಾಡಿ, ರಾತ್ರಿ ವೇಳೆ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಫೋನ್ ಸ್ಪೀಕರ್ ಸಲ್ಲಿದ್ದಲ್ಲಿ ಅಂತಹ ವೇಳೆ ಜನರ ರಕ್ಷಣೆಗಾಗಿಯೇ ಸರ್ಕಾರ 112 ವಾಹನ ಸಿದ್ದಪಡಿಸಿದೆ. ಯಾವುದೇ ಕ್ಷಣದಲ್ಲಾದರೂ 112 ಗೆ ಕರೆ ಮಾಡಿ ಪೊಲೀಸ್ ಜೀಪ್ ತಕ್ಷಣ ಸ್ಥಳಕ್ಕೆ ಬಂದು ಆಂಬುಲೆನ್ಸ್, ಅಗ್ನಿಶಾಮಕ ದಳ, ಯಾವುದೇ ಗಲಾಟೆ ನಡೆದರು ಪೊಲೀಸರು ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್. ಉಪಾಧ್ಯಕ್ಷ ಜಿ. ಶಿವಾನಂದ, ಕಾರ್ಯದರ್ಶಿ ಆರ್. ಎಸ್. ಶ್ರೀನಾಥ್. ಕೆ. ಎನ್. ಮಂಜುನಾಥ್. ನವೀನ್ ಕುಮಾರ್. ಮಾಡಿಕೆರೆ ಮಂಜು. ರಾಯಪಲ್ಲಿ ಮಂಜುನಾಥ್ ಇದ್ದರು