ಶಿಡ್ಲಘಟ್ಟದಲ್ಲಿ ಮೂಕ ಜೀವ ಚಿತ್ರ ಉಚಿತ ಪ್ರದರ್ಶನ
1 min readಮೂಕ ಜೀವ ಚಿತ್ರದ ಮೂಲಕ ಉತ್ತಮ ಸಂದೇಶ
ಶಿಡ್ಲಘಟ್ಟದಲ್ಲಿ ಮೂಕ ಜೀವ ಚಿತ್ರ ಉಚಿತ ಪ್ರದರ್ಶನ
ಅ0ಗವೈಕಲ್ಯ ಶಾಪವಲ್ಲ. ಅಂಗವೈಕಲ್ಯ ಮೀರಿಯೂ ಸಾಧನೆ ಮಾಡಬಹುದು ಎಂಬುದನ್ನು ಮಾತು ಬಾರದ, ಕಿವಿ ಕೇಳಿದ ಹುಡುಗನೊಬ್ಬನ ಬದುಕನ್ನು ಮೂಕ ಜೀವ ಎಂಬ ಚಲನಚಿತ್ರದ ಮೂಲಕ ತೋರಿಸಿದ್ದಾವೆ ಎಂದು ನಿರ್ಮಾಪಕ ವೆಂಕಟೇಶ್ ಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಶ್ರೀವೆಂಕಟೇಶ್ವರ ಚಿತ್ರಮಂದಿರದಲ್ಲಿ ವಾಸವಿ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ಚಲನಚಿತ್ರ ಪ್ರದರ್ಶನದ ವೇಳೆ ಮಾತನಾಡಿದ ನಿರ್ಮಾಪಕ ವೆಂಕಟೇಶ್ ಗೌಡ, ಸಾಹಿತಿ ಜೆ.ಎಂ. ಪ್ರಹ್ಲಾದ್ ಅವರ ಮೂಕ ಜೀವ ಕಾದಂಬರಿಯನ್ನು ಶ್ರೀನಾಥ್ ವಸಿಷ್ಠ ಭಾವುಕವಾಗಿ ನಿರೂಪಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಹರ್ಷ ವೆಂಕಟೇಶ್ ಉತ್ತಮವಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶಿಡ್ಲಘಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಡಲು ಅನುಕೂಲ ಮಾಡಿದ್ದೇವೆ ಎಂದರು. ಉದ್ದೇಶ ಮಕ್ಕಳಿಗೆ ಉತ್ತಮ ಸಂದೇಶ, ಮಾರ್ಗದರ್ಶನ ಚಲನಚಿತ್ರದ ಮೂಲಕ ನೀಡುವುದಾಗಿದೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ದೈಹಿಕವಾಗಿ ನ್ಯೂನತೆ ಇದ್ದರೂ, ಗುರಿ ಹಾಗೂ ಸಾಧಿಸುವ ಛಲ ಇದ್ದವನಿಗೆ ಯಾವುದೂ ತಡೆಗೋಡೆಯಾಗದು ಎಂಬ ಪ್ರೇರಣೆಯ ಸಂದೇಶ ಈ ಚಲನಚಿತ್ರದ ಮೂಲಕ ಸಿಗಲಿದೆ. ನಾಯಕ ಹರ್ಷ ಅವರದ್ದು ಪಾತ್ರಕ್ಕೆ ತಕ್ಕ ಅಭಿನಯ. ಶಿಡ್ಲಘಟ್ಟ ತಾಲ್ಲೂಕಿನ ಟಿ.ಗೊಲ್ಲಹಳ್ಳಿಯ ವೆಂಕಟೇಶ್ ಗೌಡ ಸದಬಿರುಚಿಯ, ಮಾನವೀಯ ಮೌಲ್ಯಗಳ, ಮಕ್ಕಳಿಗೆ ಮತ್ತು ಸಮಾಜಕ್ಕೆ ಸಂದೇಶ ನೀಡುವ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು. ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರೂಪಸಿ ರಮೇಶ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.