ಆಯುಷ್ ಇಲಾಖೆಯಿಂದ ಆಯುರ್ವೇದ ದಿನಾಚರಣೆ
1 min readಆಯುಷ್ ಇಲಾಖೆಯಿಂದ ಆಯುರ್ವೇದ ದಿನಾಚರಣೆ
ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಧನ್ವಂತರಿ ಜಯಂತಿ ಆಚರಣೆ
ಪಾರಂಪರಿಕ ಚಿಕಿತ್ಸೆಯಿಂದ ಸರ್ವ ರೋಗಗಳಿಂದ ಮಕ್ತಿ ಸಾಧ್ಯ
ಆಯುರ್ವೇದ ದಿನಾಚರಣೆಯಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ
ಚರಕ ವಿಶ್ವದ ಮೊದಲ ವೈದ್ಯ, ಭಾರತ ವೈದ್ಯಕೀಯದಲ್ಲಿ ಅನಾದಿ ಕಾಲದಿಂದಲೂ ಮುಂಚೂಣಿಯಲ್ಲಿರುವ ದೇಶ. ಪಾರಂಪರಿಕ ಚಿಕಿತ್ಸೆಯಾದ ಆಯುರ್ವೇದದಲ್ಲಿ ಎಲ್ಲ ರೋಗಗಳಿಗೂ ಚಿಕಿತ್ಸೆ ಇದ್ದು, ಇದರಿಂದ ಯಾವುದೇ ಸಮಸ್ಯೆ ಇರಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಗರಸಭೆ ಅಧ್ಯಕ್ಷ ಗಜೇಂದ್ರ ಹೇಳಿದರು.
ಧನ್ವಂತರಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯಿಂದ 9 ನೇ ರಾಷ್ಟಿಯ ಆಯುರ್ವೇದ ದಿನಾಚರಣೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ರಾಷ್ಟಿಯ ಆಯುರ್ವೇದ ದಿನಾಚರಣೆಯಲ್ಲಿ ಮಾತನಾಡಿದ ನಗರಸಬೆ ಅಧ್ಯಕ್ಷ ಗಜೇಂದ್ರ, ಧನ್ವಂತರಿ ಆಯುರ್ವೇದ ಚಿಕಿತ್ಸೆ ದೇಶದ ಪ್ರಾಚೀನ ಚಿಕಿತ್ಸೆಯಾಗಿದ್ದು, ಇದನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯದ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳಬಹುದು ಎಂದರು.
ಧನ್ವ0ತರಿ ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಅನಾದಿ ಕಾಲದಿಂದಲೂ ಸ್ಥಳೀಯವಾಗಿ ಸಿಗುವ ಗಿಡ ಮೂಲಿಕೆಗಳಿಂದ ತಯಾರಿಸುವ ಔಷದಿಗಳನ್ನು ಬಳಸಿ ಚಿಕಿತ್ಸೆ ನಡೀಉವ ಪದ್ಧತಿ ಭಾರತದಲ್ಲಿದೆ. ಪ್ರತಿಯೊಂದು ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರವಿದೆ. ಕೊರೋನದಂತಹ ನವೀನ ಕಾಯಿಲೆಗಳನ್ನು ಗುಣಪಡಿಸುವ ಬಗ್ಗೆಯೂ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟು ಪ್ರಾಮುಖ್ಯತೆ ಹೊಂದಿರುವ ಆಯುರ್ವೇದ ಪ್ರಸ್ತುತ ನಿರ್ಲಕ್ಷಕ್ಕೆ ಒಳಗಾಗಿಗ್ಗು, ಇದನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಗಮನ ಕೇಂದ್ರೀಕರಿಸಿರುವುದು ಅಭಿನಂದನಾರ್ಹ ವಿಚಾರ ಎಂದರು.
ಭಾರತ ವಿಶ್ವಕ್ಕೆ ನಾಗರಿಕತೆ ಮಾತ್ರವಲ್ಲ, ಚಿಕಿತ್ಸೆಯನ್ನೂ ಕಲಿಸಿದೆ. ಅಷ್ಟೇ ಅಲ್ಲದೆ ಸೊನ್ನೆಯನ್ನು ಕಂಡುಹಿಡಿದವರೂ ಭಾರತದವರೇ. ಇಂತಹ ಹಲವು ಪ್ರಾಮುಖ್ಯತೆ ಭಾರತದಂತಹ ಸನಾತನ ದೇಶದಿಂದ ಮಾತ್ರ ಸಾಧ್ಯವಿದ್ದು, ನಮ್ಮ ಪಾರಂಪರಿಕ ಪದ್ಧತಿಗಳನ್ನು ನಾವು ಅಳವಡಿಸಿಕೊಳ್ಳುವ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ಮುಖ್ಯಸ್ಥರು, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.