ನಾಡು ನುಡಿ ರಕ್ಷಣೆಯಲ್ಲಿ ಕವಿ, ದಾಸ, ಶರಣರ ಪಾತ್ರ ಹಿರಿದು
1 min readಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಕನ್ನಡ ರಾಜೋತ್ಸವ
ನಾಡು ನುಡಿ ರಕ್ಷಣೆಯಲ್ಲಿ ಕವಿ, ದಾಸ, ಶರಣರ ಪಾತ್ರ ಹಿರಿದು
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬಣ್ಣನೆ
ನಾಡು-ನುಡಿ, ನೆಲ-ಜಲ ಹಾಗೂ ಸಾಹಿತ್ಯ-ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿ ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಸರ್‌ಎಂವಿ ಜಿಲ್ಲೆ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 69 ನೇ ಕನ್ನಡ ರಾಜೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ನಂತರ ಮಾತನಾಡಿ, ಕನ್ನಡ ನಾಡು ನುಡಿಯನ್ನು ಕಟ್ಟಿಬೆಳೆಸಿದ ಆದಿಕವಿ ಪಂಪ, ರನ್ನ, ಪೊನ್ನ, ಕುಮಾರವ್ಯಾಸ, ಕೇಶೀರಾಜ, ಸರ್ವಜ್ಞ ಕವಿ, ಸಂತರು, ದಾಸರು, ಬಸವಾದಿ ಶಿವಶರಣರು, ಜಾನಪದ ಶ್ರಮಜೀವಿಗಳನ್ನು ಹಾಗೂ ಹಳ್ಳಿಹಳ್ಳಿಗಳಲ್ಲಿ ಕನ್ನಡ ಪರಂಪರೆಯನ್ನು ಜೀವಂತವಾಗಿ ಕಾಯ್ದುಕೊಂಡಿರುವ ಹಿರಿಯರನ್ನು ಸ್ಮರಿಸಬೇಕು ಎಂದರು.
ಗಧಗ, ಕದಂಬ, ರಾಷ್ಟಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಮತ್ತು ಮೈಸೂರು ಅರಸರು ಹಾಗೂ ದಿವಾನರ ಆಳ್ವಿಕೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಕಲೆ ಶ್ರೀಮಂತವಾಗಿ ಬೆಳೆದಿದೆ. ಕನ್ನಡ ಭಾಷೆಗೆ ಅಭಿಜಾತಭಾಷೆ ಎಂದು ಕೇಂದ್ರ ಸರ್ಕಾರ ಗೌರವ ನೀಡಿದೆ. ಅಲ್ಲದೇ ದೇಶದ ಭಾಷೆಗಳಲ್ಲಿ ನಾಲ್ಕನೇಯ ಸ್ಥಾನ ಕನ್ನಡಕ್ಕಿದೆ ಎಂಬುದು ಹೆಮ್ಮೆ. ಜಾತಿ ಮತ ಮೀರಿ ಅನ್ಯಭಾಷಿಕರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವ ಕನ್ನಡಿಗರ ಹೃದಯವಂತಿಕೆ ವಿಶಾಲವಾದದ್ದು ಮತ್ತು ಜಗತ್ತಿನಾದ್ಯಂತ ಪ್ರಶಂಸನೀಯವಾದದ್ದು, ದೇಶದಲ್ಲೆ ಎಂಟು ಪ್ರತಿಷ್ಠಿತ ನಪೀಠ ಪುರಸ್ಕೃತರು ನಮ್ಮವರು ಎಂಬುದು ದೇಶದ ಸಾಹಿತ್ಯದಲ್ಲಿ ನಮ್ಮ ಮೌಲ್ಯ ಹೆಚ್ಚಿಸಿದೆ. ಸಾಹಿತ್ಯ-ಸಂಸ್ಕೃತಿ-ಕಲೆ-ಶೈಕ್ಷಣಿಕವಾಗಿ ೨೧ನೇ ಶತಮಾನದಲ್ಲಿ ಕನ್ನಡಿಗರ ಸಾಧನೆ ಅಪಾರವಾದದ್ದು ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, 2 ಸಾವಿರಕ್ಕೂ ಹೆಚ್ಚಿನ ಇತಿಹಾಸ ಕನ್ನಡ ಭಾಷೆಗೆ ಇದೆ. ಸಂಸ್ಕಾರ ಸಂಸ್ಕತಿ ತೋರುವ ಭುವನೇಶ್ವರಿ ತಾಯಿಗೆ ನಮಿಸಿ, ಜಿಲ್ಲೆಯ ಸಮಸ್ತೆ ಜನರಿಗೆ 69ನೇ ಕನ್ನಡ ರಾಜೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭ ಕೋರಿದರು. ರಾಜ್ಯದಲ್ಲಿ ಹೆಚ್ಚು ಕಾಫಿ ಬೆಳೆದು ಹೊರ ರಾಜ್ಯಗಳಿಗೆ ರಪ್ತು ಮಾಡವ ಹೆಮ್ಮಯ ರಾಜ್ಯವಾಗಿದೆ. ರಾಜ್ಯಕ್ಕೆ ವಿಶೇಷವಾದ ಗೌರವವಿದೆ. ಮಹಾರಾಷ್ಟ ರಾಜ್ಯದ ಒಂದು ಹಳ್ಳಿಗೆ ಕನ್ನಡ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
69 ನೇ ಕನ್ನಡ ರಾಜೋತ್ಸವ ಅಂಗವಾಗಿ ಪಥಸಂಚಲನ ಶಿಸ್ತು ಬದ್ಧವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ, ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್, ನಗರಸಭೆ ಅಧ್ಯಕ್ಷ ಗಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಅರಣ್ಯಾಧಿಕಾರಿ ರಮೇಶ್, ಸಿಇಒ ಪ್ರಕಾಶ್ ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ ಭಾಗವಹಿಸಿದ್ದರು.