ರಾಜ್ಯ ಸರಕಾರಿ ಅಂಗವಿಕಲ ನೌಕರರಿಂದ ಪ್ರತಿಭಟನೆ
1 min readಅಂಗವಿಕಲರ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯ
ನಾನಾ ಬೇಡಿಕೆ ಈಡೇರಿಕಗೆ ಆಗ್ರಹಿಸಿ ಪ್ರತಿಭಟನೆ
ರಾಜ್ಯ ಸರಕಾರಿ ಅಂಗವಿಕಲ ನೌಕರರಿಂದ ಪ್ರತಿಭಟನೆ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಧರಣಿ
ಅ0ಗವಿಕಲರ ಅಭಿವೃದ್ಧಿ ನಿಗಮ ಸ್ಥಾಪನೆ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.6ರಷ್ಟು ಪ್ರಯಾಣ ಹತ್ಯೆ ಆದೇಶ ಜಾರಿ, ಕೇಂದ್ರ ಸರಕಾರದ ಸುಗಮ್ಯ ಯೋಜನೆಯಡಿ ಸರಕಾರಿ ಕಚೇರಿಗಳಲ್ಲಿ ವಿಕಲ ಚೇತನ ಸ್ನೇಹಿ ಸೌಕರ್ಯ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಳ ಈಡೇರಿಕಗೆ ಆಗ್ರಹಿಸಿ ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘದಿ0ದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಎದುರು ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇಂದು ಪ್ರಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಆರ್.ವಿ. ಮುನಿರಾಜು ಮಾತನಾಡಿ, ಅಂಗವಿಕಲ ಸರಕಾರಿ ನೌಕರರಿಗೆ ವೇತನಾ ಆಯೋಗ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು, ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರು, ಉಪನ್ಯಾಸಕರು ಬೋಧಕೇತರ ವರ್ಗದ ನೌಕರರ ಸೇವಾವಧಿಯಲ್ಲಿ ಒಂದು ಬಾರಿ ನೀಡುವ ವರ್ಗವಣೆ ಪ್ರಕ್ರಿಯೆ ನಿಯಮವನ್ನು ಕೈಬಿಟ್ಟು, ಅವರ ಪರಿಸ್ಥಿತಿಗೆ ಅನುಗುಣವಾಗಿ ಆಧ್ಯತೆ ಮೇಲೆ ಸೇವಾವಧಿಯಲ್ಲಿ ಎಷ್ಟು ಬಾರಿಯಾದರೂ ವರ್ಗಾವಣೆ ಪಡೆಯಲು ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ವಿಶೇಷ ಚೇತನ ಅರ್ಹತೆಯುಳ್ಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದನ್ವಯ ಸರಕಾರಿ ಇಲಾಖೆಗಳಲ್ಲಿ ಹಿಂದಿನಿ0ದಲೂ ಮೀಸಲಾಗಿರುವ ಭರ್ತಿ ಮಾಡದ ಬ್ಯಾಕ್ಲಾಗ್ ಹುz್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು, ರಾಜ್ಯದ ನಿರುದ್ಯೋಗಿ ವಿಶೇಷ ಚೇತನರ ಜೀವನ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ನೀಡುತ್ತಿರುವ ಪೋಷಣಾ ಹತ್ಯೆ ತಿಂಗಳಿಗೆ ೫ ಸಾವಿರ ನೀಡಬೇಕು. ಗ್ರಾಮೀಣ ಪುನರ್ವಸತಿ ಯೋಜನೆಯಡಿ ಗೌರವವನ ಆಧಾರದಲ್ಲಿ ಸುಮಾರು ೧೫ ವರ್ಷಗಳಿಗೂ ಅಧಿಕ ಕಾಲದಿಂದ ಸೇವೆಸಲ್ಲಿಸುತ್ತಿರುವ ವಿಶೇಷ ಚೇತನ ಕಾರ್ಯಕರ್ತರನ್ನು ಖಾಯಂಗೊಳಿಸಿ ಉದ್ಯೋಗ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ವಿಶೇಚ ಚೇತನರ ಮೇಲೆ ಇಲಾಖೆಗಳಲ್ಲಿ ನಡೆಯುತ್ತಿರುವ ಶೋಷಣೆ, ಕಿರುಕುಳ ತಪ್ಪಿಸಲು 2016ರ ಕಾಯ್ದೆಯನ್ವಯ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು. ಬಸ್ ಪಾಸ್ 100 ಕಿ.ಮಿ.ಮಿತಿ ರದ್ಧುಮಾಡಿ ಶಕ್ತಿ ಯೋಜನೆ ಮಾದರಿಯಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು. ಸುಗಮ್ಯ ಯೋಜನೆಯಂತೆ ರಾಜ್ಯದ ಉದ್ದಗಲಕ್ಕೂ ಇರುವ ಸರಕಾರಿ ಕಚೇರಿಗಳಲ್ಲಿ ರ್ಯಾಂಪ್‌ಗಳು, ಲಿಗಳು, ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಖಜಾಂಚಿ ಚಂದ್ರಪ್ಪ, ಗೌರವಾಧ್ಯಕ್ಷ ಡಾ.ಆರ್. ನಾರಾಯಣಸ್ವಾಮಿ, ಎ.ವಿ. ವೆಂಕಟನರಸಪ್ಪ, ಪ್ರಕಾಶ್, ನಾಗರಾಜ್, ಶಶಿಧರ್, ಗೀತಾ, ಶಿವಣ್ಣ, ವಿಶ್ವನಾಥ್ ಇದ್ದರು.