ಇತ್ತೀಚೆಗೆ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಎಎಸ್‌ಪಿ ಆತಂಕ
1 min readಇತ್ತೀಚೆಗೆ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಎಎಸ್‌ಪಿ ಆತಂಕ
ಸೈಬರ್ ಕ್ರೆ0 ಬಗ್ಗೆ ಯುವಕರಿಗೆ ತರಬೇತಿ ಅಗತ್ಯವಿದೆ ಎಂದ ಖಾಸಿಂ
ಇತ್ತೀಚೆಗೆ ಯುವಕ ಯುವತಿಯರಲ್ಲೆ ಕ್ರೆ0 ರೇಟ್ ಹೆಚ್ಚಾಗುತಿದೆ, ಮೊಬೈಲ್ ಬಳಕೆಯಿಂದ ಸೈಬರ್ ಕ್ರೆ0 ಗಳನ್ನ ಕಡೆಮೆ ಮಾಡಬೇಕಾದರೆ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯವಾಗಿದೆ. ಕೆವಿ ಬಿಎಡ್ ಸಂಸ್ಥೆ ಸಿಬ್ಬಂದಿ ಅವಕಾಶ ಕಲ್ಪಿಸಿದರೆ ಒಂದೆರಡು ದಿನ ಸೈಬರ್ ಕ್ರೆ0 ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ನಾವು ಸಿದ್ಧರಿರುವುದಾಗಿ ಎಎಸ್‌ಪಿ ರಾಜಾ ಇಬ್ರಾಹಿಂ ಖಾಸಿಂ ಹೇಳಿದರು.
ಚಿಕ್ಕಬಳ್ಳಾಪುರ ಹೊರ ವಲಯದ ಸಿವಿವಿ ಕ್ಯಾಂಪಾಸ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ರಾಜ್ಯ ಮಾಲಿನ್ಯ ನಿಯಙತ್ರಣ ಮಂಡಳಿ ಮತ್ತು ಕೆವಿ ಪಂಚಗಿರಿ ವಿದ್ಯಾಸಂಸ್ಥೆಗಳಿ0ದ ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಣೆ ಸಂಬ0ಧಿಸಿ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಬ್ರಾಹಿಂ ಖಾಸಿಂ, ಇತ್ತಿಚೆಗೆ ಯುವಕರ ಮಧ್ಯ ಆತ್ಮ ವಿಶ್ವಾಸ ಕಡಿಮೆಯಾಗಿ, ಅತಿ ಸೂಕ್ಷ ವಿಚಾರಗಳಿಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.
ಮಾಹಿತಿ ತಂತ್ರನ ಹಾಗೂ ತಾಂತ್ರಿಕ ಅಭಿವೃದ್ದಿಗಾಗಿ ಕೈಗೆ ಸಿಕ್ಕಿರುವ ಮೊಬೈಲ್‌ನಿಂದ ಸೈಬರ್ ಕ್ರೆ0 ಹೆಚ್ಚಾಗುತ್ತಿದೆ. ಬುದ್ಧಿ ಇರುವ ಯುವಕರೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚು ಮಾಡುತಿದ್ದಾರೆ. ಹಾಗಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡಿದರೆ ವಿದ್ಯಾರ್ಥಿಗಳಿಗೆ ಎರಡು ಮೂರು ದಿನ ಸೈಬರ್ ಕ್ರೆ0 ಪರಿಣಾಮಗಳ ಬಗ್ಗೆ ತರಗತಿ ಮಾಡಲಾಗುವುದು ಎಂದು ಕೋರಿದರು
ಕಾರ್ಯಕ್ರಮದ ವೇದಿಕೆಯಲ್ಲಿ ಸಾನ್ವಿ ಡೌಲಪರ್ಸ್ ಮಾಲೀಕ ಭಾಗತ್, ಜಿ ವಿ ವಿಶ್ವನಾಥ್, ಅನು ಆನಂದ್, ಪಿ ಎಂ ರಾಜೇಂದ್ರ ಪ್ರಸಾದ್, ದೊಡ್ಡಶಾನಯ್ಯ ಇದ್ದರು.