ಗೌರಿಬಿನೂರಿನಲ್ಲಿ ವೈಭವದ ಕನ್ನಡ ರಾಜ್ಯೋತ್ಸವ
1 min readಗೌರಿಬಿನೂರಿನಲ್ಲಿ ವೈಭವದ ಕನ್ನಡ ರಾಜ್ಯೋತ್ಸವ
ಆಕರ್ಷಣೆಯ ಕೇಂದ್ರ ಬಿಂದುವಾದ ಕನ್ನಡ ರಥ
ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಅದೆಷ್ಟೋ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಮೈಗೂಡಿಸಿಕೊಂಡು ಕನ್ನಡ ಭಾಷೆ, ನೆಲ, ಜಲ , ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರದ ಆಚಾರ್ಯ ಜೂನಿಯರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ನಮ್ಮ ನಾಡು ನಮ್ಮ ಸಂಸ್ಕೃತಿಯ ಪರಂಪರೆಯನ್ನು ಶ್ರೀಮಂತಗೊಳಿಸಲು ಶ್ರಮಿಸಿರುವ ಸಾಹಿತಿಗಳು, ಕನ್ನಡ ಪರ ಹೋರಾಟಗಾರರ ಶ್ರಮದ ಭಾಲದಿಂದ ಕರ್ನಾಟಕ ಏಕೀಕರಣವಾಗಿದೆ, ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳಿಸಿ ಕನ್ನಡದ ಕಂಪನ್ನ ಪಕ್ಕದ ರಾಜ್ಯಗಳಿಗೂ ಪಸರಿಸುವಂತಾಗಬೇಕು ಎಂದರು.
ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತನಪೀಠ ಪ್ರಶಸ್ತಿ ರಾಜ್ಯದ 8 ಮಂದಿ ಸಾಹಿತಿಗಳಿಗೆ ಸಿಕ್ಕಿರುವುದು ನಮ್ಮ ರಾಜ್ಯದ ಹೆಮ್ಮೆಯ ಗರಿಯ ಸಂಕೇತವಾಗಿದೆ. ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣ ಕೂಗು ಹಾಕಿ, ಕರ್ನಾಟಕ ವೈಭವ ಗ್ರಂಥವನ್ನು ರಚಿಸುವ ಮೂಲಕ ಕನ್ನಡದ ಗತ ವೈಭವ ಹಾಗೂ ಕನ್ನಡ ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿದರು ಎಂದು ಹೇಳಿದರು.
ಕ್ಷೇತ್ರಕ್ಕೆ ಶೀಘ್ರದಲ್ಲೆ ಎತ್ತಿನಹೊಳೆ ನೀರು ಹರಿಯಲಿದೆ, ಇದರ ಜೊತೆಗೆ ನಗರಕ್ಕೆ ತಾಲೂಕಿನ ವಾಟದ ಹೊಸಹಳ್ಳಿ ಕೆರೆಯ ನೀರನ್ನು ನಗರಕ್ಕೆ ಕುಡಿಯುವ ನೀರು ತರಲಾಗುವುದು, ನಗರದಲ್ಲಿ 40 ಲಕ್ಷ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ತಹಸೀರ್ಲ್ದಾ ಮಹೇಶ್ ಎಸ್.ಪತ್ರಿ ಮಾತನಾಡಿ, ನಮ್ಮ ಕರ್ನಾಟಕ ನಮ್ಮ ಹೆಮ್ಮೆಯ ಸಂಕೇತ, ಹರಿಶಿನ-ಕುಂಕುಮದ ಬಣ್ಣವನ್ನು ಹೊಂದಿದ್ದು, ಸಹಬಾಳ್ವೆ, ಸೌಹಾರ್ಧತೆ, ಶಾಂತಿ, ಅಭಿವೃದ್ಧಿಯ ಸಂಕೇತವಾಗಿದೆ, ನಮ್ಮ ನಾಡಿನ ಹಿರಿಯ ಸಾಹಿತಿಗಳು , ಕನ್ನಡ ಪರ ಹೋರಾಟಗಾರರ ಗಳಿಸಿಕೊಟ್ಟಿರುವ ಕರ್ನಾಟಕದ ಹೆಮ್ಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.
ಕಸಾಪ ಅಧ್ಯಕ್ಷ ಜನಾನಮೂರ್ತಿ ಕರ್ನಾಟಕ ಏಕೀಕರಣದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ನಗರದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಶಾಸಕರು ಸನ್ಮಾನಿಸಿದರು.