ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಲಯನ್ಸ್ ಕ್ಲಬ್, ಪಂಚಗಿರಿ ದತ್ತಿ ಶಾಲೆಯಿಂದ ರಾಜ್ಯೋತ್ಸವ

1 min read

ಪಂಚವಟಿ ಆಶ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ

ಲಯನ್ಸ್ ಕ್ಲಬ್, ಪಂಚಗಿರಿ ದತ್ತಿ ಶಾಲೆಯಿಂದ ರಾಜ್ಯೋತ್ಸವ

ಪರಿಸರ ರಕ್ಷಣೆಗೆ ಮುಂದಾಗಲು ನವೀನ್ ಕಿರಣ್ ಸಲಹೆ

ಚಿಕ್ಕಬಳ್ಳಾಪುರ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ನಿಂದ ಬೃಹತ್ ಸಸಿ ನೆಡುವ ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ ನವೀನ್ ಕಿರಣ್ ನೇತೃತ್ವದಲ್ಲಿ ಇಂದು ಅದ್ದೂರಿಯಾಗಿ ನಡೆಯಿತು.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಪಂಚಾಯತಿ ವ್ಯಾಪ್ತಿಯ ಪಂಚವಟಿ ಆಶ್ರಮದ ಪ್ರದೇಶದಲ್ಲಿ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್, ಜಿಲ್ಲಾ ಪರಿಸರ ತಂಡದಿ0ದ ಬೃಹತ್ ಸಸಿ ನೆಡುವ ಕಾರ್ಯಕ್ರಮ ಮತ್ತು ಕನ್ನಡ ರಾಜ್ಯೋತ್ಸವ ಪಂಚವಟಿ ಆಶ್ರಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ, ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಾಪಾಲ ನಾರಾಯಣಸ್ವಾಮಿ ಗಿಡ ನೆಡುವ ಮೂಲಕ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ನವೀನ್ ಕಿರಣ್, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸೇವಾ ಟ್ರಸ್ಟ್ನವರು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇಂದು ಪಂಚವಟಿ ಬಳಿ ಬೃಹತ್ ಗಿಡ ನೆಡುವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಬಹಳ ಸಂತೋಷ ತಂದಿದೆ. ಹೆಚ್ಚಾಗಿ ಹಣ್ಣಿನ ಗಿಡಗಳನ್ನು ಬೆಳೆಸಬೇಕು, ಜಗತ್ತಿನಲ್ಲಿ ಪ್ರಾಣಿ ಪಕ್ಷಿಗಳನ್ನು ಬೆಳೆಸಬೇಕಾದ್ರೆ. ಗಿಡಗಳ ಅವಶ್ಯಕತೆ ಇದೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಪಂಚ ಬೆಟ್ಟಗಳು ಹಾಗೂ ಪಂಚ ನದಿಗಳು ಉಗಮವಾಗುತ್ತವೆ. ಅದ್ರೆ ಚಿಕ್ಕಬಳ್ಳಾಪುರ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಪರಿಸರ ಕಾಳಜಿಯನ್ನು ಜನ ಬೆಳೆಸಿಕೊಳ್ಳಬೇಕು ಎಂದರು.

ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಮುಂದೆ ಬಂದು ಗಿಡಗಳನ್ನು ಬೆಳೆಸಲು ಮುಂದೆ ಬರುತ್ತಿದ್ದಾರೆ, ಇದು ಸಂತಸದ ವಿಚಾರವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ವಾತಾವರಣ ನೀಡಬೇಕಾದೆ ಈಗಲಿಂದಲೇ ಗಿಡಗಳನ್ನು ಬೆಳೆಸದ್ರೆ ಮುಂದಿನ ಪೀಳಿಗೆಗೆ ಉಸಿರಾಡಲು ಉಪಯೋಗವಾಗುತ್ತೆ ಎಂದರು.

ಈ ವೇಳೆ ಪ್ರಗತಿ ಪರ ರೈತ ಮರಳುಕುಂಟೆ ನಾರಾಯಣಸ್ವಾಮಿ ಅವರಿಗೆ ಲಯನ್ಸ್ ಕ್ಲಬ್‌ನಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಚಂದ್ರಪ್ಪ, ಯೋಜನಾ ನಿರ್ದೇಶಕ ಜ್ಞಾನೇಂದ್ರ ರೆಡ್ಡಿ, ಜಿಲ್ಲಾ ರಾಜ್ಯಾಪಾಲ ನಾರಾಯಣಸ್ವಾಮಿ, ಶಿವ ಪ್ರಸಾದ್, ವೆಂಕಟಪ್ಪ, ಸುನಿಲ್, ಗಿರಿಧರ್, ಶ್ರೀನಿವಾಸ್ ಇದ್ದರು.

About The Author

Leave a Reply

Your email address will not be published. Required fields are marked *