ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಜೈನ್ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಹೃದ್ರೋಗ ತಪಾಸಣೆ

1 min read

ಜೈನ್ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಹೃದ್ರೋಗ ತಪಾಸಣೆ

ಜೈನ್ ಮಿಷನ್ ಆಸ್ಪತ್ರೆಯಲ್ಲಿ ನೂತನ ಯಂತ್ರಗಳ ಅಳವಡಿಕೆ

ಲಾಭ ರಹಿತ ಚಿಕಿತ್ಸೆ ನೀಡಲು ಆಸ್ಪತ್ರೆ ನಿರಂತರ ಶ್ರಮದ ಭರವಸೆ

ಚಿಕ್ಕಬಳ್ಳಾಪುರ ಹೊರವಲಯದಲ್ಲಿರುವ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಇಂದು ನೂತನ ಯಂತ್ರಗಳ ಅಳವಡಿಕೆ ಸಂಭ್ರಮ. ಅಲ್ಲದೆ, ಉಚಿತ ಹೃದಯ ರೋಗ ತಪಾಸಣಾ ಶಿಬಿರವೂ ನಡೆಯುತ್ತಿದೆ. ಜೊತೆಗೆ ಡಯಾಲಸಿಸ್ ಸತತ ಎರಡು ವರ್ಷಗಳ ಕಾಲ ಉಚಿತವಾಗಿ ಮಾಡುವುದಾಗಿ ಈಗಾಗಲೇ ಆಸ್ಪತ್ರೆ ಘೋಷಿಸಿದೆ. ಇದರಿಂದಾಗಿ ಜೈನ್ ಮಿಷನ್ ಆಸ್ಪತ್ರೆಯಲ್ಲಿ ನೂತನ ಸಂಭ್ರಮವೇ ಮನೆ ಮಾಡಿತ್ತು.

ಚಿಕ್ಕಬಳ್ಳಾಪುರದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ನೂತನ ಯಂತ್ರಗಳ ಅಳವಡಿಕೆ ಮಾಡಲಾಯಿತು. 48 ಲಕ್ಷ ವೆಚ್ಚದ ವಿವಿಧ ಚಿಕಿತ್ಸಾ ಯಂತ್ರಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಇದರಿಂದ ರೋಗಿಗಳಿಗೆ ರೋಗ ಪತ್ತೆ ಹಚ್ಚುವ ಜೊತೆಗೆ ಚಿಕಿತ್ಸೆ ವಿಧನವೂ ಸುಲಭವಾಗಲಿದ್ದು, ಲಾಭ ರಹಿತ ಉಪಕ್ರಮವಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಘೋಷಣೆ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜೈನ್ ಮಿಷನ್ ಆಸ್ಪತ್ರೆ ಅಧ್ಯಕ್ಷ ನರ್ಪತ್ ಸೋಲಂಕಿ, 48 ಲಕ್ಷ ವೆಚ್ಚದ ಯಂತ್ರಗಳನ್ನು ಇಂದು
ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಅನಸ್ತೇಷಿಯಾ, ಜಾನ್ಸನ್ ಅಂಡ್ ಜಾನ್ಸ್ನ್ ಡ್ರಿಲ್ ಮಿಷಿನ್, ವಾರ್ಮರ್ ಸೇರಿದಂತೆ ಇತರೆ ಹಲವು ಯಂತ್ರಗಳನ್ನು ಆಶ್ಪತ್ರೆಯಲ್ಲಿ ಅಳವಡಿಸಲಾಗಿದೆ. ಇದರಿಂದ ರೋಗ ಪತ್ತೆ ಹಚ್ಚುವ ಜೊತೆಗೆ ಚತಿಕಿತ್ಸೆ ನೀಡಲು ಸಹಕಾರಿಯಾಗಲಿದ್ದು, ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಅಗತ್ಯ ಕ್ರಮಗಳನ್ನು ವಹಿಸುವುದಾಗಿ ಅವರು ಭರವಸೆ ನೀಡಿದರು.

ಜಾನ್ಸನ್ ಅಂಡ್ ಜಾನ್ಸನ್ ಡ್ರಿಲ್ ಮಿಷಿನ್ 25 ಲಕ್ಷ ವೆಚ್ಚವಾಗಿದ್ದು, ಇದು ಮೂಳೆ ಶಸ್ತ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಅದೇ ರೀತಿಯಲ್ಲಿ ಕಣ್ಣಿಗಾಗಿ ಲೇಸರ್ ಯಂತ್ರವನ್ನೂ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಚಿಕಿತ್ಸೆಗಳನ್ನೂ ಲಾಭ ರಹಿತವಾಗಿ ಮಾಡಲಾಗುವುದು, ನೇತ್ರ ಚಿಕಿತ್ಸಾ ಶಿಬಿರ ಎರಡು ತಿಂಗಳ ಕಾಲ ನಡೆಯಲಿದ್ದು, ಇದು ಸಂಪೂರ್ಣ ಉಚಿತವಾಗಿ ಮಾಡಲಾಗುತ್ತಿದೆ ಎಂದರು. ಅಲ್ಲದೆ ನುರಿತ ತಜ್ಞ ವೈದ್ಯರಿಂದ ಹೃದಯ ತಪಾಸಣಾ ಶಿಬಿರ ನಡೆಯುತ್ತಿದ್ದು, ಇದು ಸಂಪೂರ್ಣ ಉಚಿತವಾಗಿದೆ ಎಂದರು.

ಹೃದಯ ತಪಾಸಣಾ ಶಿಬಿರ ಇಂದು ಆರಂಭವಾಗಿದ್ದು, ಮುಂದಿನ ಮೂರು ದಿನಗಳ ಕಾಲ ನಡೆಯಲಿದೆ. ಹಿರಿಯ ಹೃದಯ ತಜ್ಞರಿಂದ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಬಡವರು ಸದುಪಯೋಗಪಡಿಸಿಕೊಳ್ಳುವಂತೆ ಡಾ. ನರ್ಪತ್ ಸೋಲಂಕಿ ಅವರು ಮನವಿ ಮಾಡಿದರು.

About The Author

Leave a Reply

Your email address will not be published. Required fields are marked *