ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಕೊರ್ಲಕುಂಟೆ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದರೂ ಗಮನ ಹರಿಸೋರಿಲ್ಲ

1 min read

ಕೊರ್ಲಕುಂಟೆ ಕೆರೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದರೂ ಗಮನ ಹರಿಸೋರಿಲ್ಲ

ಕಟ್ಟಡ ತ್ಯಾಜ್ಯ ತುಂಬುವ ತಾಣವಾಗಿ ಬದಲಾದ ಕೊರ್ಲಕುಂಟೆ ಕೆರೆ

ಬಾಗೇಪಲ್ಲಿ ಎಂದರೆ ಬರಡುನೆಲ ಎಂಬ ಕುಖ್ಯಾತಿ ಪಡೆದಿದೆ. ಈ ಭಾಗದ ಜನತೆಗೆ ನೀರಾವರಿ ಎಂಬುದು ಶಾಶ್ವತ ಸಮಸ್ಯೆಯಾಗಿ ಕಾಡುತ್ತಿದೆ. ನೀರಿನ ಮೂಲಗಳನ್ನು ಸಂರಕ್ಷಿಸುವ ಜವಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲೂ ಇದೆ. ಆದರೆ ಆ ಜವಬ್ದಾರಿಯನ್ನು ಪಾಲಿಸುವವರೇ ಇಲ್ಲದೆ ಇರುವ ಜಲಮೂಲಗಳನ್ನೂ ನಾಶ ಮಾಡುವ ಕೆಲಸ ನಡೆಯುತ್ತಿರೋದು ವಿಪರ್ಯಾಸ.

ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊ0ಡ0ತೆ ಇರುವ ಕೊಡಿಕೊಂಡೆ ರಸ್ತೆಯಲ್ಲಿ ಕೊರ್ಲಕುಂಟೆ ಕೆರೆ ಇದೆ. ಈ ಕೆರೆ ಒಂದು ಕಾಲದಲ್ಲಿ ಉತ್ತಮ ಜಲ ಮೂಲವಾಗಿ ಈ ಭಾಗದ ರೈತರಿಗೆ ಅನುಕೂಲವಾಗಿತ್ತು. ಆದರೆ ಮಾನವನ ಆಸೆ ಹೆಚ್ಚಾದಂತೆ ಈ ಕೆರೆಗೆ ನೀರಿನ ಸಂಪರ್ಕ ಕಲ್ಪಿಸಿದ್ದ ಪೋಷಕ ಕಾಲುವೆಗಳನ್ನು ಜನರು ಒತ್ತುವರಿ ಮಾಡಿಕೊಂಡರು. ಪರಿಣಾಮ ಕೆರೆಗೆ ಮಳೆ ಬಂದರೂ ನೀರು ಬಾರದ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಕೆರೆ ಸದಾ ಖಾಲಿಯಾಗಿರತೊಡಗಿತು.

ಖಾಲಿ ಜಾಗ ಕಾಣಿಸಿದರೆ ಬಿಡದ ನಮ್ಮ ಜನ ಆ ಕೆರೆಯನ್ನೂ ಒತ್ತುವರಿ ಮಾಡಿಕೊಡಂಇದ್ದಾರೆ. ಆದರೆ ಸಂಪೂರ್ಣವಾಗಿ ಅಲ್ಲ. ಇರುವ ಕೆರೆಯ ಆಯಕಟ್ಟು ಪ್ರದೇಶವನ್ನಾದರೂ ಉಳಿಸುವ ಪ್ರಯತ್ನವನ್ನು ಸಣ್ಣ ನೀರಾವರಿ ಇಲ್ಲವೆ ಇಥರೆ ಸಂಬ0ಧಿಸಿದ ಅಧಿಕಾರಿಗಳು ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ಇದರಿಂದಾಗಿ ಕೆರೆಯಲ್ಲಿ ಮೊದಲಿಗೆ ಮಣ್ಣು ಕಳುವಾಯಿತು. ನಂತರದ ದಿನಗಳಲ್ಲಿ ಈ ಕೆರೆ ಪಟ್ಟಣದ ನಿವಾಸಿಗಳಿಗೆ ಕಸ ಸುರಿಯುವ ಜಾಗವಾಗಿ ಬದಲಾಯಿತು. ಪರಿಣಾಮ ಇಂದು ಕೆರೆಯ ಅಸ್ಥಿತ್ವಕ್ಕೇ ಧಕ್ಕೆ ಬರುವ ಆತಂಕ ಎದುರಾಗಿದೆ.

ಈ ಕೊರ್ಲಕುಂಟೆ ಕೆರೆಗೆ ಸುತ್ತಲಿನ ಪಟ್ಟಣದ ಹಲವು ವಾರ್ಡ್ಗಳಿಂದ ಬರುವ ತ್ಯಾಜ್ಯ ನೀರು ತುಂಬುತ್ತಿದೆ. ಇದರಿಂದಾಗಿ ಗಬ್ಬು ವಾಸನೆ ಬೀರುತ್ತಿದೆ. ಜೊತೆಗೆ ಕೆರೆಗೆ ಹೊಂದಿಕೊ0ಡ0ತೆ ಸಂಪAಗಿ ನಗರವಿದ್ದು, ಅಲ್ಲಿನ ನಾಗರಿಕರು ನಿತ್ಯ ಬಳಕೆಗೆಂದು ಇರುವ ಕೊಳವೆ ಬಾವಿ ನೀರು ನಾರುತ್ತಿದ್ದು, ಅನಿವಾರ್ಯವಾಗಿ ಪಾತ್ರೆ ಉಜ್ಜಲು, ಬಟ್ಟೆ ಒಗೆಯಲು ಬಳಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬ0ಧ ಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಕೆರೆಯ ಕಟ್ಟೆಯ ಮೇಲೆ ನೆರೆಯ ಆಂಧ್ರ ಪ್ರದೇಶದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೊಡಿಕೊಂಡೆ ರಸ್ತೆ ಹಾದು ಹೋಗಿದ್ದು, ಕೆರೆಯಂಗಲದ ಕಡೆ ರಸ್ತೆಯ ಉದ್ದಕ್ಕೂ ಹಳೆ ಕಟ್ಟಡಗಳ ತ್ಯಾಜ್ಯ ಒಡೆದ ಟೈಲ್ಸ್, ಇಟ್ಟಿಗೆ ಚೂರುಗಳು, ಕಲ್ಲಿನ ಚೂರುಗಳು, ಸಿಮೆಂಟಿನ ಬಿಲ್ಲೆಗಳು ಲೋಡುಗಟ್ಟಲೆ ತಂದು ಸುರಿಯಲಾಗಿದೆ. ಇದರಿಂದಾಗಿ ಕೆರೆಯ ಕೆಲಭಾಗ ಹೂಳು ತುಂಬಿದೆ. ಜೊತೆಗೆ ಮಾಂಸ, ತರಕಾರಿ, ಹಣ್ಣುಗಳ ತ್ಯಾಜ್ಯ ಮೂಟೆಗಳಲ್ಲಿ ತಂದು ಕೆರೆಗೆ ಉರುಳಿಸಲಾಗಿದೆ. ಇದರಿಂದಾಗಿ ಕಟ್ಟೆ ಮೇಲಿನ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿ ಓಡಾಡುವಂತಾಗಿದೆ.

ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಜಬೀವುಲ್ಲಾ ಮಾತನಾಡಿ, ಬರನಾಡಿನಲ್ಲಿ ನೆಲ, ಜಲ ಸಂರಕ್ಷಣೆಯಲ್ಲಿ ಆಡಳಿತ ವರ್ಗ ಸಂಪೂರ್ಣ ವಿಫಲವಾಗಿದೆ. ಕೆರೆಯ ಕಟ್ಟೆಯ ಮೇಲೆ ತ್ಯಾಜ್ಯ ಸುರಿದಿರುವುದರಿಂದ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದ್ದು, ಸುತ್ತಲಿನ ನಾಗರಿಕರಿಗೆ ರೋಗ ಹರಡುವಂತಾಗಿದೆ. ಸಂಬ0ಧಪಟ್ಟ ಸಣ್ಣ ನೀರಾವರಿ ಇಲಾಖೆ, ಪುರಸಭೆಯವರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಂಡು ಕೆರೆಯ ಸಂಪತ್ತನ್ನು ಉಳಿಸಬೇಕು ಎಂದು ಆಗ್ರಹಿಸಿದರು.

About The Author

Leave a Reply

Your email address will not be published. Required fields are marked *