ಉರುಗ ತಜ್ಞ ಪೃಥ್ವಿರಾಜ್, ಪತ್ರಕರ್ತ ಭೀಮಪ್ಪ ಪಾಟೀಲ್‌ಗೆ ಗೌರವ
1 min readರಾಜ್ಯೋತ್ಸವದಲ್ಲಿ ಹಲವರಿಗೆ ಸಚಿವರಿಂದ ಸನ್ಮಾನ
ಉರುಗ ತಜ್ಞ ಪೃಥ್ವಿರಾಜ್, ಪತ್ರಕರ್ತ ಭೀಮಪ್ಪ ಪಾಟೀಲ್‌ಗೆ ಗೌರವ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ತಾಲೂಕಿನಿಂದ ಇಬ್ಬರ ಸಮಾಜ ಸೇವಕರನ್ನು ಗುರುತಿಸಿ ಸಚಿವ ಎಂ.ಸಿ ಸುಧಾಕರ್ ಗೌರವಿಸಿದರು.
ಭೀಮಪ್ಪ ಪಾಟೀಲ್ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬುಡಕುಂಟಿ ಗ್ರಾಮದವರು. ತಂದೆ ಶರಣಪ್ಪ ಪೊಲೀಸ್ ಪಾಟೀಲ್, ತಾಯಿ ಮುದ್ದಮ್ಮ ದಂಪತಿಗಳ ೪ನೇ ಮಗ. ಕೃಷಿ ಕುಟುಂಬದ ಹಿನ್ನೆಲೆ ಇದ್ದು, ಬೆಂಗಳೂರಿನಲ್ಲಿ ಪತ್ರಿಕೋದ್ಯಮದಲ್ಲಿ ವಿಧ್ಯಾಭ್ಯಾಸ ಮುಗಿಸಿ, 2006 ರಲ್ಲಿ ಟಿವಿ 9 ಕನ್ನಡದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ಆರಂಭಿಸಿದರು. ಕಳೆದ 18 ವರ್ಷಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ತಾಲೂಕಿನಿಂದ ಟಿವಿ೯ ವರದಿಗಾರ ಭೀಮಪ್ಪ ಪಾಟೀಲ್ ಮತ್ತು ಉರಗತಜ್ಙ ಪೃಥ್ವಿರಾಜ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇವರು ಪ್ರಶಸ್ತಿ ಪಡೆದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ನಗರಸಭೆ ಅಧ್ಯಕ್ಷ ಗಜೇಂದ್ರ, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ಸಿಇಒ ಪ್ರಕಾಶ್ ನಿಟ್ಟಾಣಿ, ಅರಣ್ಯಧಿಕಾರಿ ರಮೇಶ್, ಎಸ್ಪಿ ಕುಶಾಲ್ ಚೌಕ್ಸೆ ಮತ್ತಿತರರು ಗೌರವಿಸಿದರು.