ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ಚೌಡಪ್ಪ, ರಘು, ಶಿವ ಅಕ್ರಮಗಳ ತನಿಖೆಗೆ ಆಗ್ರಹವಕ್ಫ್ ಬೋರ್ಡ್ ಹೆಸರಿನಲ್ಲಿ ಸರಕಾರದ ಕರ್ಮಕಾಂಡ ವಿರೋಧಿಸಿ ಪ್ರತಿಭಟನೆ

1 min read

ವಕ್ಫ್ ಬೋರ್ಡ್ ಹೆಸರಿನಲ್ಲಿ ಸರಕಾರದ ಕರ್ಮಕಾಂಡ ವಿರೋಧಿಸಿ ಪ್ರತಿಭಟನೆ

ಚಿಕ್ಕಬಳ್ಳಾಪುರದಲ್ಲಿ ಸಂಚಾರಕ್ಕೆ ಬ್ರೇಕ್ ಹಾಕಿ, ಅರ್ಧಗಂಟೆಗೂ ಹೆಚ್ಚುಕಾಲ ಹೋರಾಟ

ಪ್ರತಿಭಟನೆಯಿಂದ ಪರದಾಡಿದ ವಾಹನ ಸವಾರರು, ವಾಹನ ಸಂಚಾರ ಬಂದ್

ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಬೋರ್ಡ್ ಹೆಸರಿನಲ್ಲಿ ಲ್ಯಾಂಡ್ ಜೀಹಾದ್ ನಡೆಸುತ್ತಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕೈಗೊಂಬೆಯ0ತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರ್ತಿಸಿ, ಹಿಂದೂ ವಿರೋಧಿ ಧೋರಣೆ ತಾಳಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ, ಸಚಿವ ಜಮೀರ್ ಅಹ್ಮದ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಅಲ್ಲದೆ ಪ್ರಸ್ತುತ ರಾಜ್ಯ ಸರ್ಕಾರ ವಕ್ಫ್ ಬೋರ್ಟ್ ಹೆಸರಿನಲ್ಲಿ ನಡೆಸುತ್ತಿರುವ ಲ್ಯಾಂಡ್ ಜಿಹಾದ್ ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟಸರಕಾರವಾಗಿದೆ. 16ಸಾವಿರಕ್ಕೂ ಅಧಿಕ ರೈತರ ಜಮೀನು ವಕ್ಫ್ ಬೋರ್ಡ್ಗೆ ಸೇರಿದ್ದು ಎಂದುರಂ ನಂಬರ್ 11ರಲ್ಲಿ ದಾಖಲಿಸಿ, ರಾತ್ರೋ ರಾತ್ರಿ ಪಹಣಿಗಳಲ್ಲಿ ದಾಖಲಿಸಿ ಲ್ಯಾಂಡ್ ಜೀಹಾದ್ ನಡೆಸಲು ಮುಂದಾಗಿದೆ ಎಂದು ಕಿಡಿ ಕಾರಿದರು.

ರೈತರ ಜಮೀನು, ಮಠಮಾನ್ಯಗಳ ಜಮೀನು ಸಾವಿರಾರು ವರ್ಷಗಳಿಂದ ರೈತರು ತಮ್ಮ ಅನುಭವನದಲ್ಲಿರುವ ದಾಖಲಾತಿ ಹೊಂದಿರುವ ಭೂಮಿಗೂ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದು ಮಾಡುತ್ತಿರುವುದು ಹಿಂದುಗಳಿಗೆ ಕಂಟಕ ಮಾತ್ರವಲ್ಲ ಶುದ್ಧತಪ್ಪು. ಇವೆಲ್ಲಾ ಹಿಂದೂ ಸಮುದಾಯವನ್ನು ಒಕ್ಕಲೆಬ್ಬಿಸುವ ಕೆಲಸವಾಗಿದ್ದು, ಕಾಂಗ್ರೆಸ್ ಸರಕಾರ ಅಲ್ಲಾ ಇನ್ಯಾರೆ ಬಂದರೂ ಇದನ್ನು ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.

ಸ್ವಾತಂತ್ರ ಬಂದು 77ವರ್ಷಗಳೇ ಆಗಿದ್ದರು, 9.40 ಲಕ್ಷ ಎಕರೆ ಭೂಮಿ ವಕ್ಫ್ ಬೋರ್ಡ್ಗೆ ಸೇರಿದ ಭೂಮಿ ಎಂದು ದಾಖಲೆಗಳನ್ನು ತಿದ್ದಲು ಹೊರಟಿರುವ ಸರಕಾರಕ್ಕೆ ನಾಚಿಕೆ ಆಗಬೇಕು. ಭಾರತೀಯ ಸಂವಿಧನಕ್ಕೆ ಬೆಲೆ ನೀಡದೆ ವಕ್ಫ್ ಬೋರ್ಡ್ ಹೇಳಿಲ್ಲೆ ಸರಿ ಎಂದು ಹೇಳುತ್ತಿರುವುದು ದುರಂತ. ಇವರು ಯಾವುದೇ ಮೂಲ ದಾಖಲೆಗಳಿಲ್ಲದೆ ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ಹೆಸರಿನಲ್ಲಿ ಪಹಣಿ ವಾಪಸ್ಸು ಮಾಡುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಉಪಚುನಾವಣೆ ಹಿನ್ನೆಲೆ ಮತ್ತು ಪ್ರತಿಭಟನೆ ಹತ್ತಿಕ್ಕುವ ಕೆಲಸದ ಭಾಗವಾಗಿ ಮುಖ್ಯಮಂತ್ರಿಗಳು ರೈತರ ವಿರುದ್ಧದ ಆದೇಶ ವಾಪಸ್ಸು ಪಡೆಯುವ ಮಾತಾಡಿದ್ದಾರೆ ಹೊರತು ಇದರಲ್ಲಿ ಹಿಂದೂ ಸಮಾಜದ ಪರವಾದ ಕಾಳಜಿ ಇಲ್ಲವಾಗಿದೆ ಎಂದು ದೂರಿದರು.

ಪ್ರತಿಭಟನೆಯಿಂದಾಗಿ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸಿದ್ದರಿಂದ ವಾಹನ ಸವಾರರರು ಕಿರಿಕಿರಿ ಅನುಭವಿಸುವಂತಾಗಿತ್ತು. ಎಂಜಿ ರಸ್ತೆ, ಜಿಲ್ಲಾಡಳಿತ ಭವನದ ರಸ್ತೆ, ವಾಪಸಂದ್ರ ರಸ್ತೆ, ಬಿಬಿ ರಸ್ತೆಗಳಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು. ವಾಹನ ಸಂಚಾರಕ್ಕೆ ಅಡಚಣೆ ಮಾಡದಂತೆ ಪೊಲೀಸರು ಎಷ್ಟೇ ಮನವಿ ಮಾಡಿದರೂ ಪ್ರತಿಭಟನಾಕಾರರು ರಸ್ತೆ ಬಿಟ್ಟು ಕದಲಲಿಲ್ಲ.

 

About The Author

Leave a Reply

Your email address will not be published. Required fields are marked *