ಹೈಟೆಕ್ ಕೃಷಿಕ ಜಿ.ಎನ್ ನಾರಾಯಣಸ್ವಾಮಿಗೆ ಗೌರವ ಸನ್ಮಾನ
1 min readಹೈಟೆಕ್ ಕೃಷಿಕ ಜಿ.ಎನ್ ನಾರಾಯಣಸ್ವಾಮಿಗೆ ಗೌರವ ಸನ್ಮಾನ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿ0ದ ಆತ್ಮೀಆಯ ಸನ್ಮಾನ
ಸುವರ್ಣ ಮಹೋತ್ಸವ 2024 ಪ್ರಶಸ್ತಿ ಸ್ವೀಕರಿಸಿದ ಜಿಎನ್‌ಎನ್
ಪ್ರಗತಿಪರ ರೈತ, ಕೃಷಿ ಪಂಡಿತ್, ಹೈಟೆಕ್ ಕೃಷಿಕ, ಹಲವು ವಾಣಿಜ್ಯ ಬೆಳೆಗಳ ಮೊದಲಿಗ ಮರಳುಕುಂಟೆ ಜಿ.ಎನ್. ನಾರಾಯಣಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ಸಂಬ್ರಮ 50 ಸುವರ್ಣ ಮೋಹೋತ್ಸವ 2024 ಪ್ರಶಸ್ತಿ ನೀಡಿ ಸನ್ಮಾನಿಸಿದೆ. ವಿಭಿನ್ನ ಕೃಷಿಯಲ್ಲಿ ತೊಡಗಿರುವ ಮಾದರಿ ಕೃಷಿಕ ಜಿ.ಎನ್ ಎನ್ ಇತ್ತೀಚಿಗೆ ಬೆಂಗಳೂರು ವಿಧನಸೌದದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಪ್ರಶಸ್ತಿ ಪತ್ರ ಹಾಗು ನಗದು ಸ್ವೀಕರಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜತೆಗೆ 40 ಜನ ವಿವಿಧ ಕ್ಷೇತ್ರದ ಸಾಧಕರಿಗೂ ಸುವರ್ಣ ಮಹೋತ್ಸವ 2024 ಪ್ರಶಸ್ತಿ ಘೋಷಿಸಿತ್ತು. ಕೃಷಿ ಕ್ಷೇತ್ರದಲ್ಲಿಯೂ ಇಬ್ಬರನ್ನ ಆಯ್ಕೆ ಮಾಡಿದ್ದು, ಒಬ್ಬರು ಚಿಕ್ಕಬಳ್ಳಾಪುರ ಜಿಲ್ಲೆ ಮರಳುಕುಂಟೆ ಜಿ.ಎನ್. ನಾರಾಯಣಸ್ವಾಮಿ ಅವರೇ ಆಗಿರುವುದು ವಿಶೇಷ. ಸಮಗ್ರ ಕೃಷಿ – ವಿನೂತನ ಬೇಸಾಯದಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತ, ಹೈಟೆಕ್ ಕೃಷಿಕ ಸರ್ಕಾರಕ್ಕೆ ವಿದ್ಯುತ್ ಉತ್ಪಾದಿಸಿಕೊಡುತ್ತಿರುವ ಆಧುನಿಕ ಕೃಷಿಕ ಎಂದೆನಿಸಿಕೊ0ಡಿರುವ ಜಿ.ಎನ್ ನಾರಾಯಣಸ್ವಾಮಿ ನಿನ್ನೆ ಸಂಜೆ ವಿಧನಸೌದ ಮೆಟ್ಟಿಲಿನ ಮೇಲೆ ನಡೆದ ಅದ್ದೂರಿ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮಾಜಿ ಸಂಸದ ವೀರಪ್ಪಮೊಯಿಲಿ, ನಟಿ ಸರೋಜಾದೇವಿ ಸೇರಿದಂತೆ ಇತರೆ ಗಣ್ಯರ ಸಾಲಿನಲ್ಲಿ ಕುಳಿತು ಸನ್ಮಾನ ಸ್ವೀಕರಿಸಿದರು.
ಜಿ ಎನ್ ನಾರಾಯಣಸ್ವಾಮಿ ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ಆದರೂ ಕೃಷಿಯಲ್ಲಿ ಇವರ ಸಾಧನೆ ದೊಡ್ಡದು. ಪೌಲ್ಟಿ ಬ್ರೀಡರ್ ಫಾರಂ, ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್, ರಾಜ್ಯದಲ್ಲೆ ಮೊದಲ ಬಾರಿಗೆ ಡ್ರಾಗನ್ ಪ್ರೂಟ್ ಬೆಳೆಯ ಪ್ರಯೋಗ, ಸಿರಿಧನ್ಯಗಳ ಕೃಷಿಯಲ್ಲಿ ಪ್ರಯೋಗ ಮಾಡಿ ಯಶಸ್ಸು ಗಳಿಸಿದ್ದಾರೆ. ಹಲವು ಪ್ರಥಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬ್ರೀಡರ್‌ಫಾರಂ ಚಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ, ರಾಜ್ಯದಲ್ಲೆ ಮೊದಲಿಗೆ ಡ್ರಾಗನ್ ಪ್ರೂಟ್ ಬೆಳೆದು ಎಲ್ಲರ ಗಮನ ಸೆಳೆದಿರುವ ಇವರಿಗೆ ಈಗಾಗಲೆ
ಜಿಲ್ಲಾಡಳಿತದಿಂದ ಕೃಷಿ ಪಂಡಿತ್ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿ0ದ ಕೆಂಪೇಗೌಡ ಪ್ರಶಸ್ತಿಗೆ ಭಾಜಿನರಾಗಿದ್ದಾರೆ.
ಈ ಕೃಷಿ ಮಾಂತ್ರಿಕ ಜಿ ಎನ್ ನಾರಾಯಣಸ್ವಾಮಿ ಅವರಿಗೆ 72 ವರ್ಷ ವಯಸ್ಸಾಗಿದ್ದು, ಇವರು ಸರ್ಕಾರದಿಂದ ಏನನ್ನೂ ಭಯಸಿಲ್ಲ. ಬದಲಿಗೆ ನಾನು ಸಾಯುವುದರೊಳಗೆ ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಂದ ಒಮ್ಮೆಯಾದ್ರು ಪ್ರಶಸ್ತಿ ಸ್ವೀಕರಿಸಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಇವರ ಆ ಒಂದು ಕನಸನ್ನ ಜಿಲ್ಲಾಡಳಿತವಾಗಲಿ, ಕೃಷಿ ಇಲಾಖೆ ಅಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ಅಂತದೊ0ದು ಅವಕಾಶವನ್ನ ಕಲ್ಪಿಸಿ ಕೊಡಲಿ ಎಂಬುದೆ ನಮ್ಮ ಕಳಕಳಿಯಾಗಿದೆ.