ಪತ್ರ ಬರೆದು ನಾಪತ್ತೆಯಾದ ಬಾಲಕ!
1 min readಪತ್ರ ಬರೆದು ನಾಪತ್ತೆಯಾದ ಬಾಲಕ!
ಮಮ್ಮಿ ದುಡಿಯೋದು ಇಷ್ಟವಿಲ್ಲ, ನಾನು ದುಡಿದು ಬರುತ್ತೇನೆ
ಸಿನಿಮೀಯ ಶೈಲಿಯಲ್ಲಿ ಬಾಲಕನ ನಾಪತ್ತೆ
ದುಡಿದು ತರುವ ತಾಯಿ ಕಷ್ಟ ನೋಡಲಾಗದ ಎಸ್‌ಎಸ್‌ಎಲ್‌ಸಿ ವಿಧ್ಯರ್ಥಿ ನಾನು ದುಡಿದು ಮನೆಗೆ ವಾಪಸ್ ಬರ್ತೀನಿ ಎಂದು ಪತ್ರ ಬರೆದು ನಾಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕು ಕೆಂಪಿಸಿದ್ದನಹು0ಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ, ಹಾಗಾಗಿ ನಾನೇ ದುಡಿದು ಮನೆಗೆ ಬರ್ತೀನಿ ಎಂದು ಪತ್ರ ಬರೆದು ಒಂದು ವಾರದ ಹಿಂದೆ ಮನೆ ಬಿಟ್ಟುಹೋದ ಬಾಲಕ `ಭಾರತ್ ಈವರೆಗೆ ಹಿಂದಿರುಗಿಲ್ಲ. ಮೊಮ್ಮಗ ಮನೆ ಬಿಟ್ಟ ದಿನದಿಂದ ಅಜ್ಜ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಬಾಲಕನ ಹುಡುಕಾಡಿ ಹೈರಾಣರಾದ ಕುಟುಂಬ ಕಂಗಾಲಾಗಿದೆ. ಎಲ್ಲೆ ಇದ್ರೂ ಮನೆಗೆ ವಾಪಸ್ ಬಾ ಎಂದು ಕೂಗುತ್ತಿರುವ ಅಜ್ಜನ ಕೊರಗಿನ `ಧ್ವನಿ ಮನಕಲುಕುವಂತಿದೆ.
ಕೆ0ಪಿಸಿದ್ದನಹು0ಡಿ ಗ್ರಾಮದ ಕನಕದಾಸ ಪ್ರೌಢಶಾಲೆಯಲ್ಲಿ `ಭಾರತ್ ಹತ್ತನೇ ತರಗತಿ ವಿಧ್ಯರ್ಥಿ.ಅದೇ ಶಾಲೆಯಲ್ಲಿ ತಾಯಿ ಮಹದೇವಮ್ಮ ಬಿಸಿಯೂಟ ಯೋಜನೆಯಡಿ ಅಡುಗೆ ಸಿಬ್ಬಂದಿ. ತಾಯಿ ಪಡುತ್ತಿರುವ ಪರಿಶ್ರಮಕ್ಕೆ `ಭಾರತ್ ಕಣ್ಣಾರೆ ಕಂಡು ನೊಂದಿದ್ದಾನೆ. ಮನೆ ಬಿಟ್ಟು ಹೋಗುತ್ತಿದ್ದಾನೆ, ಮೈಸೂರಿಗೆ ಹೋಗುತ್ತೇನೆ, ವರ್ಷ ಬಿಟ್ಟು ಬರುತ್ತೇನೆ, ಹುಡುಕೋ ಪ್ರಯತ್ನ ಮಾಡಬೇಡಿ, ನಾನು ನಿಮಗೆ ಸಿಕ್ಕಲ್ಲ, ಎಲ್ಲಿಗೆ ಹೋಗುತ್ತೇನೆ ಗೊತ್ತಿಲ್ಲ, ನನ್ನನ್ನ ಎಲ್ಲರೂ ಕ್ಷಮಿಸಿ,ನನ್ನ ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ, ನಾನು ದುಡಿದು ಮನೆಗೆ ಬರುತ್ತೇನೆ ಬೇಜಾರು ಮಾಡಿಕೋಬೇಡಿ ಎಂದು ಪತ್ರ ಬರೆದ `ಭಾರತ್ ಅಕ್ಟೋಬರ್ 16 ರಂದು ದಸರಾ ರಜೆ ವೇಳೆ ಮನೆ ಬಿಟ್ಟಿದ್ದಾನೆ.
ಸ್ನೇಹಿತರು,ಸಂಭ0ಧಿಕರ ಮನೆಯಲ್ಲಿ ಹುಡುಕಾಡಿದ್ರೂ ಪತ್ತೆಯಾಗಿಲ್ಲ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇ0ಟ್ ದಾಖಲಾಗಿದೆ. ಮೊಮ್ಮಗ ನಾಪತ್ತೆಯಾದ ದಿನ ಹಾಸಿಗೆ ಹಿಡಿದ ಅಜ್ಜ ಮಲ್ಲಯ್ಯ, ಅಜ್ಜಿ ಮಾದಮ್ಮ ಎದ್ದಿಲ್ಲ. ಇಡೀ ಕುಟುಂಬ ಆತಂಕಕ್ಕೆ ಸಿಲುಕಿದೆ. `ಭಾರತ್ ನಾಪತ್ತೆಯಾಗಿ 12 ದಿನಗಳು ಕಳೆದಿದೆ. ನಂಜನಗೂಡು ಗ್ರಾಮಾಂತರ ಪೊಲೀಸರಿಗೂ `ಭಾರತ್ ಸುಳಿವು ಸಿಕ್ಕಿಲ್ಲ. ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ `ಭಾರತ್ ಗಾಗಿ ಕಾತುರದಿಂದ ಎದುರು ನೋಡುತ್ತಿದೆ.