ಬಿಎಸ್‌ಎಫ್ ಯೋಧರ ಬೀಳ್ಕೊಡುಗೆ ಪಥಸಂಚಲನ
1 min readಬಿಎಸ್‌ಎಫ್ ಯೋಧರ ಬೀಳ್ಕೊಡುಗೆ ಪಥಸಂಚಲನ
ಯಲಹ0ಕದ ಬಿಎಸ್ ಎಫ್ ಕ್ಯಾಂಪಸ್‌ನಲ್ಲಿ ಬೀಳ್ಕೊಡುಗೆ
ಪರಿಶ್ರಮ ಮತ್ತು ಸಾಧನೆಯಿಂದ ದೇಶದ ಗಡಿ ಕಾಯಲು ಸಜ್ಜಾದ ಬಿಎಸ್‌ಎಫ್ ಯೋಧರ ಪಥಸಂಚಲನ ಉತ್ತಮವಾಗಿ ಮೂಡಿಬಂದಿದ್ದು, ಯಲಹಂಕ ಬಿಎಸ್‌ಎಫ್ ತರಬೇತಿ ಕೇಂದ್ರದಲ್ಲಿ ನೂತನ ಬಿಎಸ್‌ಎಫ್ ಯೋಧರ ನಿರ್ಗಮನ ಪಥ ಸಂಚಲನ, ಸಂಭ್ರಮದಿ0ದ ನಡೆಯಿತು.
ಯಲಹಂಕದ ಬಿಎಸ್ ಎಫ್ ಕ್ಯಾಂಪಸ್‌ನಲ್ಲಿ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ವಿವಿಧ ಹಂತಗಳಲ್ಲಿ ತರಬೇತಿ ಪಡೆದ ಬ್ಯಾಚ್ ನಂ 600. 601ರ 464 ಯೋಧರು ಸೇವೆ ಸಲ್ಲಿಸಲು ಗಡಿಗೆ, ನಿಯೋಜನೆಗೊಂಡು ಸಮಾರೋಪ ಸಮಾರಂಭ ಯಲಹಂಕದ ತರಬೇತಿ ಕೇಂದ್ರದಲ್ಲಿ ನಡೆಯಿತು. ಭಾರತದ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲು 464 ನೂತನ ಯೋಧರು ಸನ್ನದ್ದರಾಗಿ ನುರಿತ ತರಬೇತಿಯೊಂದಿಗೆ ದೇಶ ಕಾಯಲು ಹೊರಟ ಯೋಧರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಬಿಎಸ್ ಎಫ್ ಐಜಿ ಆಫಿಸರ್ ಮುಖೇಶ್ ತ್ಯಾಗಿ ನೇತೃತ್ವದಲ್ಲಿ ನಿರ್ಗಮನ ಪಥ ಸಂಚಲನ, ಅದ್ದೂರಿಯಾಗಿ ನಡೆಯಿತು. ಬಿಎಸ್‌ಎಫ್ ಐಜಿ ಮುಖೇಶ್ ತ್ಯಾಗಿ ಮಾತನಾಡಿ, ದೇಶದ ಗಡಿ ಕಾಯುವುದು ಸುಲಭದ ಕೆಲಸವಲ್ಲ, ರಾತ್ರಿ ಹಗಲು ಎನ್ನದೆ ದೇಶ ಕಾಯುವ ಯೋಧ ದೇಶದ ಬೆನ್ನೆಲುಬು ದೇಶದೊಳಗೆ ದೇಶದ ಗಡಿ ಕಾಯುವ ಯೋಧ ದೇಶದ ಬೆನ್ನೆಲುಬು ಎಂದು ಹೇಳಿದರು. ತರಬೇತಿ ನೀಡಿದ ಪ್ರಶಿಕ್ಷಣಾರ್ಥಿಗಳನ್ನು ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.