ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ದರ್ಶನ್ ಜೈಲುನಿಂದ ಬಿಡುಗಡೆಯಾಗಿ ಬರಲಿದ್ದಾರೆ?

1 min read

ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದ ಆ ಮಹತ್ವದ ಕ್ಷಣ ಕೊನೆಗೂ ಬಂದು ತಲುಪಿದೆ. ಸುಮಾರು 100 ದಿನಗಳಿಂದ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅವರು ಬಿಡುಗಡೆಯಾಗುವ ಕ್ಷಣಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಇಡೀ ಕರ್ನಾಟಕದಲ್ಲಿ ಸಂಚಲನ ಮೂಡಿತ್ತು. ದರ್ಶನ್ ತೂಗುದೀಪ್ ಅವರು ಕಳೆದ 100 ದಿನಗಳಿಂದ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಹಾಗೆಯೇ, ಪ್ರಾರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್, ನಂತರ ಬಳ್ಳಾರಿ ಜೈಲು ಸೇರಿದರು. ಈಗ, ಬಳ್ಳಾರಿ ಜೈಲಿನಿಂದ ಡಿ-ಬಾಸ್ ದರ್ಶನ್ ಬಿಡುಗಡೆಗೆ ಸಿದ್ದವಾಗಿದ್ದು, ಈ ವೇಳೆ ಕರ್ನಾಟಕ ಬಂದ್ ಮಾಡುವುದಕ್ಕೂ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ದರ್ಶನ್ ತೂಗುದೀಪ್‌ರನ್ನು ಅಭಿಮಾನಿಗಳು “ಕಲಿಯುಗದ ಕರ್ಣ” ಎಂದು ಹೊಗಳುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಅಪ್ರತಿಮ ಸ್ಥಾನವನ್ನು ಹೊಂದಿರುವ ದರ್ಶನ್ ತಮ್ಮ ದಾನಶೀಲತೆ ಹಾಗೂ ನೆರವುಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಈ ಸೌಹಾರ್ದವನ್ನು ನೆನೆಸಿಕೊಂಡು ಅಭಿಮಾನಿಗಳು ಹೆಮ್ಮೆಪಡುತ್ತಾರೆ. ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ್ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಕಾರಣ, ಅಭಿಮಾನಿಗಳು ತೀವ್ರವಾಗಿ ನೊಂದುಕೊ0ಡಿದ್ದರು.

ಈಗ ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ ಆಗುತ್ತಿದ್ದಂತೆ, “ಡಿ-ಬಾಸ್… ಡಿ-ಬಾಸ್…” ಎಂದು ಚೀರು ಹಿಡಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ಅವರ ಬಿಡುಗಡೆಯ ಸಂಭ್ರಮದಲ್ಲಿ ಅಭಿಮಾನಿಗಳು ಕರ್ನಾಟಕ ಬಂದ್ ಮಾಡುವ ಘೋಷಣೆ ಮಾಡಿದ್ದಾರೆ.

* ದಿನ ನಿತ್ಯದ ತಾಜಾ ಸುದ್ದಿಗಳಿಗಾಗಿ ಸಿ ಟೀವಿ ನ್ಯೂಸ್ ಗೆ Subscribe ಆಗಿ. ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ:- 9916317028.
* https://youtube.com/@ctvnewschikkaballapura?si=C-CJWuVfM-65JQMa
* LIVE: https://shashwatha.com/player.php?url=https://shashwatha.com/hls/shashwatha/ctvnews.m3u8
* CTV News : https://ctvnewskannada.com/
* Subscribe to Ctv News: https://www.youtube.com/channel/UCHtq26kA5D5anCbPD3HoURw
* Big News Big Update : https://ctvnewskannada.com/
* Like us on Facebook: https://www.facebook.com/ctvnewschikkaballapura
* Follow us on Instagram: https://www.instagram.com/ctvnewschikkaballapura/
* Follow us on Twitter: https://twitter.com/ctvnewscbpura
* #ctvnews_ctv_ctvnewschikkaballapura_ctvcbpur_ctvnewskannada_chikkaballapurnews_ chikkaballapurctv
rtmp://shashwatha.com/shashwatha/ctvnews

About The Author

Leave a Reply

Your email address will not be published. Required fields are marked *