ಗಂಗಮ್ಮಗುಡಿ ರಸ್ತೆ, ಬಜಾರ್ ರಸ್ತೆ ಅಗಲೀಕರಣಕ್ಕೆ ವಿರೋಧ
1 min readಗಂಗಮ್ಮಗುಡಿ ರಸ್ತೆ, ಬಜಾರ್ ರಸ್ತೆ ಅಗಲೀಕರಣಕ್ಕೆ ವಿರೋಧ
ಅಗಲೀಕರಣ ವಿರೋಧಿಸಿ ವರ್ತಕರಿಂದ ಸಭೆ
ಪರ್ಯಾಯ ಮಾರ್ಗಗಳತ್ತ ದೃಷ್ಟಿ ಹರಿಸಲು ಮನವಿ
ಪ್ರಮುಖ ವಾಣಿಜ್ಯ ರಸ್ತೆಗಳ ತೆರುವಿಗೆ ವಿರೋಧ
ಯಾವುದೇ ವಿರೋಧ ಇಲ್ಲದೆ ಎಂಜಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊ0ಡ ಬೆನ್ನಲ್ಲಿಯೇ ಚಿಕ್ಕಬಳ್ಳಾಪುರ ನಗರದ ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆ ಅಗಲೀಕರಣ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಈ ಮಾರ್ಗದಲ್ಲಿ ಅಗಲೀಕರಣ ನಡೆದಲ್ಲಿ ನೂರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದ್ದು, ಇದಕ್ಕೆ ಸಂಸದರೂ ವಿರೋಧಿಸಿದ್ದಾರೆ. ಹಾಗಾಗಿ ಉಭಯ ರಸ್ತೆಗಳ ವರ್ತಕರು ಸೇರಿ ಈ ಸಂಧ0ರ್ಭ ಚರ್ಚೆ ನಡೆಸಿದ್ದಾರೆ.
ಹೌದು, ಗಂಗಮ್ಮಗುಡಿ ರಸ್ತೆ ಮತ್ತು ಬಡಾರ್ ರಸ್ತೆ ಎಂದರೆ ಪ್ರಮುಖ ವಾಣಿಜ್ಯ ರಸ್ತೆಗಳಾಗಿವೆ. ಇದಕ್ಕೆ ಕಾರಣ ಗಂಗಮ್ಮ ಗುಡಿ ರಸ್ತೆಯಲ್ಲಿಯೇ ಚಿನ್ನದ ಅಂಗಡಿಗಳಿದ್ದು, ಪ್ರತಿನಿತ್ಯ ಕೋಟ್ಯಂತರ ರುಪಾಯಿ ವಹಿವಾಟು ನಡೆಯುವುದು ಇದೇ ರಸ್ತೆಯಲ್ಲಿ. ಇಂತಹ ರಸ್ತೆ ಅತ್ಯಂತ ಕಿರಿದಾಗಿದ್ದು, ಇದನ್ನು ಅಗಲೀಕರಣ ಮಾಡಲು ಕಳೆದ ಹಲವು ದಶಕಗಳಿಂದಲೂ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಇದೀಗ ಇನ್ನೇನು ಉಭಯ ರಸ್ತೆಗಳ ಅಗಲೀಕರಣ ನಡೆದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಸಮಸ್ಯೆ ಎದುರಾಗಿದ್ದು, ಇದೀಗ ರಸ್ತೆ ಅಗಲೀಕರಣ ಮತ್ತೆ ನೆನೆಗುದಿಗೆ ಬೀಳುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಎಂಜಿ ರಸ್ತೆ ಅಗಲೀಕರಣ ಯಾವುದೇ ವಿರೋಧ ಇಲ್ಲದೆ ಆರಂಭವಾಗುತ್ತಿದ್ದ0ತೆ, ಗಂಗಮ್ಮ ಗುಡಿ ರಸ್ತೆ ಮತ್ತು ಬಜಾರ್ ರಸ್ತೆಯ ಅಗಲೀಕರಣವೂ ಸುಲಭವಾಗಿಯೇ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಸಂಸದ ಡಾ.ಕೆ. ಸುಧಾಕರ್ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ ಕೂಡಲೇ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಇದೀಗ ರಸ್ತೆ ಅಗಲೀಕರಣ ವಿರೋಧಿಸಿ ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಯ ವರ್ತರ ಸಭೆಯನ್ನು ಭಾನುವಾರ ನಡೆಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಗಜೇ0ರ್ಧರಿದಂತೆ ಹಲವು ವರ್ತಕರು ಸೇರಿದ್ದು, ಈ ಸಂದರ್ಭದಲ್ಲಿ ಈಗಾಗಲೇ ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರ ನೀಡುವಂತೆ ಕೋರ್ಟಿನ ಆದೇಶವಿದ್ದು, ಕಟ್ಟಡಗಳಿಗೆ ಸೂಕ್ತ ಪರಿಹಾರ ನೀಡಿ ನಂತರ ಕಟ್ಟಡಗಳ ತೆರುವು ಮಾಡಬೇಕು ಎಂದು ಕೆಲ ವರ್ತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಬೆಂಗಳೂರಿನ ಚಿಕ್ಕಪೇಟೆ, ಮಾಮೂಲು ಪೇಟೆ ಸೇರಿದಂತೆ ಹಲವು ಪ್ರದೇಶಗಳು ಇದೇ ರೀತಿಯಲ್ಲಿ ಕಿಷ್ಕಿಂಯ0ತೆ ಇದ್ದು, ಈಗಲೂ ಬಿಬಿಎಂಪಿ ಈ ರಸ್ತೆಗಳ ತೆರುವಿಗೆ ಮುಂದಾಗಿಲ್ಲ. ಇದಕ್ಕೆ ಕಾರಣ ಇವು ಪ್ರಮುಖ ವಾಣಿಜ್ಯ ಪ್ರದೇಶಗಳಾಗಿದ್ದು, ಇದನ್ನೇ ನಂಬಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿರುವುದೇ ಆಗಿದೆ ಎಂದು ಹೇಳಿದರು.
ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆ ಮತ್ತು ಬಡಾರ್ ರಸ್ತೆಗಳನ್ನು ಅಗಲೀಕರಣ ಮಾಡದೆ ಬಿಡಬೇಕು ಎಂದು ಕೆಲ ವರ್ತಕರು ಆಗ್ರಹಿಸಿದ್ದಾರೆ. ಸುಮಾರು 400 ಮನೆ ಮತ್ತು ಅಂಗಡಿ ಮಳಿಗೆಗಳು ಈ ಉಭಯ ರಸ್ತೆಗಳಲ್ಲಿ ಇದ್ದು, 3 ಸಾವಿರ ಕುಟುಂಬಗಳು ಇದೇ ಅಂಗಡಿಗಳ ಮೇಲೆಯೇ ಅವಲಂಭಿಸಿದ್ದಾರೆ. ಇಷ್ಟು ಕುಟುಂಬಗಳಿಗೆ ಯಾವುದೇ ಪರ್ಯಾಯ ಮಾರ್ಗ ತೋರಿಸದೆ ಏಕಾಏಕಿ ಕೆಡವಿದಲ್ಲಿ ಈ ಎಲ್ಲ ಕುಟುಂಬಗಳೂ ಬೀದಿಗೆ ಬೀಳುವ ಆತಂಕ ಇದ್ದು, ಪರ್ಯಾಯ ಮಾರ್ಗದ ಮೂಲಕ ಈ ಉಭಯ ರಸ್ತೆಗಳ ತೆರುವು ಕಾರ್ಯಾಚರಣೆ ಕೈ ಬಿಡಬೇಕು ಎಂದು ಕೋರಿದ್ದಾರೆ.
ಗಂಗಮ್ಮ ಗುಡಿ ರಸ್ತೆ ಮತ್ತು ಬಜಡಾರ್ ರಸ್ತೆಗಳನ್ನು ಯಥಾ ಸ್ಥಿತಿ ಕಾಪಾಡಲು ಮತ್ತೊಂದು ಕಾರಣವೆಂದರೆ ಈ ಎ ಡೂ ಮಾರ್ಗದಲ್ಲಿ ನಗರ ದೇವತೆ ಗಂಗಮ್ಮ ದೇವಾಲಯ, ಕೋದಂಡರಾಮ ಸ್ವಾಮಿ ದೇವಾಲಯ, ರಾಮ ದೇವಾಲಯ ಸೇರಿ ಹಲವು ದೇವಾಲಯಗಳಿವೆ. ಇವು ಪುರಾತನ ದೇವಾಲಯಗಳಾಗಿದ್ದು, ಚಿಕ್ಕಬಳ್ಳಾಪುರದ ಇತಿಹಾಸವನ್ನು ಸಾರುತ್ತಿರುವ ಈ ದೇವಾಲಯಗಳನ್ನು ಕೆಡವಿದರೆ ನಗರಕ್ಕೆ ಸರಿಯಲ್ಲ ಎಂಬ ಮಾತುಗಳೂ ವರ್ತಕರಿಂದ ಕೇಳಿಬಂದಿದ್ದು, ಸಂಸದರ ಮೂಲಕ ಉಭಯ ರಸ್ತೆಗಳ ತೆರುವು ಕಾರ್ಯಾಚರಣೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗುವ0ತೆ ಎಲ್ಲ ವರ್ತಕರೂ ಒಕ್ಕೂರಲ ಅಭಿಪ್ರಾಯಕ್ಕೆ ಬಂದಿದ್ದಾರೆ. ಸಭೆಯಲ್ಲಿ ಸಿದ್ದಾಚಾರಿ, ಗಜೇಂದ್ರ, ಕೆ.ವಿ. ಮಂಜುನಾಥ್, ಸುಬ್ಬಾಚಾರಿ, ಯತೀಶ್, ಸಂತೋಷ್, ಗಂಗಾಧರ ಮೂರ್ತಿ, ನಂಜು0ಡರಾಮಯ್ಯ ಶೆಟ್ಟಿ, ಬ್ರಹ್ಮಚಾರಿ ಸೇರಿದಂತೆ ಇತರರು ಇದ್ದರು.