ರಸ್ತೆ ಎಷ್ಟಿದೆ ಎಂಬ ದಾಖಲೆಯೇ ಅಧಿಕಾರಿಗಳ ಬಳಿ ಇಲ್ಲ
1 min readರಸ್ತೆ ಎಷ್ಟಿದೆ ಎಂಬ ದಾಖಲೆಯೇ ಅಧಿಕಾರಿಗಳ ಬಳಿ ಇಲ್ಲ
ಎನಪ್ರತಿನಿಧಿಗಳಾದವರು ಜನರ ಹಿತ ಕಾಪಾಡಬೇಕು
ರಸ್ತೆ ಒತ್ತುವರಿ ಮಾಡಿಕೊಂಡಿರುವ ದಾಖಲೆ ಇಲ್ಲ
ಕಟ್ಟಡ ಮಾಲೀಕರಿಂದ ಸುದ್ದಿಗೋಷ್ಠಿಯಲ್ಲಿ ಮಾಹಿತಿ
ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ರಸ್ತೆ ಮತ್ತು ಬಜಾರ್ ರಸ್ತೆ ಅಗಲೀಕರಣ ಎಂಬುದು ದಿನಕ್ಕೊಂದು ತಿರುವು ಪಡೆಯುತ್ತಿದೆ. ಯಾವುದೇ ಕಾರಣಕ್ಕೂ ಉಭಯ ರಸ್ತೆಗಳ ಅಗಲೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸದರು ಈಗಾಗಲೇ ಘೋಷಿಸಿದ್ದಾರೆ. ಶತಾಯ ಗತಾಯ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಶಾಸಕರು ಹೇಳಿದ್ದಾರೆ. ಈ ನಡುವೆ ಉಭಯ ರಸ್ತೆಗಳ ಕಟ್ಟಡ ಮಾಲೀಕರು ಈ ರಸ್ತೆಯ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಇಂದು ಹೇಳಿದ್ದಾರೆ. ಹಾಗಾದರೆ ಅವರು ಹೇಳಿದ ಮಾಹಿತಿ ಏನು ಅಂತ ನೋಡೋಣ ಬನ್ನಿ.
ಚಿಕ್ಕಬಳ್ಳಾಪುರ ನಗರದ ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಯ ಅಗಲೀಕರಣ ವಿಚಾರ ಇದೀಗ ಹೊಸ ತಿರುವುದು ಪಡೆದಿದೆ. ಉಭಯ ರಸ್ತೆಗಳು ಎಷ್ಟು ಅಳತೆಯಲ್ಲಿವೆ ಎಂಬ ಮಾಹಿತಿಯೇ ಅಧಿಕಾರಿಗಳ ಬಳಿ ಇಲ್ಲವಂತೆ. ಹೀಗಂತ ಈ ಎರಡೂ ರಸ್ತೆಗಳ ಕಟ್ಟಡ ಮಾಲೀಕರು ಇಂದು ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಮಾಲೀಕ ಅಶ್ವತ್ಥನಾರಾಯಣಾ ಚಾರ್, ಈ ಹಿಂದೆಯೇ ಈ ರಸ್ತೆ ಅಗಲೀಕರಣ ಸಂಬ0ಧ ಕೋರ್ಟಿನ ಮೊರೆ ಹೋಗಲಾಗಿತ್ತು ಎಂದು ಹೇಳಿದರು.
ಈ ಹಿಂದೆ ಹೈಕ್ರೋಟಿನಲ್ಲಿ ಈ ಸಂಬ0ಧ ಪ್ರಕರಣ ನಡೆದಾಗ ನಗರಸಬೆ ಸೇರಿದಂತೆ ಯಾವುದೇ ಅಧಿಕಾರಿಗಳ ಬಳಿಯೂ ರಸ್ತೆ ಎಷ್ಟಿದೆ ಎಂಬ ಮಾಹಿತಿಯೇ ಇಲ್ಲ. ಹಾಗಾಗಿ ನ್ಯಾಯಾಲಯ ಕಟ್ಟಡಗಳು ಅಧಿಕೃತ ಎಂದು ಹೇಳಿದೆ. ಅಲ್ಲದೆ ರಸ್ತೆ ಅಗಲೀಕರಣ ಮಾಡಬೇಕಾದರೆ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ, ನಂತರ ತೆರುವು ಮಾಡುವಂತೆ ಸೂಚನೆ ನೀಡಿದೆ. ಹಾಗಿದ್ದರೂ ಕೇವಲ ಆತಂಕ ಮೂಡಿಸುವ ರೀತಿಯಲ್ಲಿ ಸ`ೆಗಳನ್ನು ಮಾಡುತ್ತಿರುವುದು ವಿಪರ್ಯಾಸ ಎಂದು ಅವರು ಆರೋಪಿಸಿದರು.
ಪದೇ ಪದೇ ಅಂಗಡಿಗಳ ಮಾಲೀಕರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಈ ಸಂಬ0ಧ ಕೋರ್ಟಿಗೆ ಹೋಗಿದ್ದು, ಅಧಿಕಾರಿಗಳು ರಸ್ತೆ ಎಷ್ಟಿದೆ ಎಂಬ ಯಾವುದೇ ಮಾಹಿತಿಯನ್ನು ಕೋರ್ಟಿಗೆ ನೀಡಲಿಲ್ಲ. ಇದರಿಂದ ನ್ಯಾಯಾಲಯ ಕಟ್ಟಡಗಳು ಮಾಲೀಕರಿಗೆ ಸೇರಿದ್ದು ಎಂದು ತೀರ್ಮಾನಿಸಿದೆ. ಒತ್ತುವರಿಯಾಗಿದ್ದರೆ ತೆರುವು ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ತಾವು ಕಳೆದ ೫೫ ವರ್ಷದಿಂದ ನೋಡುತ್ತಿದ್ದು, ರಸ್ತೆ ಎಷ್ಟಿದೆಯೋ ಅಷ್ಟೇ ಇದೆ. ಅಗಲೀಕರಣ ಮಾಡಬೇಕಾದರೆ ಪರಿಹಾರ ನೀಡಬೇಕಾದ ಕ್ರಮಗಳತ್ತ ಗಮನ ಹರಿಸಬೇಕು, ಅದು ಬಿಟ್ಟು ವಿನಾಕಾರಣ ಆತಂಕ ಸೃಷ್ಟಿ ಮಾಡೋದು ಬೇಡ ಎಂದು ಹೇಳಿದರು.
ಗಂಗಮ್ಮ ಗುಡಿ ರಸ್ತೆ ಮತ್ತು ಬಜಾರ್ ರಸ್ತೆಗಳು ಎಷ್ಟು ಅಳತೆಯಲ್ಲಿವೆ ಎಂಬ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ಇದ್ದರೆ ಅದನ್ನು ಗುರ್ತಿಸಿ, ನಂತರ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಸಭೆ ಮಾಡಿ ಅಪ ಪ್ರಚಾರ ಮಾಡೋದು ಸರಿಯಲ್ಲ. ಪದೇ ಪದೇ ರಸ್ತೆ ತೆರುವು ಎಂದು ಯಾಕೆ ಆತಂಕ ಹುಟ್ಟಿಸುತ್ತಿದ್ದಾರೆ, ಯಾರೂ ರಸ್ತೆ ಅಗಲೀಕರಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಲ್ಲ, ಒಂದು ವೇಳೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಸಂಚಾರ ನಿಯಂತ್ರಣಕ್ಕೆ ಪೊಲೀಸರನ್ನು ಹಾಕಲಿ, ಅದು ಬಿಟ್ಟು ಜನಪ್ರತಿನಿಧಿಗಳಾದವರು ಜನತೆಯ ಹಿತ ಕಾಪಾಡಬೇಕು. ಆತಂಕ ಸೃಷ್ಟಿಸಬಾರದು ಎಂದರು.
ಇನ್ನು ಇಶಡೇಶನ್ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಹಳೆ ಮೈಸೂರು ಭಾಗದಿಂದ ಬರುವ ಪ್ರವಾಸಿಗರಿಗೆ ಗೂಗಲ್ ಮ್ಯಾಪ್ ತೋರಿಸುವುದೇ ಗಂಗಮ್ಮ ಗುಡಿ ರಸ್ತೆ. ಇದರಿಂದ ಶನಿವಾರ ಮತ್ತು ಭಾನುವಾರ ಹೆಚ್ಚು ವಾಹನ ದಟ್ಟಣೆ ಆಗಿರುವುದು ಅಗಲೀಕರಣಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಈ ರಸ್ತೆಯ ವಿಸ್ತೀರ್ಣದ ಬಗ್ಗೆ ಸಂಬ0ಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿಳಿದು ಮಾತನಾಡಲಿ, ಒಂದು ಅಂಗಡಿಯ ಮೇಲೆ ನಾಲ್ಕು ಕುಟುಂಬಗಳು ಆಧಾರವಾಗಿದ್ದು, ಜೀವನ ಮಾಡುತ್ತಿದ್ದು, ಆ ಎಲ್ಲಾ ಕುಟುಂಬಗಳು ಬೀದಿಗೆ ಬರುವ ರಸ್ತೆ ಅಗಲೀಕರಣ ಕೈ ಬಿಟ್ಟು ಇದನ್ನ ಒನ್ ವೇ ಮಾಡುವ ಮೂಲಕ ವಾಹನದಟ್ಟಣೆ ಕಡಿಮೆ ಮಾಡುವಂತೆ ಮನವಿ ಮಾಡಿದರು.
ಚಿಕ್ಕಬಳ್ಳಾಪುರದಿಂದ ಸಂಗ್ರಹವಾಗುವ ತೆರಿಗೆಯ ಅದಷ್ಟು ಈ ಎರಡು ರಸ್ತೆಯ ವ್ಯಾಪಾರಿಗಳು ಕಟ್ಟುತ್ತಿದ್ದು, ಸಾಧ್ಯವಾದರೆ ಶಾಸಕರು ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಬೆಳವಣಿಗೆ ಮಾಡಲಿ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಊರಿನ ಮಧ್ಯದಲ್ಲಿ ಜಾಗವಿರಬೇಕೆ ಹೊರತು ಊರಿನ ಹೊರಗಿರುವುದು ಶ್ರೇಯಸ್ಕರವಲ್ಲ ಎಂದು ಅಶ್ವಥ್ ನಾರಾಯಣಚಾರಿ ತಿಳಿಸಿದರು, ಈ ಎರಡು ರಸ್ತೆಗಳನ್ನು ಅವಲಂಬಿತರಾಗಿ ಜೀವನ ನಡೆಸುತ್ತಿರುವವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಕೋರಿದರು. ಈ ಸಂದರ್ಭದಲ್ಲಿ ಡಿಎಸ್ ನಂಜು0ಡರಾಮಯ್ಯ ಶೆಟ್ಟಿ, ಆರ್ಯ ವೈಶ್ಯ ಮಂಡಳಿ ಅಧ್ಯಕ್ಷರು, ಸಿದ್ದಲಿಂಗಚಾರಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರು, ವೆಂಕಟಾ ಚಲಪತಿ, ಸುದರ್ಶನ್, ವಿಎ ಶ್ರೀನಿವಾಸ ಶೆಟ್ಟಿ ಇದ್ದರು.