ಸಮಸ್ಯೆಗಳ ಸುಳಿಯಲ್ಲಿ ಬಾಗೇಪಲ್ಲಿಯ ಸಂಪ0ಗಿ ನಗರ ನಿವಾಸಿಗಳು
1 min readಸಮಸ್ಯೆಗಳ ಸುಳಿಯಲ್ಲಿ ಬಾಗೇಪಲ್ಲಿಯ ಸಂಪ0ಗಿ ನಗರ ನಿವಾಸಿಗಳು
ಅಭದ್ರವಾದ ಬದುಕು, ಅಡಕತ್ತರಿಯಲ್ಲಿ ನಿತ್ಯ ಪರದಾಟ
ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊ0ಡ0ತೆ ಎರಡು ದಶಕಗಳ ಹಿಂದೆ ಆಗಿನ ಶಾಸಕ ಎನ್ ಸಂಪ0ಗಿ ಅಧಿಕಾರವಧಿಯಲ್ಲಿ ನಿವೇಶನರಹಿತ ಬಡವರಿಗೆ ಉಚಿತ ನಿವೇಶನಗಳನ್ನು ವಿತರಿಸಲಾಗಿತ್ತು. ಅಲ್ಲಿನ ಲಾನುಭಾವಿಗಳು ಆ ಬಡಾವಣೆಗೆ ಅವರ ಹೆಸರನ್ನೆ ಇಟ್ಟಿದ್ದಾರೆ. ಎನ್. ಸಂಪ0ಗಿ ನಗರ ಎಂದು ಕರೆಯಲಾಗುತ್ತಿದ್ದು, ಅಲ್ಲಿನ ನಿವಾಸಿಗಳು ಮೂಲ ಸೌಲಭ್ಯಗಳಿಲ್ಲದೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊ0ಡಿದ್ದರೂ ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೇ ಹೋಗಬೇಕಿದೆ. ನಿತ್ಯ ಬಳಕೆಗೆ ಕೊಳವೆಬಾವಿ ಕೊರೆಸಿದ್ದರೂ ಗಬ್ಬು ವಾಸನೆ ನೀರು ಬರುತ್ತಿದ್ದು, ಅದನ್ನೇ ಸೇವಿಸುವ ಸಂಕಷ್ಟ ಎದುರಾಗಿದೆ. ಇರುವ ಏಕ ಮಾತ್ರ ಬೀದಿಯ ರಸ್ತೆಯ ನಿರ್ಮಾಣ ಮಾಡಲಾಗಿಲ್ಲ, ಹಾಗಾಗಿ ಚರಂಡಿ ಇಲ್ಲವೇ ಇಲ್ಲ. ಕೊಳಚೆ ನೀರು ಮನೆಗಳ ಮುಂದೆಯೇ ಮಡುಗಟ್ಟುವ ಪರಿಸ್ಥಿತಿ, ಮನೆಗಳ ಸುತ್ತಲೂ ದಟ್ಟ ಪೊದೆಗಳು ತುಂಬಿವೆ.
ಅಲ್ಲಿನ ನಾಗರಿಕರು ಸೊಳ್ಳೆಗಳ ಕಾಟ, ಹಾವು ಚೇಳುಗಳು ಬರುವ ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬ0ಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವು ತೋಡಿಕೊಳ್ಳುತ್ತಾರೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗದವರಾಗಲಿ ಸಮಸ್ಯೆಗಳನ್ನು ಪರಿಹರಿಹರಿಸಲು ಯಾವುದೇ ಕ್ರಮ ಜರುಗಿಸಿಲ್ಲ. ಕೊಳವೆಬಾವಿ ಕೆಟ್ಟರೂ, ಬೀದಿ ದೀಪ ಸರಿ ಪಡಿಸಬೇಕಾದರೂ ಅಲ್ಲಿನ ನಿವಾಸಿಗಳು ಸ್ವಂತ ಖರ್ಚಿನಲ್ಲೆ ದುರಸ್ತಿ ಪಡಿಸಬೇಕಾದ ಸ್ಥಿತಿ ಎದುರಾಗಿದೆ.
ಈ ಬಡಾವಣೆ ನಿವಾಸಿಗಳು ಘಂಟಮವಾರ0ಪಲ್ಲಿ ಗ್ರಾಮ ಪಂಚಾಯತಿ ಮತ್ತು ಪುರಸಭೆಗಳ ನಡುವಿನ ಗೊಂದಲಗಳ ನಡುವೆ ಬಲಿಪಶುಗಳಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಅಸಹಾಯಕತೆ ತೋಡಿಕೊಂಡಿದ್ದು, ನಾವು ನಿತ್ಯವೂ ಹಾವು,ಚೇಳುಗಳು ಬರುವ ಭೀತಿಯಲ್ಲಿ ಮಕ್ಕಳನ್ನು ಬೀದಿಗೆ ಬಿಡಬೇಕಾಗುತ್ತದೆ. ಬೀದಿಯಲ್ಲಿ ಸಮರ್ಪಕವಾಗಿ ಚರಂಡಿ ಇಲ್ಲ ಹಾಗೂ ರಸ್ತೆಯ ನಿರ್ಮಾಣವೂ ಇಲ್ಲ. ಮನೆಗಳ ಸುತ್ತಲೂ ಮುಳ್ಳಿನ ಪೊದೆಗಳಿವೆ. ಕತ್ತಲಿನಲ್ಲಿ ಓಡಾಡಬೇಕಾದರೆ ಆತಂಕವಾಗಿದೆ ಎಂದು ಅಳಲು ತೋಡಿಕೊಂಡರು.
ಈ ಬಡಾವಣೆ ನಿವಾಸಿಗಳ ಮಕ್ಕಳು ಓದಬೇಕಾದರೆ, ಗರ್ಭಿಣಿ ಮಹಿಳೆಯರು ಸೌಲಭ್ಯ ಪಡೆಯಬೇಕಾದರೂ ಪರಿತಪಿಸಬೇಕಾಗಿದೆ. ಅಂಗನವಾಡಿಯಾಗಲಿ, ಶಾಲೆಯಾಗಲಿ ಇಲ್ಲ. ಎಲ್ಲ ರೀತಿಯಲ್ಲೂ ಅಲ್ಲಿನ ಜನರು ಅನಾಮಿಕರಂತೆ ಬದುಕುತ್ತಿದ್ದಾರೆ. ಪಟ್ಟಣದ ಸಮೀಪದಲ್ಲಿ ದ್ದರೂ, ದೀಪದ ಕೆಳಗೆ ಕತ್ತಲು ಎಂಬ0ತೆ ಆ ಕತ್ತಲಿನ ಕೂಪದಲ್ಲಿ ಬದುಕು ಕಟ್ಟಿಕೊಂಡಿದ್ದೆರೆ. ಇನ್ನಾದರೂ ಸಂಬ0ಧಪಟ್ಟವರು ಕಣ್ತೆರುವರೆ ಎಂದು ನೋಡಬೇಕಾಗಿದೆ.
ಈ ಕುರಿತು ಸ್ಥಳೀಯ ನಿವಾಸಿ ರಾಮು ಮಾತನಾಡಿ, ನಾವು ಪುರಸಭೆ ಮತ್ತು ಘಂಟಮವಾರಪಲ್ಲಿ ಗ್ರಾಮ ಪಂಚಾಯಿತಿಗಳ ನಡುವಿನ ತಿಕ್ಕಾಟದಲ್ಲಿ ಅತಂತ್ರದಲ್ಲಿದ್ದೆವೆ. ಎರಡೂ ಕಡೆ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಕೇಳಿಕೊಂಡಿದ್ದೆವೆ. ಮನವಿ ಪತ್ರಗಳನ್ನು ಸಲ್ಲಿಸಿದ್ದೆವೆ. ಆದರೆ ವರ್ಷಗಳು ಉರುಳಿದರೂ ಸಮಸ್ಯೆಗಳು ಪರಿಹಾರವಾಗಿಲ್ಲ ಎಂದು ನೋವು ತೋಡಿಕೊಂಡರು.