28ನೇ ವಾರ್ಡಿನಲ್ಲಿ ಅಧ್ಯಕ್ಷ 5ನೇ ವಾರ್ಡಿನಲ್ಲಿ ಉಪಾಧ್ಯಕ್ಷ
1 min readಚಿಕ್ಕಬಳ್ಳಾಪುರ ನಗರಸಭೆಯಿಂದ ಸ್ವಚ್ಛತಾ ಅಭಿಯಾನ
28ನೇ ವಾರ್ಡಿನಲ್ಲಿ ಅಧ್ಯಕ್ಷ 5ನೇ ವಾರ್ಡಿನಲ್ಲಿ ಉಪಾಧ್ಯಕ್ಷ
ತಲಾ ಒಂದು ವಾರ್ಡಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ
ರಸ್ತೆಯಲ್ಲಿ ಕಸ ಹಾಕದಂತೆ ತಾಕೀತು ಮಾಡಿದ ಅಧ್ಯಕ್ಷ
ಚಿಕ್ಕಬಳ್ಳಾಪುರ ನಗರವನ್ನು ಸ್ವಚ್ಛ ಹಾಗೂ ಸುಂತರವಾಗಿ ರೂಪಿಸಲು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ತೀವ್ರ ಸಾಹಸ ಮಾಡುತ್ತಿದ್ದಾರೆ. ರಸ್ತೆ ಪಕ್ಕ ಕಸ ಹಾಕುವುದು, ಹಸಿ ಕಸ, ಒಣ ಕಸ ಬೇರ್ಪಡಿಸದಿರುವುದು ಮುಂತಾದ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತಲಾ ಒಂದು ವಾರ್ಡಿನ ಜಾಗೃತಿ ಮೂಡಿಸುತ್ತಿದ್ದು, ಈ ಕುರಿತು ವರದಿ ಇಲ್ಲಿದೆ.
ಚಿಕ್ಕಬಳ್ಳಾಪುರ ನಗರದ ನಾಗರಿಕರು ಕಸದ ವಾಹನ ಬರುತ್ತಿದ್ದರೂ ನೀಡದೆ ರಸ್ತೆ ಪಕ್ಕ ಹಾಕುವುದನ್ನೇ ರೂಡಿಸಿಕೊಂಡಿದ್ದಾರೆ. ಈ ಸಂಬ0ಧ ಹಲವು ಬಾರಿ ಸಿಟಿವಿ ವರದಿಯನ್ನೂ ಮಾಡಿತ್ತು. ಅಳ್ಲದೆ ಸಿಟಿವಿ ನ್ಯೂಸ್‌ನಲ್ಲಿ ಪ್ರಸಾರವಾಗಿತ್ತಲ್ಲ ವಾರ್ಡ್ ಪ್ರಾಬ್ಲಂ, ಈ ಕಾರ್ಯಕ್ರಮದಲ್ಲಿಯೂ ಅಸ್ವಚ್ಛತೆಯ ಬಗ್ಗೆ ನಗರಸಭೆ ಗಮನ ಸೆಳೆಯಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ನಗರಸಭೆ ಅಧ್ಯಕ್ಷ ಗಜೇಂದ್ರ ಮತ್ತು ಉಪಾಧ್ಯಕ್ಷ ನಾಗರಾಜ್ ಅವರು ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ನಗರದ 28ನೇ ವಾರ್ಡಿನಲ್ಲಿ ಡಜಾಗೃತಿ ಕಾರ್ಯಕ್ರಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅಧ್ಯಕ್ಷ ಗಜೇಂದ್ರ, ರಸ್ತೆ ಪಕ್ಕ ಕಸ ಹಾಕುವವರಿಗೆ ಕಸದ ವಾಹನಗಳಿಗೇ ಕಸ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಮನವಿಗಳಿಗೆ ಸ್ಪಂದಿಸದೆ ನಾಳೆಯಿಂದ ರಸ್ತೆ ಪಕ್ಕದಲ್ಲಿಯೇ ಕಸ ಹಾಕಿದರೆ, ಯಾರು ಕಸ ತಂದು ರಸ್ತೆ ಪಕ್ಕ ಸುರಿದಿರುತ್ತಾರೋ ಅವರ ಮನೆಗಳಿಗೆ ವಾಪಸ್ ಕಸ ತೆಗೆದುಕೊಂಡುಹೋಗಿ ಸುರಿಯುವಂತೆ ಸ್ಥಳೀಯರಿಗೆ ಮನವಿ ಮಾಡಿದರು.
ಅಲ್ಲದೆ ಪರಿಸರ ಅಭಿಯಂತರ ಉಮಾಶಂಕರ್ ಅವರೊಂದಿಗೆ ಖುದ್ದು ಮನೆ ಮನೆಗೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಗಜೇಂದ್ರ, ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ಮನವಿ ಮಾಡಿದರು. ಇದರಿಂದ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಲು ಸಾಧ್ಯವಾಗಲಿದ್ದು, ಪ್ರತಿ ಮನೆಯಲ್ಲಿಯೂ ಕಸ ಬೇರ್ಪಡಿಸಿ ನೀಡುವುದರಿಂದ ನಗರಸಭೆಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಇನ್ನು ಪರಿಸರ ಅಭಿಯಂತರ ಉಮಾ ಶಂಕರ್ ಮಾತನಾಡಿ, ಪ್ರಸ್ತುತ ಪ್ರತಿನಿತ್ಯ 7 ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲು ರೈತರಿಗೆ ನೀಡಲಾಗುತ್ತಿದೆ. ನಾಗರಿಕರು ಆಸಕ್ತಿ ವಹಿಸಿ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿ ನೀಡಿದಲ್ಲಿ ಇದು ಪ್ರತಿನಿತ್ಯ 10 ರಿಂದ 12 ಟನ್ ಹಸಿ ಕಸವನ್ನು ರೈತರಿಗೆ ನೀಡಬಹುದಾಗಿದೆ. ಇದರಿಂದ ನಗರಸಭೆ ನಿರ್ವಹಣೆ ಸುಲಭವಾಗಲಿದೆ. ಹಾಗಾಗಿ ನಗರದ ಪ್ರತಿಯೊಬ್ಬ ನಾಗರಿಕರೂ ಕಸ ವಿಂಗಡಣೆ ಮಾಡಿ ನೀಡಬೇಕೆಂದು ಕೋರಿದರು.
ಇನ್ನು ಉಪಾಧ್ಯಕ್ಷ ನಾಗರಾಜ್ ಅವರು ನಗರದ 4,5 ಮತ್ತು 6ನೇ ವಾರ್ಡುಗಳಲ್ಲಿ ಸ್ವಹ ಕಸದ ವಾಹನ ಓಡಿಸುವ ಮೂಲಕ ಗಮನ ಸೆಳೆದರು. ಮೂರೂ ವಾರ್ಡುಗಳಲ್ಲಿ ಕಸದ ವಾಹನ ಚಲಾಯಿಸಿಕೊಂಡು ಹೋದ ನಾಗರಾಜ್, ಸುಂದರ ಮತ್ತು ಸ್ವಚ್ಛ ಚಿಕ್ಕಬಳ್ಳಾಪುರ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕೆಂದು ಕೋರಿದರು. ಅಲ್ಲದೆ ಚರಂಡಿಗಳ ಅಕ್ಕಪಕ್ಕ ಬೆಳೆದಿರುವ ಹುಲ್ಲು ಸೇರಿದಂತೆ ಇತರೆ ಗಿಡ ಗಂಟಿಗಳನ್ನು ನಾಗರಾಜ್ ಅವರೇ ಗ್ರಾಸ್ ಕಟರ್ ಮೂಲಕ ಕತ್ತರಿಸಿದರು.
ನಗರವನ್ನು ಸ್ವಚ್ಛವಾಗಿಡುವುದರಿಂದ ಆರೋಗ್ಯವಂತ ನಗರವನ್ನಾಗಿ ರೂಪಿಸಬಹುದಾಗಿದೆ. ಅದೇ ಕಾರಣಕ್ಕೆ ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಈ ಜಾಗೃತಿ ಕಾರ್ಯಕ್ರಮಗಳಿಂದ ನಗರದಲ್ಲಿ ಸುಭಾರಣೆಯಾಗುತ್ತಿದೆ ಎಂದರು. ನಗರಸಭೆಯ ಸ್ವಚ್ಛ ಅಭಿಯಾನಕ್ಕೆ ನಾಗರಿಕರು ಸ್ಪಂಧಿಸುತ್ತಿದ್ದಾರೆ, ರಸ್ತೆಯಲ್ಲಿ ಕಸ ಹಾಕುವುದು ಕಡಿಮೆಯಾಗಿದೆ. ಈವರೆಗೂ ರಸ್ತೆಯ ಪಕ್ಕ ಕಸ ಹಾಕುತ್ತಿದ್ದ ಜಾಗಗಳು ಇದೀಗ ಸ್ವಚ್ಛವಾಗಿ ಕಾಣುತ್ತಿವೆ ಎಂದು ಹೇಳಿದರು.
ಕಸದ ವಾಹನ ಹೆಚ್ಚು ಸಮಯ ಬೇಕಾದರೂ ಮನೆಗಳ ಮುಂದೆ ನಿಲ್ಲಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಸದ ವಾಹನಕ್ಕೆ ಮಾತ್ರ ಕಸ ನೀಡಬೇಕು, ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಬೇಕು ಎಂದು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಎಚ್ಚೆತ್ತ ನಾಗರಿಕರು ಕಸದ ವಾಹನಕತ್ಕೇ ಕಸ ನೀಡಲು ಮುಂದಾಗುತ್ತಿದ್ದಾರೆ. ಇಂತಹವರಿಗೆ ಜನರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಉಪಾಧ್ಯಕ್ಷರು, ನಗರವನ್ನು ಸುಂದರ ಮತ್ತು ಸ್ವಚ್ಛವಾಗಿಡಲು ಎಲ್ಲರೂ ಕೈ ಜೋಡಿಸುವಂತೆ ಕೋರಿದರು.