ಬೆಂಗಳೂರು ಉತ್ತರ ವಿವಿಧ ಅಂತರ ಕಾಲೇಜು ಕಬಡ್ಡಿ
1 min readಬೆಂಗಳೂರು ಉತ್ತರ ವಿವಿಧ ಅಂತರ ಕಾಲೇಜು ಕಬಡ್ಡಿ
ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಂದ್ಯಗಳು
ಶಾಸಕ ಪ್ರದೀಪ್ ಈಶ್ವರ್‌ರಿಂದ ಕ್ರೀಡಾಕೂಟಕ್ಕೆ ಚಾಲನೆ
ಮಹಿಳಾ ಕಬಡ್ಡಿ ನೋಡುವುದೇ ಚಂದ. ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಮತ್ತು ಆಯ್ಕೆ ಇಂದು ನಡೆಯಿತು. ಇದಕ್ಕೆ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಆಂತರಿಕ ಗುಣಮಟ್ಟ ಬರೊಸಾ ಕೋಶ, ದೈಹಿಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಮತ್ತು ಆಯ್ಕೆ ಇಂದು ನಡೆಯಿತು, ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚಿಕ್ಕಬಳ್ಳಾಪುರ ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಕಾಲೇಜಿನ ಕಬಡ್ಡಿ ಪಂದ್ಯಕ್ಕೆ ಟಾಸ್ ಹಾಕುವ ಮೂಲಕ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಡೆಯಿಂದ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದು, ಇದ್ರಲ್ಲಿ 25 ಮಹಿಳಾ ಟೀಮ್‌ಗಳು ಭಾಗವಹಿಸಿವೆ. ಅವರಿಗೆ ಶುಭಾಶಯ ಕೋರುವುದಾಗಿ ಹೇಳಿದರು.
ಬೆಂಗಳೂರು ಉತ್ತರ ಉತ್ತರ ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಚಿಕ್ಕಬಳ್ಳಾಪುರ ಮಹಿಳಾ ಕಾಲೇಜಿನಲ್ಲಿ ನಡೆಯುತ್ತಿದ್ದು 25 ಮಹಿಳಾ ತಂಡಗಳು ಭಾಗವಹಿಸಿವೆ. ಕಬಡ್ಡಿ ಪಂದ್ಯಾವಳಿಗಳಲ್ಲಿ ಉತ್ಸಾಹದಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಚಿಕ್ಕಬಳ್ಳಾಪುರ ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಕಾಲೇಜು ವಿರುದ್ಧ ನಡೆದ ಪಂದ್ಯ ಕುತೂಹಲಕರವಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟಿಯ ವೈಟ್ ಲಿಪ್ಟರ್ ಪೂಜಿತಾ, ಮಹಿಳಾ ಕಾಲೇಜಿನ ಅಧ್ಯಾಪಕ ಹರೀಶ್ ಬಾಬು, ಶಿವನಾಂದ, ರಾಮಕೃಷ್ಣಪ್ಪ, ಪ್ರೇಮಕುಮಾರ್, ಸಂತೋಷ ಕುಮಾರ್, ಗಿರೀಜಾ ಇದ್ದರು.