ವಕ್ಫ್ ಬೋರ್ಡ್ ವಿರುದ್ಧ ರೈತರ ಸಂಘ ದ ಪ್ರತಿಭಟನೆ
1 min readವಕ್ಫ್ ಬೋರ್ಡ್ ವಿರುದ್ಧ ರೈತರ ಸಂಘ ದ ಪ್ರತಿಭಟನೆ
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರ ಆಕ್ರೋಶ
ಹಲವು ಜಿಲ್ಲೆಗಳ ದಾಖಲೆಗಳಲ್ಲಿ ಕೃಷಿ ಭಮಿಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ವರ್ಗೀಕರಿಸುವುದು, ಸಾಗುವಳಿ ಚೀಟಿ ವಿಲಂಬ ವಿರೋಧಿಸಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಇಂದು ಬಾಗೇಪಲ್ಲಿ ತಹಸೀಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.
ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಿಂದ ಹೊರಟ ರಾಜ್ಯ ರೈತಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಮನೀಷಾ ಮಹೇಶ್ ಪತ್ರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ಗೋವಿಂದ ರೆಡ್ಡಿ, ವಕ್ಫ್ ಮಂಡಳಿ ಭಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಕಬಳಿಕೆಯ ಈ ಆಟ ನಡೆಯಲು ರೈತರು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ತರಲಿ , ತಕ್ಷಣವೇ ನೋಟಿಸ್ ಹಿಂಪಡೆಯುವ0ತೆ ಆಗ್ರಹಿಸಿದರು.
ಸರ್ಕಾರದ ಹುನ್ನಾರದಿಂದ ರೈತರಿಗೆ ದೀಪಾವಳಿ ಕರಾಳವಾಗಿದೆ. ರೈತರು ದೀಪಾವಳಿ ಆಚರಣೆ ಮಾಡಲ್ಲ. ರೈತ ಕುಟುಂಬಗಳು ಬೀದಿಗೆ ಬಿದ್ದಿವೆ. ವಕ್ಫ್ ಬೋರ್ಡ್ ನಮೂದು ಮಾಡಿದ್ದನ್ನು ತೆಗೆಯಬೇಕು. ಭವಿಷ್ಯದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಪ್ರಾಧಿಕಾರಿಗಳಾದ ಸಿ.ವಿ. ಶ್ರೀಕಾಂತರೆಡ್ಡಿ, ಶ್ರೀಕಾಂತ್, ವೆಂಕಟಶಿವಾರೆಡ್ಡಿ, ಶಿವಾರೆಡ್ಡಿ, ಹೆಚ್.ಜಿ. ವೆಂಕಟರೆಡ್ಡಿ, ಲಕ್ಷನರಸಪ್ಪ ಇದ್ದರು.