ಕನ್ನಡಿಗರಾಗಿ ಹುಟ್ಟುವುದೇ ಪುಣ್ಯ ಎಂದ ಶಾಸಕ ದರ್ಶನ್
1 min readಕನ್ನಡಿಗರಾಗಿ ಹುಟ್ಟುವುದೇ ಪುಣ್ಯ ಎಂದ ಶಾಸಕ ದರ್ಶನ್
ನಂಜನಗೂಡಿನಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ
ನಂಜನಗೂಡು ತಾಲೂಕು ಆಡಳಿತದಿಂದ ಮಿನಿ ವಿಧಾನಸೌಧದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಬ್ಬಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿದ್ದರಾಜಪ್ಪ ಮಾತನಾಡಿ, ಕನ್ನಡ `ಭಾಷೆಯ ವಾರಸುದಾರರು ನಾವು. ಇತಿಹಾಸವನ್ನು ಮೆಲಕು ಹಾಕುವ ಕೆಲಸ ಮಾಡಬೇಕಾಗಿದೆ ಎಂದರು.
ನಂಜನಗೂಡು ತಾಲೂಕು ಆಡಳಿತದಿಂದ ಮಿನಿ ವಿಧನಸೌಧದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಬ್ಬಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿದ್ದರಾಜಪ್ಪ ಮಾತನಾಡಿ, ನಾಡಿನ ಅನೇಕ ಹಿರಿಯರು ನಾಡಕಟ್ಟಲು ತನು ಮನ ಅರ್ಪಿಸಿದ್ದಾರೆ, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಲು ಹಿರಿಯರು ಶ್ರಮಿಸಿದ್ದಾರೆ ಎಂದು ಹೇಳಿದರು.
ನಾಡಿಗಾಗಿ ಹೋರಾಡಿದ ಹಿರಿಯರನ್ನು ಪ್ರತಿದಿನ ಸ್ಮರಣೆ ಮಾಡಬೇಕಿದೆ. ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಐತಿಹಾಸಿಕ ಶ್ರೇಷ್ಠ ದಿನವಾಗಿದೆ, ಕನ್ನಡ ಮಾತನಾಡುವ ಭಾಷಾವಾರು ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸ್ಥಾಪನೆ ಆಯಿತು. ಐತಿಹಾಸಿಕ ದಿನವನ್ನಾಗಿ ಸಂಭ್ರಮಿಸಬೇಕಾಗಿದೆ, ಕರ್ನಾಟಕ ವಿಭಿನ್ನ ರಾಜ್ಯವಾಗಿದೆ, ಪ್ರತಿ ಪ್ರದೇಶದಲ್ಲಿ ತನ್ನದೇ ಆದ `ಭಾಷೆ ಶೈಲಿಯನ್ನು ಕನ್ನಡ ಭಾಷೆ ಹೊಂದಿದೆ ಎಂದರು.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಷೆಗಳನ್ನು ಗಮನಿಸಬಹುದಾಗಿದೆ. ಕನ್ನಡಿಗರಾಗಿ ಹುಟ್ಟಿರುವುದೇ ಪುಣ್ಯ. ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನಾವು ಕನ್ನಡ ಭಾಷೆಯನ್ನು ಬಳಿಸುದಾಗಿ ಪ್ರತಿಜ್ಞೆ ಮಾಡಬೇಕಾಗಿದೆ. ನಾನು ವಿದೇಶದಲ್ಲಿದ್ದರು ನಮ್ಮ ಭಾಷೆಯಲ್ಲಿ ಮಾತನಾಡುತ್ತಿದ್ದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೂರ್, ಮಾಜಿ ಶಾಸಕ ಕನ್ನಡ ಕೇಶವಮೂರ್ತಿ, ನಗರಸಭೆಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷ ರಿಯಾನಾ ಬಾನು ಇದ್ದರು.