ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ
1 min readಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ
ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆ
ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ
ಸರ್ಕಾರಿ ನೌಕರರ ಸಂಘದ ಶಿಡ್ಲಘಟ್ಟ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ಮತದಾನ ಇಂದು ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು.
ಸರ್ಕಾರಿ ನೌಕರರ ಸಂಘದ ಒಟ್ಟು 33 ಸ್ಥಾನಗಳ ಪೈಕಿ ಈಗಾಗಲೇ 30 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಪ್ರಾಥಮಿಕ ಶಾಲಾ ಇಲಾಖೆಯಿಂದ ಆಯ್ಕೆಯಾಗಬೇಕಾಗಿದ್ದ 3 ಸ್ಥಾನಗಳಿಗೆ ೮ ಮಂದಿ ಅಂತಿಮ ಕಣದಲ್ಲಿದ್ದರು. ಬೆಳಿಗ್ಗೆ 9 ಗಂಟೆಯಿ0ದಲೇ ಮತದಾನ ನಿಧಾನಗತಿಯಲ್ಲಿ ಆರಂಭವಾದರೂ ಮಧ್ಯಹ್ನ ವೇಳೆಗೆ ಚುರುಕಾಯಿತು. ಮತದಾನ ಮಾಡಲು ಶಿಕ್ಷಕರಿಗೆ ಎರಡು ಗಂಟೆ ವಿಶೇಷ ಅನುಮತಿ ಇದ್ದುದರಿಂದ ಶಾಲಾ ಚಟುವಟಿಕೆಗಳಿಗೆ ತೊಂದರೆಯಾಗದ0ತೆ ಕಾರ್ಯ ಹಂಚಿಕೆ ಮತ್ತು ಸಮಯ ಹೊಂದಾಣಿಕೆ ಯೊಂದಿಗೆ ತಂಡಗಳಲ್ಲಿ ಆಗಮಿಸಿ ಮತದಾನ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರ ದಿಂದ ಒಟ್ಟು 583 ಮತದಾರರಿದ್ದು, ಸಂಜೆ ೪ ಗಂಟೆಗೆ ಮತದಾನದ ಅಂತ್ಯದ ವೇಳೆಗೆ, ಒಟ್ಟು 286 ಪುರುಷ ಮತದಾರರ ಪೈಕಿ 281 ಮಂದಿ, 297 ಮಹಿಳಾ ಮತದಾರರ ಪೈಕಿ 278 ಮಂದಿ ಮತ ಚಲಾಯಿಸಿದರು. ಒಟ್ಟಾಗಿ ೫೮೩ ಮತಗಳಲ್ಲಿ 559 ಮತಗಳು ಚಲಾವಣೆ ಗೊಂಡಿದ್ದು ಶೇ. 95.9 ರಷ್ಟು ಮತದಾನವಾಗಿದೆ. ಸ್ಥಳಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರುದ್ರೇಶ ಮೂರ್ತಿ ಭೇಟಿ ನೀಡಿದ್ದರು.