ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಸಿಪಿಎಂ 18ನೇ ಜಿಲ್ಲಾ ಸಮ್ಮೇಳನಕ್ಕೆ ನಿಧಿ ಸಂಗ್ರಹ

1 min read

ಸಿಪಿಎಂ 18ನೇ ಜಿಲ್ಲಾ ಸಮ್ಮೇಳನಕ್ಕೆ ನಿಧಿ ಸಂಗ್ರಹ

21ರಿ0ದ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನ

ವಿವಿಧ ಬೇಡಿಕೆಗಳೊಂದಿಗೆ ನಡೆಯಲಿರುವ ಸಮ್ಮೇಳನ

ಕೃಷ್ಣಾನದಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಿ, ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿ,ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ, ಬಡವರಿಗೆ ಭೂಮಿ, ನಿವೇಶನ, ಮನೆ ಕಲ್ಪಿಸಲು ಆಗ್ರಹಿಸಿ ನವೆಂಬರ್ 21,22 ರಂದು ಬಾಗೇಪಲ್ಲಿ ಹೊರವಲಯದ ಕೊಂಡ0ವಾರಿಪಲ್ಲಿ ಎಸ್‌ಎಲ್‌ಎನ್ ಕಲ್ಯಾಣ ಮಂಟಪದಲ್ಲಿ ಸಿಪಿಎಂ ಜಿಲ್ಲೆ 18ನೇ ಸಮ್ಮೇಳನ ನಡೆಸಲಿದ್ದು, ಇದಕ್ಕಾಗಿ ನಿಧಿ ಸಂಗ್ರಹ ಮಾಡಲಾಗುತ್ತಿದೆ.

18ನೇ ಸಿಪಿಎಂ ಜಿಲ್ಲಾ ಸಮ್ಮೇಳನಕ್ಕಾಗಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದ ಸಿಪಿಎಂ ಕಾರ್ಯದರ್ಶಿ ವಾಲ್ಮೀಕಿ ಆಶ್ವಥಪ್ಪ, ಬಾಗೇಪಲ್ಲಿ ಪಟ್ಟಣದ ಅಂಗಡಿ ಹಾಗೂ ಮನೆಮನೆಗೆಲ್ಲಿ ನಿಧಿ ಸಂಗ್ರಹ ಮಾಡಿ ಮಾತನಾಡಿದರು. ಸಿಪಿಎಂ 18ನೇ ಜಿಲ್ಲಾ ಸಮ್ಮೇಳನ ನವೆಂಬರ್ 21 ಹಾಗೂ 22 ರವರೆಗೆ ನಡೆಯಲಿದ್ದು, ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇದೆ. ಜಿಲ್ಲಾದ್ಯಂತ ಭಾರೀ ಪ್ರಚಾರ ಮತ್ತು ಜನಸಾಮಾನ್ಯರ ನಡುವೆ ಸಂಘಟನಾ ಚಳುವಳಿ ಮಹತ್ವ ಸಾರುವ ಕೆಲಸ ಭರದಿಂದ ಸಾಗಿದೆ ಎಂದರು.

18ನೇ ಸಮ್ಮೇಳನದ ಭಾಗವಾಗಿ ಸಿಪಿಎಂ ಕಾರ್ಯಕರ್ತೆಯರು ಪ್ರಚಾರದೊಂದಿಗೆ ನಿಧಿ ಸಂಗ್ರಹ ಹಮ್ಮಿಕೊಂಡಿದ್ದರು. ಪಟ್ಟಣದ ಡಿ.ವಿ.ಜಿ.ರಸ್ತೆಯಲ್ಲಿ ಅಂಗಡಿ ಹಾಗೂ ಮನೆಮನೆಗೆ ಭೇಟಿ ನೀಡಿ ನಿಧಿ ಸಂಗ್ರಹ ಅಭಿಯಾನ ನಡೆಸುವ ಸಂದರ್ಭದಲ್ಲಿ ಅಂಗಡಿ ಮಾಲೀಕರು ಹಾಗೂ ಬಡವರು ನಿಧಿ ಸಂಗ್ರಹಕ್ಕೆ ಸಹಾಯ ಮಾಡಿ ಸಾಥ್ ನೀಡಿದ್ದಾರೆ.

ಸಿಪಿಎಂ ಖಜಾಂಚಿ ಎಂ.ಎನ್. ರಘುರಾಮ ರೆಡ್ಡಿ ಮಾತನಾಡಿ, ಸಿಪಿಎಂ ಕಳೆದ 70 ವರ್ಷಗಳಿಂದ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಚಳುವಳಿ, ಹೋರಾಟಗಳನ್ನು ನಡೆಸುತ್ತಾ ದುಡಿಯುವ ವರ್ಗಗಳ ಪಕ್ಷವಾಗಿದೆ. ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರ ಬೆಳೆಗಳು ಕಮರಿಹೋಗಿವೆ. ರೈತರು ದಿವಾಳಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ತಾಲ್ಲೂಕಿನಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಕೂಲಿಕಾರರು ಮತ್ತು ಯುವಜನರು ಹಳ್ಳಿಗಳಲ್ಲಿ ಜೀವನೋಪಾಯದ ಅವಕಾಶಗಳಿಲ್ಲದೆ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಉದ್ಯೋಗಾಧರಿತ ಕೈಗಾರಿಕೆಗಳ ಸ್ಥಾಪನೆ ಅತ್ಯಗತ್ಯವಾಗಿದೆ. ಈ ಭಾಗದ ಜನರ ಕೃಷಿ ಮತ್ತು ಬದುಕಿಗೆ ಕೃಷ್ಣಾ ನದಿ ನೀರು ಹರಿಸಿ ಶಾಶ್ವತ ನೀರಾವರಿ ಯೋಜನ ಕಲ್ಲಿಸಲು ಜನಾಂದೋಲನ ನಡೆಸುವ ಮೂಲಕ ಸರ್ಕಾರದ ಕಣ್ಣು ತೆರೆಸಬೇಕಿದೆ. ಸಿಪಿಎಂ ಜಿಲ್ಲಾ 18ನೇ ಸಮ್ಮೇಳನ ಮಹತ್ವ ಪಡೆದುಕೊಂಡಿದೆ. ಹಾಗಾಗಿ ಸಾರ್ವಜನಿಕರು ಧನ ಸಹಾಯ ಮಾಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ನಾಗರಾಜು,ಸಿಐಟಿಯು ಮುಖಂಡ ಮುಸ್ತಾ,ಸಿಪಿಎಂ ಮುಖಂಡ ಮುನಿಯಪ್ಪ, ಜಿ. ಕೃಷ್ಣಪ್ಪ, ರಫಿಕ್ ಇದ್ದರು.

About The Author

Leave a Reply

Your email address will not be published. Required fields are marked *