ಕೆರೆ ತುಂಬಿಸಲು ದೇವರೆಡ್ಡಿಪಲ್ಲಿ ಗ್ರಾಮಸ್ಥರ ಭಗೀರಥ ಪ್ರಯತ್ನ
1 min readಕೆರೆ ತುಂಬಿಸಲು ದೇವರೆಡ್ಡಿಪಲ್ಲಿ ಗ್ರಾಮಸ್ಥರ ಭಗೀರಥ ಪ್ರಯತ್ನ
ಯಂತ್ರ, ಶ್ರಮದಾನದ ಮೂಲಕ ಕಾಲುವೆ ಸರಿಪಡಿಸಲು ಶ್ರಮ
ಬಾಗೇಪಲ್ಲಿ ತಾಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮಸ್ಥರ ಪ್ರಯತ್ನ
ನೀರಾವರಿಗಾಗಿ ನದಿಗಳಿಂದ ನೀರು ಹೊಲಗಳಿಗೆ ತಿರುಗಿಸಲು ನಿರ್ಮಿಸಲಾದ ಮಾನವ ನಿರ್ಮಿತ ಜಲಮಾರ್ಗವಾಗಿ ಕಾಲುವೆಗಳಿವೆ. ಇದರ ಉದ್ದೇಶ ನೀರಿನ ಸಾಗಣೆ. ಪೋಷಕ ಕಾಲುವೆಗಳನ್ನು ಕೆರೆಗೆ ಮಳೆ ನೀರು ಹರಿದು ಹೋಗುವ ಉದ್ದೇಶದಿಂದ ನಿರ್ಮಿಸಲಾಗಿತ್ತು. ನಿರ್ವಹಣೆ ಕೊರತೆವಾಗಿ ಉದ್ದೇಶ ಮರೆಯಾಗಿದ್ದು, ಕಾಲುವೆಗಳು ಒತ್ತುವರಿಗೆ ಗುರಿಯಾಗಿವೆ.
ಹರಿದು ಹೋಗುವ ನೀರು ಕೆರೆಗೆ ಹರಿಯುವಂತೆ ಮಾಡಲು ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿನಲ್ಲಿ ಗ್ರಾಮಸ್ಥರು ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಸಿದ ಭಗೀರತ ಪ್ರಯತ್ರ ನೀಡಿದೆ. ನೀರು ಕೆರೆಗೆ ಬರಲು ಪ್ರಾರಂಭವಾಗಿದ್ದು, ಕೆರೆ ತುಂಬುವ ಕನಸಿನಲ್ಲಿ ಗ್ರಾಮಸ್ಥರಿದ್ದಾರೆ. ದೇವರೆಡ್ಡಿಪಲ್ಲಿಯ ಮಂಗಸ0ದ್ರ ಕೆರೆಗೆ ಗುಡಿಬಂಡೆ ತಾಲ್ಲೂಕಿನ ಲಕ್ಕೇಣಹಳ್ಳಿ ಸಮೀಪದ ಕುಶಾವತಿ ನದಿಯಿಂದ ಸುಮಾರು 7 ಕಿ.ಮೀ ಉದ್ದದ ರಾಜ ಕಾಲುವೆ ನಿರ್ಮಿಸಲಾಗಿದೆ. ಗುಡಿಬಂಡೆ ಆಮಾನಿರಸಾಗರ ಕೆರೆ ಕೋಡಿ ಹರಿದು ಕುಶಾವತಿ ನದಿಯಲ್ಲಿ ನೀರು ಹರಿಯುತ್ತಿರುವುದು ದೇವರೆಡ್ಡಿಪಲ್ಲಿ ಗ್ರಾಮಸ್ಥರಲ್ಲಿ ಕೆರೆ ತುಂಬಿಸಿಕೊಳ್ಳುವ ಆಸೆ ಚಿಗುರಿಸಿತ್ತು.
ನಿರ್ವಹಣೆ ಇಲ್ಲದೆ ಉದ್ದದ ಕಾಲುವೆ ಎಲ್ಲಾ0ದರಲ್ಲಿ ಕಿತ್ತುಹೋಗಿದ್ದು, ನದಿಯಿಂದ ಕೆರೆಗೆ ನೀರು ಹರಿಸುವುದು ಸುಲಭದ ವಿಚಾರವಲ್ಲ. ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ0ತೆ 2 ಜೆಸಿಬಿ ಯಂತ್ರಗಳ ಜೊತೆಗೆ ಗ್ರಾಮದ 30 ಜನರು ಕಳೆದ ಒಂದು ವಾರದಿಂದ ರಾಜಕಾಲುವೆ ದುರಸ್ತಿ ಮಾಡುವ ಕಾರ್ಯದಲ್ಲಿ ಸತತವಾಗಿ ತೊಡಗಿದ್ದು, ಬಹುತೇಕ ಯಶಸ್ಸು ಕಂಡಿದ್ದಾರೆ.
ನಿರ್ವಹಣೆ ಇಲ್ಲದೆ ಪಾಲು ಬಿದ್ದ ಕಾಲುವೆಯಲ್ಲಿ ಗಿಡ-ಗಂಟಿ, ಜಾಲಿ-ಪೊದೆಗಳು, ಜೊಂಡು ಹುಲ್ಲು ಬೆಳೆದು ಕಾಲುವೆಯಲ್ಲಿ ಕಲ್ಲು-ಮಣ್ಣು ತುಂಬಿಕೊ0ಡಿದ್ದು, ಮೇಲ್ಬಾಗದಿಂದ ಕೆಳಭಾಗಕ್ಕೆ ನೀರು ಹರಿಯುವುದು ಕಷ್ಟಸಾಧ್ಯದ ವಿಷಯವಾಗಿತ್ತು. ಇದನ್ನು ಜೆಸಿಬಿ ಯಂತ್ರಗಳು ಮತ್ತು ಶ್ರಮದಾನದ ಮೂಲಕ ಸರಿಪಡಿಸಲಾಗಿದೆ. 300 ಮೀಟರ್ ಉದ್ದ 20 ಅಡಿ ಆಳ ಇರುವ ಒಂದು ಕಡೆಯಂತೂ ಕಾಲುವೆ ರಿಪೇರಿ ಅಸಾಧ್ಯದಂತೆ ಕಂಡುಬ0ದಿತ್ತು, ಜೆಸಿಬಿ ಇಳಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಶ್ರಮದಾನದ ಮೂಲಕ ಕೆಲಸ ಮಾಡಲಾಗಿದೆ.
ಮೇಲ್ಬಾಗದಲ್ಲಿ ಕಾಲುವೆ ರಿಪೇರಿ ಮಾಡಿದಂತೆಲ್ಲೆ ಸಿಕ್ಕ ಸಿಕ್ಕ ಕಡೆ ಕಿತ್ತುಕೊಂಡು ಹೋಗಿ ದ್ವಿಗಡದ ಮರು ತು ಸಂತರೂ ನೀರು ನದಿಗೆ ವ್ಯರ್ಥವಾಗಿ ಹರಿಯುತ್ತಿತ್ತು. ಆದರೂ ಮಾಡಿದಲವಾಗಿ ರಾಜಕಾಲುವೆ ತಾತ್ಕಾಲಿಕ ರಿಪೇರಿ ನದಿಯಿಂದ ಕೆರೆಗೆ ನೀರು ಹರಿಯಲು ಆರಂಭಿಸಿದೆ. ದೊಡ್ಡ ಪ್ರಮಾಣದಲ್ಲಿ ಕಾಲುವೆಯಲ್ಲಿ ಹರಿಸುವ ಗ್ರಾಮಸ್ಥರ ನಿರೀಕ್ಷೆ ಸಾಧ್ಯವಾಗಿಲ್ಲ. ಹೆಚ್ಚಿನ ನೀರು ಹರಿದರೆ ಕಾಲುವೆ ಕಂಡ-ಕ0ಡಲ್ಲಿ ಕಿತ್ತುಹೋಗುತ್ತಿರುವುದು ಇದಕ್ಕೆ ಕಾರಣ ಶ್ರಮದಾನಕ್ಕೆ ದೊರೆತಲವಾಗಿದೆ.
ಗ್ರಾಮದ ಕೆರೆಯನ್ನು ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ದೇವರೆಡ್ಡಿಪಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಲುವೆ ರಿಪೇರಿಗಾಗಿ ಜೆಸಿಬಿ ಯಂತ್ರ ಕಳುಹಿಸುವ ಮೂಲಕ ಗ್ರಾಮಸ್ಥರ ಕಾರ್ಯಕ್ಕೆ ಸಾಥ್ ನೀಡಿದ್ದು, ವಿಶೇಷವಾಗಿದೆ. ಚುನಾವಣೆ ಸಂದರ್ಭದ ರಾಜಕೀಯಗಳು ಏನೇ ಇರಲಿ ಊರಿನ ವಿಚಾರ ಬಂದಾಗ ಗ್ರಾಮಸ್ಥರು ಇಂತಹ ಒಗ್ಗಟ್ಟು ಪ್ರದರ್ಶನ ಮಾಡಬೇಕಾದ ಅಗತ್ಯವಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ಅಮೂಲ್ಯ ಜಲಸಂಪತ್ತನ್ನು ರಕ್ಷಿಸಿಕೊಳ್ಳಬೇಕಾಗಿರುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಅದನ್ನು ದೇವರೆಡ್ಡಿಪಲ್ಲಿ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ.
ಇನ್ನು ಕೆರೆ ತುಂಬಿಸಿಕೊಳ್ಳಲು ಗ್ರಾಮಸ್ಥರು ಹೀಗೆ ಹರ ಸಾಹಸ ಪಡುತತಿದ್ದರೆ, ಕೆಲ ಕುತಂತ್ರಿಗಳು ಇದಕ್ಕೂ ಕಲ್ಲು ಹಾಕುವ ಕೆಲಸ ಮಾಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕರ ನೆರವು ಮತ್ತು ಗ್ರಾಮಸ್ಥರ ಶ್ರಮದಾನದಿಂದ ವ್ಯರ್ಥವಾಗಿ ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದ್ದ ಕುಶಾವತಿ ನದಿ ನೀರು ಕೆರೆಗೆ ತಿರುಗಿಸುವಲ್ಲಿ ಯಶಸ್ವಿಯಾಗಿದ್ದರೆ, ಹಲವು ಕಿಡಿಗೇಡಿಗಳು ಕಾಲುವೆ ಕತ್ತರಿಸಿ, ನೀರು ಪೋಲಾಗುವಂತೆ ಮಾಡುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ರೈತರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿದ್ದು, ಕೆರೆ ತುಂಬಿದರೆ ತಾವು ಒತ್ತುವರಿ ಮಾಡಿರುವ ಜಮೀನಿನ ಬೆಳೆ ಮುಳುಗಡೆಯಾಗಲಿದೆ ಎಂಬ ಆತಂಕದಿ0ದ ಕೆರೆಗೆ ಹರಿಯುತ್ತಿರುವ ನೀರು ತಿರುಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಅಲ್ಲದೆ ಕಾಲುವೆ ಮಾರ್ಗದಲ್ಲಿರುವ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಗಿ ಎಹರಿಸಲೂ ಕಾಲುವೆಯಿಂದ ನೀರು ತಿರುಗಿಸುವ ಕೆಲಸಕ್ಕೆ ಮುಂದಾಗಿದ್ದು, ಇಂತಹವರ ವಿರುದ್ಧ ದೇವಿರೆಡ್ಡಿಪಲ್ಲಿ ಗ್ರಾಮಸ್ಥರು ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.