ಕನ್ನಡ ಕಾಯಕ ದತ್ತಿ ಪ್ರಶಸ್ತಿಗೆ ಜಿ. ಬಾಲಾಜಿ ಆಯ್ಕೆ
1 min readಕನ್ನಡ ಕಾಯಕ ದತ್ತಿ ಪ್ರಶಸ್ತಿಗೆ ಜಿ. ಬಾಲಾಜಿ ಆಯ್ಕೆ
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿ
ಹಲವು ದಶಕಗಳಿಂದ ಸತತ ಕನ್ನಡ ಸೇವೆ ಮಾಡುತ್ತಿರುವ ವ್ಯಕ್ತಿಯನ್ನು ಗುರ್ತಿಸುವಲ್ಲಿ ಕೊನೆಗೂ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದ್ದು, ಗಡಿಯಲ್ಲಿ ಕನ್ನಡ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದ ಬಾಲಾಜಿ ಅವರಿಗೆ ಈ ಬಾರಿಯ ಕನ್ನಡ ಕಾಯಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಗೌರಿಬಿದನೂರಿನ ಬಾಲಾಜಿ ಅವರು ಕಳೆದ 25 ವರ್ಷಗಳಿಂದ ಅನನ್ಯ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಗಡಿ ನಾಡಲ್ಲಿ ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ರಾಜ್ಯೋತ್ಸವ ಜಿಲ್ಲೆಯಾದ್ಯಂತ ಹೆಸರಾಗಿದೆ. ಗಡಿ ನಾಡಿನಲ್ಲಿ ಕನ್ನಡ ನುಡಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಅವರಿಗೆ ಪ್ರಶಸ್ತಿ ಬಂದಿರುವುದು ಅರ್ಹರಿಗೆ ಸಂದ ಗೌರವವಾಗಿದೆ. ಅವರ ಕನ್ನಡ ಸೇವೆ ನಿರಂತರವಾಗಿ ಮುಂದುವರಿಲಿ ಎಂದು ಗಣ್ಯರು ಹಾರೈಸಿದ್ದಾರೆ.
ಗಡಿ ತಾಲೂಕು ಆಗಿರುವ ಗೌರಿಬಿದನೂರು ಆಂಧ್ರದ ಗಡಿಗೆ ಹೊಂದಿಕೊ0ಡಿದೆ. ತೆಲುಗು ಪ್ರಭವವಿರುವ ಪ್ರದೇಶವಾಗಿದೆ. ಇಲ್ಲಿ ನಿರಂತರ ಕನ್ನಡ ಪರ ಚಟುವಟಿಕೆಗಳನ್ನು ನಡೆಸುವ ಮೂಲಕ ಜನರಲ್ಲಿ ಕನ್ನಡ ನಾಡು, ನುಡಿ, ನೆಲ ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಾಲಾಜಿ ಮಾಡುತ್ತಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಕನ್ನಡಿಗರ ಪರ ಎತ್ತುವ ಕೆಲಸ ಮಾಡುತ್ತಿದ್ದಾರೆ.
ಜಿ.ಬಾಲಾಜಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ತನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಮತ್ತಷ್ಟು ಕನ್ನಡ ಸೇವೆ ಸಲ್ಲಿಸಲು ಪ್ರೇರಣೆ ಸಿಕ್ಕಂತಾಗಿದೆ. ಗಡಿನಾಡಿನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ಜೊತೆಗೆ ಕನ್ನಡ ಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತೇನೆ ಎಂದರು.