ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 25, 2024

Ctv News Kannada

Chikkaballapura

ವಿಜೃಂಭಣೆಯ ಶ್ರೀ ಕಾರ್ಯ ಸಿದ್ದೇಶ್ವರ ರಥೋತ್ಸವ

1 min read

ಮೈ ರೋಮಾಂಚನಗೊಳಿಸಿದ ರಥೋತ್ಸವ

ವಿಜೃಂಭಣೆಯ ಶ್ರೀ ಕಾರ್ಯ ಸಿದ್ದೇಶ್ವರ ರಥೋತ್ಸವ

ರಥವನ್ನು ಬೆಟ್ಟದ ಮೇಲಕ್ಕೆ ಹೆಗಲ ಮೇಲೆ ಹೊತ್ತ ಭಕ್ತರು

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿ0ದ ನಡೆಯಿತು. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸುಮಾರು ಮೂರು ದಿನಗಳ ಕಾಲ ನಡೆಸಲಾಗುತ್ತದೆ.

ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿ0ದ ನಡೆಯಿತು. ಇಂದು ಮುಂಜಾನೆ ಅರ್ಚಕರು ಕಾಲ್ನಡಿಗೆಯಲ್ಲಿ ಹೋಗಿ ಸುತ್ತೂರಿನ ಕಪಿಲಾ ನದಿಯಲ್ಲಿ ನೀರು ತಂದು ಶ್ರೀ ಸಿದ್ದೇಶ್ವರ ಸ್ವಾಮಿ ವಿಗ್ರಹಕ್ಕೆ ಅಭಿಷೇಕ ಮಾಡಿ ವಿವಿಧ ಧರ್ಮಿಕ ವಿಧಿ ವಿಧನಗಳನ್ನು ಪೂರೈಸಿದರು. ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವಕ್ಕೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ವಾಟಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿದ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ವಸ್ತಾಲಂಕಾರ, ಹೂವಿನ ಅಲಂಕಾರಗಳಿ0ದ ಸಿಂಗರಿಸಲಾಗಿದ್ದ ಐತಿಹಾಸಿಕ ರಥೋತ್ಸವ ಗ್ರಾಮಸ್ಥರು ಊರಿನ ಹೊರವಲಯದ ತನಕ ಎಳೆದರು. ನಂತರ ಗ್ರಾಮಸ್ಥರು ಮತ್ತು ಭಕ್ತರು ತಮ್ಮ ಹೆಗಲ ಮೇಲೆ ಖುರ್ಜು ರಥೋತ್ಸವ ಶ್ರೀ ಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ಹೊತ್ತು ತೆರಳಿದರು. ಪ್ರಮುಖ ಆಕರ್ಷಣೆಯಾಗಿರುವ ರಥೋತ್ಸವಕ್ಕೆ ಭಕ್ತರು ಹಣ್ಣು ಜವನ ಎಸೆದು ಪುನೀತರಾದರು.

ಬೆಟ್ಟದ ಮೇಲಕ್ಕೆ ಹೆಗಲ ಮೇಲೆ ಹೊತ್ತು ಬರುತ್ತಿದ್ದ ದೃಶ್ಯ ಕಂಡು ಮೈ ರೋಮಾಂಚನಗೊ0ಡಿತು. ಉಘೇ ಉಘೇ ಸಿದ್ದೇಶ್ವರ ಎಂದು ಭಕ್ತರು ಘೋಷಣೆ ಕೂಗುತ್ತ ಸಾಗಿದರು. ಲಕ್ಷಾಂತರ ಭಕ್ತರು ಕಣ್ತುಂಬಿಕೊ0ಡರು. ಹರಕೆ ಹೊತ್ತ ಭಕ್ತರು ಮಜ್ಜಿಗೆ ಪಾನಕ ಸೇರಿದಂತೆ ತಂಪು ಪಾನೀಯ ವಿತರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ರಘು ಮತ್ತು ಪಿಎಸ್‌ಐ ಕೃಷ್ಣಕಾಂತಕೋಳಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಡಿವೈಎಸ್ಪಿ ರಘು, ಕಾ.ಪು ಸಿದ್ದವೀರಪ್ಪ, ಗ್ರಾ.ಪಂ ಸದಸ್ಯೆ ರಾಜೇಶ್ವರಿ ಗುರುಸ್ವಾಮಿ, ಸರೋಜಮ್ಮ ಸಿದ್ದಯ್ಯಸ್ವಾಮಿ, ಪಾರ್ವತಮ್ಮ, ಜೋಗನಾಯಕ, ಶೋಭಾ ಮಹದೇವಮ್ಮ ಗ್ರಾಮದ ಯಜಮಾನ ಪಟೇಲ್ ಸಿದ್ದರಾಜು, ಕುಮಾರ್, ಶಿವಲಿಂಗಯ್ಯ, ಮರಿಸ್ವಾಮಿನಾಯಕ, ರವಿಕುಮಾರ್ ಇದ್ದರು.

About The Author

Leave a Reply

Your email address will not be published. Required fields are marked *