ರೈತರ ಅಭಿವೃದ್ದಿಗೂ ಕಂಪ್ಯೂಟರ್ ಶಿಕ್ಷಣ ಅಗತ್ಯ
1 min readರೈತರ ಅಭಿವೃದ್ದಿಗೂ ಕಂಪ್ಯೂಟರ್ ಶಿಕ್ಷಣ ಅಗತ್ಯ
ಶಿಕ್ಷಣವಿಲ್ಲದ ರೈತರಿಗೆ ಆದುನಿಕ ಕೃಷಿ ತಂತ್ರಜ್ಞಾನದಲ್ಲಿ ವಂಚನೆ ಆತಂಕ
ಕ0ಪ್ಯೂಟರ್ ಶಿಕ್ಷಣ ಕೇವಲ ನಗರ ವಾಸಿಗಳಿಗೆ ಸೀಮಿತವಾಗದೆ ಗ್ರಾಮೀಣ ಮಕ್ಕಳಿಗೂ ಅಗತ್ಯವಿದೆ. ರೈತರಿಗೆ ಕಂಪ್ಯೂಟರ್ ಶಿಕ್ಷಣವಿಲ್ಲದಿದ್ದರೆ ವಿವಿಧ ಕಂಪನಿಗಳು ಮಾಡುವ ಮೋಸ ತಿಳಿಯಲು ಸಾದ್ಯವಿಲ್ಲ, ಹಾಗಾಗಿ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ಇದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಆರ್ ನಾರಾಯಣರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೈಲಗುರ್ಕಿ ಪಂಚಾಯ್ತಿ ವ್ಯಾಪ್ತಿಯ ಹರಿಸ್ಥಳ ಮತ್ತು ಗೌಡನಹಳ್ಳಿ ಜಂಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಪೂಜೆ ಮತ್ತು ಕಂಪ್ಯೂಟರ್ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಗೋಪೂಜೆ ನೆರವೇರಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ ಆರ್ ನಾರಾಯಣರೆಡ್ಡಿ, ನಮ್ಮೂರ ಶಾಲೆಗೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರು ಕಂಪ್ಯೂಟರ್ ಒದಗಿಸಿಕೊಟ್ಟು, ರೈತರ ಮಕ್ಕಳೂ ಕಂಪ್ಯೂರ್ಟ ಕಲಿಕೆಗೆ ಅವಕಾಶ ಮಾಡಿರುವುದು ಸಂತಸದ ವಿಚಾರ ಎಂದರು.
ಎರಡೂ ಗ್ರಾಮದಲ್ಲಿ ರೈತರ ಮಕ್ಕಳೆ ಇದ್ದಾರೆ, ಈ ಶಾಲೆ ಮುಖ್ಯ ಶಿಕ್ಷಕ ಸತ್ಯನಾರಾಯಣಮೂರ್ತಿ ಆಸಕ್ತಿಯಿಂದಾಗಿ ಶಾಲಾ ವಾತಾವರಣ ಸುಂದರವಾಗಿ ರೂಪುಗೊಂಡಿದೆ. ಕಂಪ್ಯೂಟರ್ ಶಿಕ್ಷಣ ಇಲ್ಲದಿದ್ದರೆ ರೈತರಿಗೆ ಪೂರಕವಾಗಿ ಕಲಸ ಮಾಡುತ್ತಿರುವ ಕಂಪನಿಗಳು ಮಾಡುವ ಮೋಸ ಕಂಡು ಹಿಡಿಯಲಾಗುವುದಿಲ್ಲ ಎಂದರು
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣಮೂರ್ತಿ, ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ಹೊಟೇಲ್ ರಾಮಣ್ಣ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗಾಯಿತ್ರಮ್ಮ, ಶಿವಪ್ಪ, ಪೆರೇಸಂದ್ರ ಕೃಷ್ಣಾರೆಡ್ಡಿ,ಜಿ ಎ ವೆಂಕಟರೆಡ್ಡಿ ಇದ್ದರು.