ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ಸ್ವಂತ ಖರ್ಚಿನಲ್ಲಿಯೇ ಗ್ರಂಥಾಲಯ ಮಾಡಿದ ನಿವೃತ್ತ ಶಿಕ್ಷಕ

1 min read

ಸ್ವಂತ ಖರ್ಚಿನಲ್ಲಿಯೇ ಗ್ರಂಥಾಲಯ ಮಾಡಿದ ನಿವೃತ್ತ ಶಿಕ್ಷಕ

ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಪ್ರಯತ್ನದಲ್ಲಿ ರೆಡ್ಡಪ್ಪ

ಪ್ರಸ್ತುತ ತಾಂತ್ರಿಕ ಯುಗದಲ್ಲಿ ಓದು ಎಂಬುದು ನಶಿಸುತ್ತಿರುವ ವಿಚಾರ ತೀವ್ರ ಆತಂಕಕಾರಿಯಾಗಿದೆ. ಇನ್ನು ಈ ಹಿಂದೆ ಸಮಯ ಸಿಕ್ಕಾಗಲೆಲ್ಲ ಓದಲು ಪುಸ್ತಕ ದೊರೆಯೋ ಗ್ರಂಥಾಲಯಗಳೆ0ದರೆ ಅದೆಷ್ಟೋ ಜನರಿಗೆ ದಿನನಿತ್ಯದ ದೇವಾಲಯಗಳಾಗಿದ್ದವು. ಆದರೆ ಇದೀಗ ಅಂಗೈಯಲ್ಲಿಯೇ ಪ್ರಪಂಚ ಸಿಗುತ್ತಿರೋ ಕಾರಣ ಎಲ್ಲವೂ ಮೊಬೈಲ್ ಮಯವಾಗಿವೆ. ಹಾಗಾಗಿಯೇ ಗ್ರಂಥಾಲಯಗಳು ತಮ್ಮ ಚಾರ್ಮ್ ಕಳೆದುಕೊಳ್ಳುತ್ತಿವೆ. ಆದರೂ ಇಲ್ಲೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ಮಾಡಿ ಮಾದರಿಯಾಗಿದ್ದಾರೆ.

ಹೌದು, ಪ್ರಸ್ತುತ ಸಾರ್ವಜನಿಕ ಗ್ರಂಥಾಲಯಕ್ಕೆ ಓದುಗರು ಬರೋದೇ ಕಷ್ಟವಾಗಿ ಪರಿಣಮಿಸಿರೋ ಈ ಕಾಲದಲ್ಲಿ ಜಿಲ್ಲಾ ಗ್ರಂಥಾಲಯ, ತಾಲ್ಲೂಕು ಮತ್ತು ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ಮಾಡಲಾಗಿದೆ. ಆದರೆ ಓದುಗರು ಮಾತ್ರ ತೀರಾ ಕಡಿಮೆ. ಆದ್ರೆ ಇಲ್ಲೆಬ್ಬರು ತನ್ನ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೆಳಕಾಗುವ ಉದೇಶದಿಂದಲೇ ಗ್ರಂಥಾಲಯ ಮಾಡಿದ್ದಾರೆ. ಆ ವ್ಯಕ್ತಿ ಯಾರು ಅಂತೀರಾ, ಇವರ ಹೆಸರು ರೆಡ್ಡಪ್ಪ, ವೃತ್ತಿಯಲ್ಲಿ ಶಿಕ್ಷಕ, ಅದ್ರೆ ಈಗ ನಿವೃತ್ತಿ ಹೊಂದಿ ಬಡಮಕ್ಕಳ್ಳಿಗೆ  ಬೆಳಕು ನೀಡುತ್ತಿದ್ದಾರೆ. ಇವರು ಚಿಕ್ಕಬಳ್ಳಾಪುರದ ಸುರಭಿ, ೩ನೇಕ್ರಾಸ್, ಶೆಟ್ಟಿ ಹಳ್ಳಿ ಬಡಾವಣೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂದೆ ಇವರ ಗ್ರಂಥಾಲಯ ಮಾಡಿದ್ದಾರೆ.

ಶಿಕ್ಷಕನಾಗಿ ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಸಾವಿರಾರು ಮಕ್ಕಳಿಗೆ ದಾರಿದೀಪವಾಗಿ ನಿವೃತ್ತಿ ಹೊಂದಿದ ಇವರು, ನಿವೃತ್ತಿ ನಂತರ ಬಡ ಮಕ್ಕಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಸಾಂಸ್ಕೃತಿಕ ಸಾಹಿತ್ಯಿಕ ವಾಗಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ

ತನ್ನ 40 ವರ್ಷದ ಶೈಕ್ಷಣಿಕ ವೃತ್ತಿ ಜೀವನದಲ್ಲಿ ಇವರ ಸಾಧನೆಗೆ ಜನಗಣತಿ ಇಲಾಖೆಯಿಂದ ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಚಿತ್ರದುರ್ಗದ ಚಿಂತನ ಪ್ರಕಾಶನ, ಚಿಂತನ ಶಿಕ್ಷಕ ಪ್ರಶಸ್ತಿ, ಸಿರಿಗನ್ನಡ ಪ್ರಕಾಶನ ಕನ್ನಡ ರತ್ನ ಪ್ರಶಸ್ತಿ, ಕರ್ನಾಟಕ  ಸಮಿತಿ, ಬೆಂಗಳೂರು ರವರು ಜನವಿನ ಪ್ರಶಸ್ತಿ, ಗಾಂಧಿಭವನ ಬೆಂಗಳೂರು ರವರು ಉತ್ತಮ ಸಂಘಟಕನಾಗಿ ಗೌರವಕ್ಕೆ ಪಾತ್ರರಾಗಿದ್ದರೆ.

ಅದೇನೇ ಇರಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಇವರು ನಿವೃತ್ತಿ ನಂತರವೂ ಬಡ ಮಕ್ಕಳ ಶೈಕ್ಷಣಿಕ ಜೀವನದಲ್ಲಿ ದಾರಿದೀಪವಾಗಿದ್ದಾರೆ ಇಂತಹ ವ್ಯಕ್ತಿಗಳಿಗೆ ಸೂಕ್ತ ಸಹಾಯ ದೊರೆತರೆ ಇನ್ನು ಹೆಚ್ಚಿನ ಮಕ್ಕಳಿಗೆ ದಾರಿದೀಪವಾಗುತ್ತಾರೆ

About The Author

Leave a Reply

Your email address will not be published. Required fields are marked *