ಮಂಚೇನಹಳ್ಳಿ ತಾಲೂಕು ಮೊದಲ ರಾಜ್ಯೋತ್ಸವ
1 min readತಾಲ್ಲೂಕು ಆಡಳಿತದಿಂದ 69 ನೇ ಕನ್ನಡ ರಾಜ್ಯೋತ್ಸವ
ಮಂಚೇನಹಳ್ಳಿ ತಾಲೂಕು ಮೊದಲ ರಾಜ್ಯೋತ್ಸವ
ತಹಶೀಲ್ದಾರ್ ದೀಪ್ತಿ ಅವರಿಂದ ಧ್ವಜಾರೋಹಣ
ಪಿಎಸ್‌ಐ ಮೂರ್ತಿ ಅವರಿಂದ ಪಥ ಸಂಚಲನ
ಮ0ಚನಹಳ್ಳಿ ತಾಲೂಕು ರಚನೆಯಾದ ನಂತರ ಮೊದಲ ಬಾರಿಗೆ ತಾಲೂಕು ಆಡಳಿತದಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪಿಎಸ್‌ಐ ಮೂರ್ತಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ರಥಸಂಚಲನ ನಡೆಸಲಾಯಿತು.
ಮಂಚೇನಹಳ್ಳಿ ತಾಲೂಕು ರಚನೆಯಾದ ನಂತರ ಮೊದಲ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ದೀಪ್ತಿ ಮಾತನಾಡಿ, ಉದಯವಾಗಲಿ ನಮ್ಮ ಕನ್ನಡ ನಾಡು ಎಂದು ಹೇಳಿ ಕನ್ನಡದ ಮಹತ್ವದ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಾಕ್ಷೆ ಪ್ರಿಯಾಂಕ ಮಾತನಾಡಿ, ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿಯಿ0ದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹ ರೆಡ್ಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭನಾರಾಯಣಗೌಡ, ಸದಸ್ಯರಾದ ನಾರಾಯಣಸ್ವಾಮಿ, ಶಿಕ್ಷಕ ವಿ.ಆರ್. ಪ್ರಕಾಶ್, ನಟರಾಜ್ ಇದ್ದರು.