ಕಲ್ಲು ಗಣಿಗಾರಿಕೆಯಿಂದ ಸಾರ್ವಜನಿಕರಿಗೆ ಕಂಟಕ
1 min readಕಲ್ಲು ಗಣಿಗಾರಿಕೆಯಿಂದ ಸಾರ್ವಜನಿಕರಿಗೆ ಕಂಟಕ
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ, ಜನರಿಗೆ ತಪ್ಪದ ಸಂಕಟ
ಕಲ್ಲು ಗಣಿಗಾರಿಕೆ ಎಂಬುದು ಬಾಗೇಪಲ್ಲಿ ತಾಲೂಕಿಗೆ ಶಾಪವಾಗಿ ಪರಿಣಮಿಸಿದೆ. ರಸ್ತೆಗಳು ಹಾಳಾಗಿ ಜನರು ಸಂಚರಿಸಲು ಸಂಕಷ್ಟ ಎದುರಿಸುತ್ತಿರುವುದು ಒಂದು ಕಡೆಯಾದರೆ, ನೀರು ಗಾಳಿ ಕಲುಷಿತವಾಗಿ ಮಾಲಿನ್ಯ ಎದುರಿಸುತ್ತಿರುವುದು ಮತ್ತೊಂದು ಕಡೆ. ಸಮಸ್ಯೆ ದಿನೇ ದಿನೇ ಗಂಭೀರ ಸ್ವರೂಪ ಪಡೆಯುತ್ತಿದ್ದರೂ ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿರೋದು ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ, ಮಾರಗಾನಕುಂಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಆ ಭಾಗದ ಬಹುತೇಕ ಎಲ್ಲಾ ಬೆಟ್ಟ ಗುಡ್ಡಗಳು ನೆಲಸಮವಾಗಿ ಧೂಳು ಮಯವಾಗಿವೆ. ಈ ಕುರಿತು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದರೂ, ಸಂಬ0ಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ.
ಇದರ ಪರಿಣಾಮ ಆ ಭಾಗದ ಪರಿಸರ ವೈವಿದ್ಯತೆ ಈಗಾಗಲೇ ನಾಶವಾಗಿದೆ. ಕುರಿ ಮೇಕೆ ಸಾಕಾಣಿಕೆದಾರರ ಬದುಕಿನ ಮೇಲೆ ಪೆಟ್ಟು ಬಿದ್ದಿದೆ. ಅಲ್ಲದೆ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಂಪಲ್ಲಿ, ಮಾಡಪಲ್ಲಿ, ಜಿಲ್ಲಾಲಪಲ್ಲಿ, ಕೊಲಿಂಪಲ್ಲಿ, ಕೊತ್ತಕೋಟೆ ಸೇರಿದಂತೆ ಹಲವು ಗ್ರಾಮೀಣ ಜನರ ಬದುಕಿನಾಸರೆ ಕುರಿ, ಮೇಕೆ, ಹಸುಗಳ ಸಾಕಾಣಿಕೆಯಾಗಿದೆ. ಅವರೆಲ್ಲರೂ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ವ್ಯಾಪ್ತಿಯ ಗೋಮಾಳಗಳಲ್ಲಿ ಬೆಳೆಯುವ ಹುಲ್ಲು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕಲ್ಲುಗಣಿಗಾರಿಕೆಗೆ ಗೋಮಾಳಗಳ¯್ಲೆ ಅನುಮತಿ ನೀಡಲಾಗಿದೆ. ಹಾಗಾಗಿ ಗ್ರಾಮೀಣ ಜನರ ಜೀವನಾಧಾರ ಕಸಿದುಕೊಂಡ0ತಾಗಿದೆ. ಹೀಗಿರುವಾಗ ಕಲ್ಲು ಗಣಿಗಾರಿಕೆ ಮಾತ್ರ ನಿಯಂತ್ರಣವಾಗಲಿಲ್ಲ.
ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ, ಹೊನ್ನಂಪಲ್ಲಿ ಕೆರೆಗಳಿಗೆ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ವಿಪರೀತ ಮಣ್ಣಿನ ಸವಕಳಿ ಉಂಟಾಗಿದೆ. ಇದರಿಂದಾಗಿ ಅಲ್ಲಿನ ಮಣ್ಣಿನ ಜೊತೆಗೆ ಸ್ಪೋಟಕಗಳಿಗೆ ಬಳಸಿದ ರಾಸಾಯನಿಕಗಳ ಧೂಳು ಮಳೆ ನೀರಿನೊಂದಿಗೆ ಕೆರೆಗಳಿಗೆ ಸೇರುತ್ತಿದ್ದು, ಕೆರೆ ನೀರು ಅಕ್ಷರಶ ಶಾಶ್ವತ ಕೆಮ್ಮಣ್ಣಿನ ಮಡ್ಡಿಯಾಗಿದೆ. ಇದರಿಂದಾಗಿ ಕೆರೆಯಲ್ಲಿ ದಾಹ ನೀಗಿಸಿಕೊಳ್ಳುತ್ತಿರುವ ಜಾನುವಾರಗಳಿಗೆ ಅದೇ ಮಡ್ಡಿಯನ್ನು ಕುಡಿಸಬೇಕಿದೆ.
ಇದೇ ಸಾಲಿಗೆ ಮಾರಗಾನಕುಂಟೆ ದೊಡ್ಡಕೆರೆ ಸೇರಲಿದೆ ಎಂಬ ಆತಂಕ ಸುತ್ತಲಿನ ಹತ್ತಾರು ಗ್ರಾಮಸ್ಥರಲ್ಲಿ ಕಾಡತೊಡಗಿದೆ. ದೊಡ್ಡಕೆರೆ ಎಂದೇ ಪ್ರಸಿದ್ದಿಯಾಗಿರುವ, 1,500ಕ್ಕೂ ಹೆಚ್ಚು ಎಕರೆ ವಿಸ್ತಾರವಾಗಿರುವ ಕೆರೆಯ ಸುತ್ತಲಿನ ಬೆಟ್ಟಗಳಲ್ಲಿ ಅವ್ಯಾಹತವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಅದರ ತ್ಯಾಜ್ಯ ಮಳೆ ನೀರಿನ ಜೊತೆ ಕೆರೆ ತುಂಬುತ್ತಿದೆ. ನೀರು ಇಂಗದ ರೀತಿಯಲ್ಲಿ ಆ ಮಣ್ಣು ಕೆರೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈಗಾಗಲೇ ಮಾಡಪಲ್ಲಿ ಕೆರೆಯಲ್ಲಿ ಸಂಗ್ರಹವಾಗುವ ನೀರು ಶಾಶ್ವತ ಕಡುಕೆಂಬಣ್ಣಕ್ಕೆ ತಿರುಗಿದ್ದು, ಅಲ್ಲಿನ ನೀರು ಮಣ್ಣಿನ ಲಸ್ಸಿಯಂತಾಗಿದೆ.
ಮಾಡಪಲ್ಲಿ ಸಮೀಪದ ಕೊರ್ಲಗುಡ್ಡಂ ಬೆಟ್ಟದ ಸುತ್ತಲೂ ೧೫ಕ್ಕೂ ಹೆಚ್ಚು ಜೀವಂತ ನೀರಿನ ಚಿಲುಮೆಗಳಿದ್ದವು. ಗಣಿಗಾರಿಕೆ ನಡೆಸಲು ಶುರು ಮಾಡಿದ ನಂತರ ಒಂದೊ0ದೆ ಚಿಲುಮೆ ನಾಶವಾಗಿ, ಪ್ರಸ್ತುತ ತೇವಾಂಶವೂ ಇಲ್ಲದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತಿಕೊಂಡು ಇತ್ತ ಗಮನಹರಿಸುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.