ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಶಿಡ್ಲಘಟ್ಟದಲ್ಲಿ ಅಪರಾಧ ಮಾಸಾಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗುಣಮುಖರಾಗಲಿ

ರಾಗಿ, ಹುರಳಿ ಒಕ್ಕಣೆ ಕೇಂದ್ರವಾದ ರಾಜ್ಯ ಹೆದ್ದಾರಿ

December 25, 2024

Ctv News Kannada

Chikkaballapura

ಯೋಗ ಶಿಕ್ಷಕಿ ಅಪಹರಣ ಮಾಡಿ ಜೀವಂತ ಸಮಾಧಿ ಪ್ರಕರಣ

1 min read

ಯೋಗ ಶಿಕ್ಷಕಿ ಅಪಹರಣ ಮಾಡಿ ಜೀವಂತ ಸಮಾಧಿ ಪ್ರಕರಣ
ಆರೋಪಿಗಳಿಂದ ಇಂದು ಸ್ಥಳ ಮಹಜರು ನಡೆಸಿದ ಪೊಲೀಸರು
ಬೆಂಗಳೂರು, ಸೇರಿ ನಾನಾ ಕಡೆ ಪೊಲೀಸರಿಂದ ಮಹಜರು
ಯೋಗ ಶಿಕ್ಷಕಿ ಸಮಾಧಿಯಿಂದ ಎದ್ದು ಬಂದಿದ್ದೇ ದೊಡ್ಡ ಪವಾಢ
ಅರೆಬೆತ್ತಲೆಯಾಗಿ ಮೈಗೆ ಸೊಪ್ಪು ಸುತ್ತುಕೊಂಡು ಬಂದಿದ್ದ ಶಿಕ್ಷಕಿ
ಬೆಳ್ಳಂ ಬೆಳಿಗ್ಗೆ ತೋಟದ ಮನೆ ಬಳಿ ಬಂದು ಬಾಗಿಲು ಬಡಿದ ಶಿಕ್ಷಕಿ

ಬೆಂಗಳೂರಿನ ಯೋಗಶಿಕ್ಷಕಿಯನ್ನ ಕಿಡ್ನಾಪ್ ಮಾಡಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಸಿನಿಮಾ ಕಥೆಗೂ ಕಡಿಮೆಯಿಲ್ಲ. ಯೋಗ ಶಿಕ್ಷಕಿ ಸಮಾಧಿಯಿಂದ ಎದ್ದು ಬಂದಿದ್ದು ರೋಚಕವಾಗಿದ್ದು, ಆ ಸ್ಥಳ ಇರೋದಾದರೂ ಎಲ್ಲಿ, ಅರೆಬೆತ್ತಲೆಯಾಗಿದ್ದ ಆಕೆ ಕಾಡಿನಿಂದ ಕಗ್ಗತ್ತಲ ರಾತ್ರಿಯಲ್ಲೆ ನಡೆದುಕೊಂಡು ಬಂದಿದ್ದು ಹೇಗೆ, ಆಶ್ರಯ ನೀಡಿದವರು ಹೇಳೋದಾದರೂ ಏನು ಈ ವಿಚಾರ ತಿಳಿಯಲು ಈ ಸ್ಟೋರಿ ನೋಡಿ.

ಹೌದು, ಬೆಂಗಳೂರಿನ ಯೋಗ ಶಿಕ್ಷಕಿಯನ್ನ ಸಂತೋಷ್ ಕುಮಾರ್ ಪತ್ನಿ ಬಿಂದು ಕೊಟ್ಟ ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಅಂಡ್ ಕಿಡ್ನಾಪರ್ಸ್ ಗ್ಯಾಂಗ್ ಆಕ್ಟೋಬರ್ 24 ರಂದು ಅಪಾರ್ಟ್ಮೆಂಟ್ ನಿಂದ ಕಾರಿನಲ್ಲಿ ಕರೆತಂದಿದ್ರು. ಪ್ರೀ ಪ್ಲಾನ್‌ನಂತೆ ಆಕೆಯನ್ನ ಕಾರಲ್ಲಿ ಇಡಿ ದಿನ ಬೆಂಗಳೂರಿನ ನಾನಾ ಕಡೆ ಸುತ್ತಾಡಿಸಿ, ಕೊನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯ ಗೌಡನಹಳ್ಳಿ, ಧನಮಿಟ್ಟೇನಹಳ್ಳಿ ಬಳಿ ಮಾರ್ಗ ಮಧ್ಯೆ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.

ಆಕ್ಟೋಬರ್ 24ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಯೋಗ ಶಿಕ್ಷಕಿಯನ್ನ ಕಾರಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿದ್ದಾರೆ, ಆಕೆಯ ಮೈ ಮೇಲೆ ಇದ್ದ ಚಿನ್ನಾಭರಣ ಕಸಿದುಕೊಂಡಿದ್ದಾರೆ, ಬಟ್ಟೆ ಕಳಚಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅರೆಬೆತ್ತಲೆಯಾಗಿದ್ದ ಆಕೆಯ ಕುತ್ತಿಗೆಗೆ ಚಾರ್ಜರ್ ವೈರ್‌ನಿಂದ ಬಲವಾಗಿ ಬಿಗಿದು ಉಸಿರುಗಟ್ಟಿಸಿದ್ದಾರೆ. ಇನ್ನೇನು ಆಕೆ ಸತ್ತಳು ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ ಸ್ವತಃ ಯೋಗ ಶಿಕ್ಷಕಿಯಾಗಿದ್ದ ಆಕೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಸತ್ತವಳಂತೆ ನಾಟಕ ಮಾಡಿದ್ದು, ಕಿಡ್ನಾಪರ್ಸ್ ಎಸ್ಕೇಪ್ ಆದ ನಂತರ ಮೆಲ್ಲಗೆ ಎದ್ದು ಅಲ್ಲಿಂದ ಊರಿನತ್ತ ಬಂದಿದ್ದಾಳೆ.

ಆದ್ರೆ ಮೊದಲೇ ಅರಬೆತ್ತಲೆಯಾಗಿದ್ದ ಆಕೆ ಮೈ ಮುಚ್ಚಿಕೊಳ್ಳಲು ಅಲ್ಲಾ ಎಲ್ಲಾ ಬಿದ್ದಿದ್ದ ಹಳೆಯ ಶರ್ಟ್ ಧರಿಸಿಕೊಂಡಿದ್ದಾಳೆ. ಸೊಂಟದ ಕೆಳಭಾಗಕ್ಕೆ ಕಾಡು ಮನುಷ್ಯರಂತೆ ಸೊಪ್ಪು ಸುತ್ತುಕೊಂಡು ದಾರಿಯುದ್ದಕ್ಕೂ ನಡೆದುಕೊಂಡೇ ಬಂದಿದ್ದು, ಕೋಳಿ ಕೂಗುವ ಶಬ್ದ ಕೇಳಿ ವೆಂಕಟೇಶ್ ಎಂಬುವರ ಮನೆಯತ್ತ ಭಾವಿಸಿದ್ದಾಳೆ. ಮುಂಜಾನೆ ೫ ಗಮಟೆ ಸುಮಾರಿಗೆ ಇದ್ಯಾರಪ್ಪ ಅಂತ ಎದ್ದವರು ಶಾಕ್ ಆಗಿ ನೋಡಿ ಈಕೆಗೆ ಸಹಾಯ ಮಾಡಿದ್ದಾರೆ.

ಯೋಗ ಶಿಕ್ಷಕಿಯನ್ನ ಕೊಲೆ ಮಾಡಿದ್ದ ಜಾಗ ನಿರ್ಜನ ಅರಣ್ಯ ಪ್ರದೇಶವಾಗಿದ್ದು, ಕುರಚಲು ಗಿಡಗಳು ಬೆಳೆದುಕೊಂಡಿವೆ. ಎತ್ತ ನೊಡಿದರೂ ಮಳೆಯ ನೀರು ಹರಿದಿರೋ ದೊಡ್ಡ ಗುಂಡಿಗಳಿವೆ. ಆದೇ ಗುಂಡಿಯೊಳಗೆ ಈಕೆಯನ್ನ ಮುಚ್ಚಿ ಹಾಕಿದ್ದ ಕಿಡ್ನಾಪರ್ಸ್ ಆ ಗುಂಡಿ ಮೇಲೆ ಕುರಚಲು ಗಿಡಗಳ ಸೊಪ್ಪು ಸೆದೆ ಹಾಕಿ ಮುಚ್ಚಿದ್ದಾರೆ. ಆದ್ರೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಬದುಕಿ ಬಂದಿದ್ದಾಳೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೂ ಮುನ್ನಾ ಆಕೆಯನ್ನ ಹತ್ತಿಸಿಕೊಂಡಿದ್ದ ಅಪಾರ್ಟ್ಮೆಂಟ್ ಹಾಗೂ ಕಿಡ್ನಾಪರ್ ಸತೀಶ್ ರೆಡ್ಡಿ ಆಫೀಸ್ ಸೇರಿದಂತೆ ಪ್ಲಾನ್ ಮಾಡಲು ಸೇರಿದ್ದ ಸ್ಥಳವೊಂದರಲ್ಲಿ ಮಹಜರು ನಡೆಸಿದ್ದಾರೆ.

ಒಟ್ನಲ್ಲಿ ಕಿಡ್ನಾಪ್ ಆಗಿ ಕೊಲೆಯಾಗಬೇಕಿದ್ದ ಯೋಗ ಶಿಕ್ಷಕಿ ಬದುಕಿದ್ದೇ ರೋಚಕವಾಗಿದೆ. ಸದ್ಯ ಕಿಡ್ನಾಪರ್ಸ್ ಹಾಗೂ ಸುಪಾರಿ ಕೊಟ್ಟಿದ್ದ ಕಿಲಾಡಿ ಲೇಡಿ ಜೈಲು ಸೇರಿದ್ದು, ಕಿಡ್ನಾಪ್‌ಗಾಗಿ ಕಾರು ಕಳವು ಮಾಡಿ ತಂದಿದ್ದ ಅಪ್ರಾಪ್ತ ಬಾಲಕನೂ ಕಾನೂನು ಪ್ರಕ್ರಿಯೆಗೆ ಒಳಗಾಗಿದ್ದಾನೆ.

About The Author

Leave a Reply

Your email address will not be published. Required fields are marked *