ಅಪಾಯದ ಅಂಚಿನಲ್ಲಿದೆ ಶ್ರೀನಿವಾಸ ಸಾಗರ ಜಲಾಶಯ
1 min readಅಪಾಯದ ಅಂಚಿನಲ್ಲಿದೆ ಶ್ರೀನಿವಾಸ ಸಾಗರ ಜಲಾಶಯ
ಕೋಡಿಯಲ್ಲಿ ಬಿರುಕು ಬಿಟ್ಟು ಹುಲ್ಲು ಬೆಳೆಯುತ್ತಿದೆ
ಸಂಬ0ಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿದೆ
ಅದೊಂದು ಪ್ರಸಿದ್ದ ಪ್ರವಾಸಿ ತಾಣ, ಮೈಸೂರು ರಾಜರ ಆಳ್ವಿಕೆಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರಿಂದಲೇ ನಿರ್ಮಾಣಗೊಂಡ ಜಲಾಶಯ, ಮಳೆಗಾಲದಲ್ಲಿ ಇಲ್ಲಿ ಜೋಗ್ ಜಲಪಾತದಂತೆ 80 ಅಡಿ ಎತ್ತರದಿಂದ ನೀರು ದುಮ್ಮಿಕ್ಕುತ್ತೆ. ಅಷ್ಟೇ ಅಲ್ಲ, ಇಲ್ಲಿಗೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದ್ರೆ ಅದೇ ಜಲಾಶಯ ಇದೀಗ ಅಪಾಯದಲ್ಲಿದೆ. ಹಾಗಾದರೆ ಆ ಜಲಪಾತ ಯಾವುದು, ಅದೆಲ್ಲಿದೆ ಅಂತೀರಾ ನೀವೇ ನೋಡಿ.
ಎತ್ತಾ ನೋಡಿದ್ರೂ ನೀರು, ನೀರಿನ ಸುತ್ತ ಸುಂದರವಾದ ಬೆಟ್ಟ ಗುಡ್ಡಗಳು, ಇದರ ಮಧ್ಯೆ 80 ಅಡಿಗಳಿಂದ ದುಮ್ಮುಕ್ಕುತ್ತಿರುವ ಜಲಾಪತ, ಜಲಪಾತದಲ್ಲಿ ಸಾವಿರಾರು ಪ್ರವಾಸಿಗರು ಆಟವಾಡುತ್ತಿರುವುದು, ಈ ಜಲಾಶಯದ ಅಣೆಕಟ್ಟಿನಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟು ಮಣ್ಣುಸೇರಿಕೊಂಡು ಹುಲ್ಲು ಬೆಳೆದಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಈ ಎಲ್ಲಾ ದೃಶ್ಯಗಳು ಇರೋದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವ ಪ್ರಖ್ಯಾತ ಶ್ರೀನಿವಾಸ ಸಾಗರ ಜಲಾಶಯದಲ್ಲಿ, ಜಲಾಶಯ ಅದರದ್ದೆ ಆದ ಇತಿಹಾಸ ಹೊಂದಿದೆ. ಆಗಿನ ಕಾಲದ ಸರ್.ಎಂ. ವಿಶ್ವೇಶ್ವರಯ್ಯ ಹೆಸರಿನಲ್ಲಿ ರೂಪಗೊಂಡ ಜಲಾಶಯವಿದು.
ಇಲ್ಲಿ ಮಳೆಗಾಲ ಬಂದ್ರೆ ಈ ಶ್ರೀನಿವಾಸ ಸಾಗರ ತುಂಬಿ ಕೋಡಿ ಹರಿದು, 80 ಅಡಿಗಳಿಂದ ನೀರು ದುಮ್ಮಿಕ್ಕುತ್ತೆ. ಇದನ್ನು ನೋಡಲು ಮತ್ತು ನೀರಲ್ಲಿ ಎಂಜಾಯ್ ಮಾಡಲು ಪ್ರವಾಸಿಗರು ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದ್ರೆ ಈ ಜಲಾಶಯ ಅಪಾಯದಲ್ಲಿದ್ದು, ಅಣೆಕಟ್ಟಿನಲ್ಲಿ ಬಹುತೇಕ ಅಲ್ಲಲ್ಲಿ ಬಿರುಕಿನಿಂದ ಮಣ್ಣು ತುಂಬಿಕೊ0ಡು ಹುಲ್ಲು ಬೆಳೆಯುತ್ತಿದ್ದು, ಇದ್ರಿಂದ ಬೇರುಗಳು ಜಾಸ್ತಿಯಾಗಿ ನೀರು ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.
ವಿಶ್ವ ಪ್ರಖ್ಯಾತ ಶ್ರೀನಿವಾಸ ಸಾಗರ ಜಲಾಶಯದ ಸುತ್ತಮುತ್ತ ಹತ್ತಾರು ಹಳ್ಳಿಗಳಿದ್ದು, ಸಾವಿರಾರು ಎಕರೆ ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳಿವೆ. ಅಪ್ಪಿ ತಪ್ಪಿ ಅಣೆಕಟ್ಟು ಹೊಡೆದ್ರೆ ಈ ಎಲ್ಲವೂ ಜಾಲಾವೃತವಾಗಿ ಸಾವು ನೋವಿನ ಆತಂಕದಲ್ಲಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ಸಣ್ಣ ನೀರಾವರಿ ಇಲಾಖೆ ಮತ್ತು ಅಯಾ ಸಂಬ0ಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ರು ಕ್ಯಾರೆ ಅಂತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಒಟ್ಟಾರೆ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅಂದಿನ ಮೈಸೂರು ರಾಜರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಿದ ಶ್ರೀನಿವಾಸ ಸಾಗರ ಜಲಾಶಯ ಈಗ ಅಪಾಯದಲ್ಲಿದ್ದು, ಮುಂದೊAದು ದಿನ ಆಗುವ ಸಾವು ನೋವಿನ ಅನಾಹುತದ ಮುನ್ನೆಚ್ಚರಿಕೆಯಾಗಿ ಸಂಬ0ಧಪಟ್ಟ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ಮಾಡಿ ಸರಿ ಪಡಿಸಿದ್ರೆ ಉತ್ತಮ ಎಂದಿದ್ದಾರೆ ಸ್ಥಳೀಯರು.