ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ನೆನ್ನೆ ಎಮ್ಮೆ ಸಾಗಾಟ, ಇಂದು ಹಸುಗಳ ಸಾಗಾಟ

1 min read

ನೆನ್ನೆ ಎಮ್ಮೆ ಸಾಗಾಟ, ಇಂದು ಹಸುಗಳ ಸಾಗಾಟ
ಒಂದೇ ಕಂಟೈನರ್‌ನಲ್ಲಿ ಅಧಿಕ ಸಂಖ್ಯೆಯ ಹಸುಗಳ ಸಾಗಾಟ
ಚಿಕ್ಕಬಳ್ಳಾಪುರ ಕಂಟೈನರ್ ಹಿಡಿದು ಪೊಲೀಸರಿಗೆ ಒಪ್ಪಿಸಿದ ಭಜರಂಗದಳ

ನಿನ್ನೆಯಷ್ಟೇ 17 ಎಮ್ಮೆಗಳನ್ನ ಕಸಾಯಿಖಾನೆಗೆ ಸಾಗಿಸುವ ವೇಳೆ ವಾಹನ ತಡೆದ ಹಿಂದೂಪರ ಸಂಘಟನೆ ಕಾರ್ಯಕರ್ತರು. ಅವುಗಳನ್ನು ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿಯಲ್ಲಿ ಇಂದೂ ಒಂದು ಕಂಟೈನರ್ ತಡೆದು ಅದರಲ್ಲಿದ್ದ ಜಾನುವಾರುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಕಸಾಯಿಖಾನೆಗೆ ದನಗಳನ್ನು ಸಾಗಿಸುವುದನ್ನು ನಿಷೇಧ ಮಾಡಲಾಗಿದ್ದರೂ ಕಳ್ಳ ಮಾರ್ಗದಲ್ಲಿ ಜಾನುವಾರುಗಳನ್ನು ಸಾಗಿಸುವುದು ಸಾಮಾನ್ಯವಾಗಿದೆ ಎಂಬುದಕ್ಕೆ ಕಳೆದ ಎರಡು ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಗಳೇ ಸಾಕ್ಷಿಯಾಗಿವೆ. ನೆನ್ನೆ ತಾನೆ ೧೫ಕ್ಕೂ ಹೆಚ್ಚು ಎಮ್ಮೆಗಳನ್ನು ಅಮಾನವೀಯವಾಗಿ ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದ ವಿಚಾರ ಬಹಿರಂಗವಾಗಿತ್ತು. ಈ ಸಂಬ0ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇತ್ತಿಚೆಗೆ ಚಿಕ್ಕಬಳ್ಳಾಪುರ ಮೂಲಕ ಹಾದು ಹೋಗಿರುವ ರಾಷ್ಟಿಯ ಹೆದ್ದಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಟ ಹೆಚ್ಚಾಗುತ್ತಿದೆ. ರೈತರ ಹೆಸರಿನಲ್ಲಿ ಸಾಗಾಟ ಮಾಡುತಿದ್ದರೂ ಅವುಗಳಲ್ಲಿ ಕಸಾಯಿಖಾನೆಗೆ ಹೋಗುವ ದನಗಳೆ ಹೆಚ್ಚಾಗಿವೆ. ಒಂದೆ ಕಂಟೈನರ್‌ನಲ್ಲಿ ಹದಿನೈದು ಇಪ್ಪತ್ತು ಹಸುಕರುಗಳನ್ನ ತುಂಬಿರುವುದರಿ0ದ ಪ್ರಾಣಿಗಳಿಗೆ ಹಿಂಸೆ ಕೊಟ್ಟು, ಸ್ಥಳಕ್ಕೆ ತಲುವುವ ವೇಳೆಗೆ ಅವು ಸುಸ್ತಾಗಿ ಸಾಯುವ ಪರಿಸ್ಥಿತಿ ಉಂಟು ಮಾಡುತಿದ್ದಾರೆ ಎಂದು ಬಜರಂಗದಳದ ಕಾರ್ಯಕರ್ತ ಮನೋಜ್ ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಹೊರ ವಲಯ ಹೊನ್ನೇನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುವ ಜಾಲವನ್ನ `ಭಜರಂಗದಳದ ಕಾರ್ಯಕರ್ತರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಿನ್ನೆ ಎಮ್ಮೆಗಳ ಸಾಗಾಟ ಮಾಡುತಿದ್ದ ಕಂಟೈನರ್ ಹಿಡಿದುಕೊಟ್ಟಿದ್ದರೆ, ಇಂದು ಹಸುಗಳನ್ನು ತುಂಬಿಸಿ ತಮಿಳುನಾಡಿಗೆ ಸಾಗಿಸುತಿದ್ದ ಲಾರಿಯೊಂದನ್ನ ಹಿಡಿದಿದ್ದಾರೆ. ಸಂತೆಯಿ0ದ ಖರೀದಿಸಿ ಸಾಕಾಣಿ ಮಾಡುತ್ತಿರುವುದಾಗಿ ಕೆಲವರ ಬಳಿ ಬಿಲ್ಲಿದೆ, ಆದರೆ ಒಂದೆ ಗಾಡಿಗೆ ಅಷ್ಟೊಂದು ಹಸುಗಳ ತುಂಬಿ ಸಾಗಿಸುವ ಖಾತುರತೆ ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಹೀಗೆ ಅಧಿಕ ಸಂಖ್ಯೆಯಲ್ಲಿ ತುಂಬಿಸಿ ಸಾಗಿಸುವುದೂ ಪ್ರಾಣಿಗಳಿಗೆ ಹಿಂಸೆ ಕೊಟ್ಟು ಸಾಗಿಸುತ್ತಿರುವ ಕಾರಣ ಪ್ರಕರಣ ಧಾಖಲಿಸಬೇಕು. ಇದು ರೈತರ ಸಾಕಾಣಿಕೆಗಲ್ಲ, ಬದಲಿಗೆ ಕಸಾಯಿ ಖಾನೆಗೆ ಹೊಗುತ್ತಿದೆ. ಇದು ಅಪರಾಧ ಹಾಗಾಗಿ ಅವರ ವಿರುದ್ಧ ಎï‌ಐಆರ್ ದಾಖಲಿಸಿ ಅವರನ್ನ ಬಂದಿಸಬೇಕು ಎಂದು ಬಜರಂಗದಳ ಮುಖಂಡಮನೋಜ್ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಈ ಕುರಿತು ಸಂಬ0ಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.

About The Author

Leave a Reply

Your email address will not be published. Required fields are marked *