ಚಿಕ್ಕಬಳ್ಳಾಪುರ ಕ್ಷೇತ್ರದ ಮಾಹಿತಿ ಶಾಸಕರ ಬೆರಳ ತುದಿಯಲ್ಲಿ
1 min readಚಿಕ್ಕಬಳ್ಳಾಪುರ ಕ್ಷೇತ್ರದ ಮಾಹಿತಿ ಶಾಸಕರ ಬೆರಳ ತುದಿಯಲ್ಲಿ
ಕಮ್ಮಗುಟ್ಟಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕರ ಪರ್ಯಟನೆ
ನಮ್ಮ ಊರಿಗೆ ನಮ್ಮ ಶಾಸಕರು ಎಂಬ ಹೆಸರಿನಲ್ಲಿ ಪ್ರತಿ ಹಳ್ಳಿಗೂ ಅಧಿಕಾರಿಗಳ ಜೊತೆ ಶಾಸಕ ಪ್ರದೀಪ್ ಈಶ್ವರ್ ಭೇಟಿ ಕೊಟ್ಟು, ಅ ಗ್ರಾಮದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಕೊಡಿಸುವ ಕೆಲಸ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿನೂತನ ಕಾರ್ಯಕ್ರಮ ನಮ್ಮ ಊರಿಗೆ ನಮ್ಮ ಶಾಸಕರು ಪಂಚಾಯತಿಗೆ ಸೇರುವ ಎಲ್ಲಾ ಹಳ್ಳಿಗಳಿಗೆ ಖುದ್ದಾಗಿ ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು `ಭೇಟಿ ಕೊಟ್ಟು ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಉದಗಿರಿ ನಲ್ಲಪ್ಪನಹಳ್ಳಿ, ರಾಮಪಟ್ಟಣ, ಅರ್. ಕಂಬಾಲಹಳ್ಳಿ ಗ್ರಾಮಗಳಿಗೆ `ಭೇಟಿ ಕೊಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೆ ಸ್ಪಂದಿಸುವ ಕೆಲಸ ಶಾಸಕರು ಮಾಡಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಅವರು ನೂತನ ಅ್ಯಪ್ ಮಾಡಿದ್ದು, ಚಿಕ್ಕಬಳ್ಳಾಪುರದ ಸಂಪೂರ್ಣ ಜನರ ಮಾಹಿತಿ ಇದರಲ್ಲಿದೆ. ಈ ಡೇಟಾಗಾಗಿ ಕಳೆದ ಎಂಟು ತಿಂಗಳಿAದ ಕೆಲಸ ಮಾಡಿದ್ದು, ಈಗ ಅ ಡೇಟಾ ಅ್ಯಪ್ ಮೂಲಕ ನೋಡ ಬಹುದಾಗಿದೆ. ಯಾವ ಊರಲ್ಲಿ ಎಷ್ಟು ಜನ ಇದ್ದಾರೆ. ಏನೆಲ್ಲಾ ಕೆಲಸ ಮಾಡುತ್ತಿದ್ದಾರೆ. ಊರಲ್ಲಿ ಏನ್ ಮಾಡ್ತಾ ಇದ್ದಾರೆ ಎಂಬುದು ಸಂಪೂರ್ಣ ಮಾಹಿತಿ ನನ್ನ ಬೆರಳ ತುದಿಯಲ್ಲಿ ಕಾಣ ಬಹುದಾಗಿದೆ ಎಂದರು.
ಪ್ರತಿ ಹಳ್ಳಿಯಲ್ಲಿ ಗ್ರಾಮಸ್ಥರು ಶಾಸಕ ಪ್ರದೀಪ್ ಈಶ್ವರ್ ಅವರನ್ನು ಪಟಾಕಿ ಸಿಡಿಸಿ, ಹೂಮಾಲೆ ಹಾಕಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ಮಂಚೇನಹಳ್ಳಿ ತಾಲೂಕು ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.